ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ
ಮೈಸೂರು

ಅಖಿಲ ಭಾರತ ಅಂಚೆ ಕ್ರೀಡಾಕೂಟದಲ್ಲಿ 220 ಸ್ಪರ್ಧಿಗಳು ಭಾಗಿ

November 15, 2019

ಮೈಸೂರು,ನ.14(ಎಂಟಿವೈ)-ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಗುರುವಾರ ಆರಂಭ ವಾದ ಮೂರು ದಿನಗಳ 34ನೇ `ಅಖಿಲ ಭಾರತ ಅಂಚೆ ಅಥ್ಲೆಟಿಕ್ಸ್ ಮತ್ತು ಸೈಕ್ಲಿಂಗ್’ ಪಂದ್ಯಾವಳಿಯಲ್ಲಿ ದೇಶದ ವಿವಿಧ ರಾಜ್ಯಗಳ 220ಕ್ಕೂ ಹೆಚ್ಚು ಕ್ರೀಡಾ ಪಟುಗಳು ಪಾಲ್ಗೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿಯ ಪ್ರದರ್ಶನ ನೀಡಿದರು.

ಕರ್ನಾಟಕ ವೃತ್ತ ಅಂಚೆ ಕ್ರೀಡಾ ಮಂಡಳಿ (ಬೋರ್ಡ್) ಆಯೋಜಿಸಿದ್ದ 34ನೇ ಅಖಿಲ ಭಾರತ ಅಂಚೆ ಸೈಕ್ಲಿಂಗ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಇಂದು ಬೆಳಿಗ್ಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸಾಂಸ್ಕøತಿಕ ಹಾಗೂ ಪಾರಂ ಪರಿಕ ನಗರಿಯಾಗಿರುವ ಮೈಸೂರಿನಲ್ಲಿ ಅಂಚೆ ಇಲಾಖೆ ಸಿಬ್ಬಂದಿಗಳ ರಾಷ್ಟ್ರಮಟ್ಟದ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಉತ್ತಮ ಸೇವೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿರುವ ಅಂಚೆ ಇಲಾಖೆ ತನ್ನ ಸಿಬ್ಬಂದಿಗಳಿಗೆ ಕ್ರೀಡಾ ಕೂಟ ಆಯೋಜಿಸುವ ಕಾಳಜಿ ಪ್ರದರ್ಶಿಸುತ್ತಿರು ವುದು ಮೆಚ್ಚುಗೆ ಸಂಗತಿ. ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕ್ರೀಡೆ ಹಾಗೂ ದೈಹಿಕ ಕಸರತ್ತು ನಡೆಸುವುದು ಅಗತ್ಯ. ಕ್ರೀಡಾ ಚಟುವಟಿಕೆ ಯಲ್ಲಿ ಪಾಲ್ಗೊಂಡರೆ ಆರೋಗ್ಯ ಕಾಪಾಡಿಕೊಳ್ಳಬ ಹುದು. ಅಂಚೆ ನೌಕರರು ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರಿಂದ ಒತ್ತಡ ನಿವಾರಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡಿರುವ ಎಲ್ಲಾ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಮೈಸೂರು ಯದುವಂಶ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ. ಇದರಿಂದಲೇ ಬೆಂಗಳೂರಿ ನಲ್ಲಿ ಕಂಠೀರವ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿರುವ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿರುವುದಾಗಿ ತಿಳಿಸಿದ ರಲ್ಲದೆ, ಸ್ಪರ್ಧಾತ್ಮಕ ಯುಗದಲ್ಲೂ ಅಂಚೆ ಇಲಾಖೆ ಉತ್ತಮ ಸೇವೆ ನೀಡುತ್ತಿದೆ ಎಂದು ಶ್ಲಾಘಿಸಿದರು.

ಕ್ರೀಡಾಕೂಟದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಮ್, ಗುಜರಾತ್, ಹರಿಯಾಣ, ಕೇರಳ, ಮಹಾ ರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ತಾನ, ತಮಿಳು ನಾಡು, ತೆಲಂಗಾಣ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು ದೇಶದ 15 ಅಂಚೆ ವೃತ್ತಗಳಿಂದ 220 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ನ.16 ರವರೆಗೆ ನಡೆಯುವ ಕ್ರೀಡಾಕೂಟದಲ್ಲಿ 100 ಮೀ., 200 ಮೀ, 400 ಮೀ., 800 ಮೀ., 1500 ಮೀ., 3000 ಮೀ., 5000 ಮೀ., 10,000 ಮೀ., 20 ಸಾವಿರ ಮೀ ಓಟ, ಗುಂಡು ಎಸೆತ, ಎತ್ತರ ಜಿಗಿತ, ಉದ್ದ ಜಿಗಿತ, ಡಿಸ್ಕಸ್ ಥ್ರೋ, ಜಾವೆಲಿನ ಥ್ರೋ, ಹ್ಯಾಮರ್ ಥ್ರೋ, ಟ್ರಿಪಲ್ ಜಂಪ್, 4*400 ರಿಲೇ ಸೇರಿದಂತೆ ಇನ್ನಿತರ ಕ್ರೀಡಾಚಟುವಟಿಕೆಗಳಲ್ಲಿ ಪುರುಷ ಹಾಗೂ ಮಹಿಳಾ ಪಟುಗಳು ಪಾಲ್ಗೊಳ್ಳಲಿದ್ದಾರೆ. ರಾಜ್ಯಮಟ್ಟ ದಲ್ಲಿ ನಡೆದ ಕ್ರೀಡಾಕೂಟದಲ್ಲಿ ಸ್ಪರ್ಧಿಸಿ ಗೆದ್ದಿರುವ ಕ್ರೀಡಾಪಟುಗಳೇ ಈ ಕ್ರೀಡಾಕೂಟದಲ್ಲಿ ಭಾಗಿಯಾಗಿ ದ್ದಾರೆ. ಗುರುವಾರ ನಡೆದ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಕರ್ನಾಟಕ ವೃತ್ತ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾಲ್ರ್ಸ್ ಲೋಬೋ, ವಿವಿಧ ವಿಭಾಗಗಳ ಜನರಲ್ ಮ್ಯಾನೇಜರ್‍ಗಳಾದ ಅರವಿಂದ ಶರ್ಮಾ, ಸ್ವಪ್ನ ಪ್ರಮೋದ್, ಎಸ್.ರಾಜ್‍ಕುಮಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »