ನಾಳೆ ಸುಧಾ ರಘುನಾಥನ್ ಸಂಗೀತ ಕಛೇರಿ
ಮೈಸೂರು

ನಾಳೆ ಸುಧಾ ರಘುನಾಥನ್ ಸಂಗೀತ ಕಛೇರಿ

November 15, 2019

ಮೈಸೂರು,ನ.14(ಆರ್‍ಕೆಬಿ)-ಗೀತಾ ಶಿಶು ಶಿಕ್ಷಣ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪೆÇ್ರ.ಬಿ.ಎಸ್.ಪಂಡಿತ್ ಸ್ಮರಣಾರ್ಥ ನ.16ರಂದು ಸಂಜೆ 6 ಗಂಟೆಗೆ ಕೆ.ಆರ್.ಎಸ್.ರಸ್ತೆಯ ಜಿಎಸ್‍ಎಸ್‍ಎಸ್‍ನ ರಂಗ ಮಂಟಪದಲ್ಲಿ `ಸರಸ್ವತಿ’ ಬಿ.ಎಸ್. ಪಂಡಿತ್ ಸ್ಮರಣ ಸಂಗೀತ ಕಛೇರಿ ಆಯೋಜಿ ಸಿದೆ ಎಂದು ಸಮಿತಿ ಮುಖ್ಯಸ್ಥ ಜಗನ್ನಾಥ್ ಶೆಣೈ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಅಂದು ಪದ್ಮಭೂಷಣ, ಸಂಗೀತ ಕಲಾನಿಧಿ ಸುಧಾ ರಘುನಾಥನ್ ಅವರ ಸಂಗೀತ ಕಛೇರಿ ನಡೆ ಯಲಿದ್ದು, ವಯಲಿನ್‍ನಲ್ಲಿ ಚಾರುಮತಿ ರಘುರಾಮನ್, ಮೃದಂಗದಲ್ಲಿ ಎನ್.ಸಿ.ಭಾರದ್ವಾಜ್, ಮೋರ್ಚಿಂಗ್‍ನಲ್ಲಿ ಆರ್.ರಾಮನ್ ಸಾಥ್ ನೀಡಲಿದ್ದಾರೆ ಎಂದರು.

ಕಾರ್ಯಕ್ರಮಕ್ಕೆ ಹೋಗಿ ಬರಲು ಸಂಗೀತ ಪ್ರಿಯರಿಗಾಗಿ ಮೈಸೂರಿನ ಟಿ.ಕೆ.ಲೇಔಟ್‍ನ ಕೃಷ್ಣಧಾಮ, ಕುವೆಂಪುನಗರದ ಗಾನಭಾರತಿ, ಲಕ್ಷ್ಮೀ ಪುರಂನ ನಾದಬ್ರಹ್ಮ ಸಂಗೀತ ಸಭಾ, ಸರಸ್ವತಿಪುರಂನ ಜವರೇಗೌಡ ಪಾರ್ಕ್, ರಾಮಸ್ವಾಮಿ ವೃತ್ತದ ಆಟೋ ನಿಲ್ದಾಣ, ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಸ್ಥಾನ, ಸಿದ್ದಾರ್ಥನಗ ರದ ಜಿಎಸ್‍ಎಸ್‍ಎಸ್ ಶಾಲೆಯಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಮತ್ತೆ ಅಯಾ ಸ್ಥಳಗಳಿಗೆ ವಾಪಸ್ ಕರೆದೊಯ್ದು ಬಿಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ-9611959996 ಸಂಪರ್ಕಿಸಬಹುದು ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರೊ.ಬಿ.ಎಸ್.ಪಂಡಿತ್‍ರ ಪತ್ನಿ ವನಜಾ ಪಂಡಿತ್, ಜಿಎಸ್‍ಎಸ್‍ಎಸ್ ಆಡಳಿತಾಧಿಕಾರಿ ಅನುಪಮ ಪಂಡಿತ್, ಹಿಮಾಂಶು ಉಪಸ್ಥಿತರಿದ್ದರು.

Translate »