ಕೌಟಿಲ್ಯ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ: ಸಾಮಥ್ರ್ಯಾಧಾರಿತ ಮಕ್ಕಳ ವಿಶೇಷ ಪ್ರತಿಭೆ ಅನಾವರಣ 
ಮೈಸೂರು

ಕೌಟಿಲ್ಯ ಶಾಲೆಯಲ್ಲಿ ಸಂಭ್ರಮದ ಮಕ್ಕಳ ದಿನಾಚರಣೆ: ಸಾಮಥ್ರ್ಯಾಧಾರಿತ ಮಕ್ಕಳ ವಿಶೇಷ ಪ್ರತಿಭೆ ಅನಾವರಣ 

November 15, 2019

ಮೈಸೂರು, ನ.14-ಮಕ್ಕಳನ್ನು ಸರಕುಗಳನ್ನಾಗಿ ಮಾಡದೇ, ಸಮಾಜದ ಸಂಪತ್ತನ್ನಾಗಿಸಬೇಕಿದೆ. ಅವರ ಪ್ರತಿಭೆ ಮತ್ತು ಸಾಮಥ್ರ್ಯವನ್ನು ಬೇರೆ ಮಕ್ಕಳೊಂದಿಗೆ ತಾಳೆ ಹಾಕುವುದು ಸರಿಯಲ್ಲ ಎಂದು ಕೌಟಿಲ್ಯ ಶಾಲೆಯ ಪ್ರಾಂಶುಪಾಲೆ ಡಾ.ಎಲ್.ಸವಿತಾ ಅಭಿಪ್ರಾಯಪಟ್ಟರು.

ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಮಕ್ಕಳ ದಿನಾ ಚರಣೆ ಕಾರ್ಯಕ್ರಮದಲ್ಲಿ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಭಾವಚಿತ್ರಕ್ಕೆÀ ಪುಷ್ಪಾರ್ಚನೆ ಮಾಡುವ ಮೂಲಕ ಅವರು ಕಾರ್ಯ ಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಣ ಎಂಬುದು ಸರಕಲ್ಲ. ಇವು ಸಮಾಜದ ಸ್ವಾಸ್ಥ್ಯ ಕಾಪಾ ಡುವ ಕೊಂಡಿಯಾಗಿವೆ. ಮಕ್ಕಳ ಹಕ್ಕುಗಳ ಬಗ್ಗೆ ಪೋಷಕರು ಗಂಭೀರ ಗಮನ ಹರಿಸಬೇಕಿದೆ. ಮಕ್ಕಳಲ್ಲಿ ಅವರವರದೇ ಆದ ಅನೇಕ ರೀತಿಯ ಪ್ರತಿಭೆ ಇರು ತ್ತವೆ. ಇವುಗಳನ್ನು ಗುರುತಿಸುವ ಕಾರ್ಯ ಆಗಬೇಕೇ ಹೊರತು ಮತ್ತೊಂದು ಮಗುವಿನೊಂದಿಗೆ ತಾಳೆ ಹಾಕಿ, ಮಕ್ಕಳ ಸಾಮಥ್ರ್ಯ ಅಳೆಯಬಾರದು ಎಂದು ಸಲಹೆ ನೀಡಿದರು. ಇಂತಹ ವಾತಾವರಣ ದೂರವಾಗಲಿ ಎಂಬ ಸದುದ್ದೇಶದಿಂದ ಮಕ್ಕಳ ದಿನಾಚರಣೆಯಂದು ಅನ್ವೇಷಣೆ ಹೆಸರಿನಲ್ಲಿ, ಮಕ್ಕಳ ಪ್ರತಿಭೆ ಪ್ರೋತ್ಸಾಹಿ ಸುವ ಕಾರ್ಯ ಮಾಡಿದ್ದೇವೆ. ಮಕ್ಕಳ ದಿನಾಚರಣೆ ಅರ್ಥ ಪೂರ್ಣವಾಗಿ ಜರುಗಲು ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸುವಂತೆ ಸಲಹೆ ಮಾಡಿದರು. ನಂತರ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಲ್ಲದೆ ಶಿಕ್ಷಕರೂ ಸಹ ಆಕರ್ಷಕ ಹೆಜ್ಜೆ ಹಾಕಿ ಕಾರ್ಯ ಕ್ರಮದ ಕಳೆಯನ್ನು ಹೆಚ್ಚಿಸಿದರು. ನೃತ್ಯದ ಮೂಲಕ ಕೆಲ ವಿದ್ಯಾರ್ಥಿ ಗಳು ಭರ್ಜರಿ ಮನರಂಜನೆ ನೀಡಿದರೆ, ಇನ್ನು ಕೆಲ ವಿದ್ಯಾರ್ಥಿಗಳು, ಪೇಂಟಿಂಗ್, ಪಾಟ್ ಡೆಕೊರೇಷನ್ ಮೂಲಕ ತಮ್ಮಲ್ಲಿನ ವಿಶೇಷ ಪ್ರತಿಭೆ ಯನ್ನು ಅನಾ ವರಣ ಮಾಡಿದರು. ಇಷ್ಟು ದಿನ ಮನೆಯಿಂದ ಬ್ಯಾಗ್ ಮತ್ತು ಲಂಚ್ ಅನ್ನ ಬೆನ್ನ ಮೇಲೆ ಹೊತ್ತು ಬೋರ್ ಆಗಿದ್ದ ವಿದ್ಯಾರ್ಥಿಗಳು, ಇಂದು ಖಾಲಿ ಕೈಗಳೊಂದಿಗೆ ಆಗಮಿಸಿದ್ದರು. ತಾವೇ ಕೈಗಳ ಮೂಲಕ ಬೆಂಕಿ ರಹಿತ ರುಚಿಕರ ಅಡುಗೆ ತಯಾರಿಸಿದ ವಿದ್ಯಾರ್ಥಿಗಳು, ಪಾನಿ ಪುರಿ, ಚುರುಮುರಿ, ನಿಪಟ್ ಮಸಾಲ, ಕೋಸುಂಬರಿ ಸೇವ್ ಪುರಿ ಸೇರಿದಂತೆ ಇತರೆ ರುಚಿಕರ ಆಹಾರ ಖಾದ್ಯ ಗಳನ್ನು ಸಿದ್ಧಪಡಿಸಿ, ತಮಗೆ ಪಾಠ-ಪ್ರವಚನ ಮಾಡುವ ನೆಚ್ಚಿನ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ವರ್ಗಕ್ಕೆ ಉಣ ಬಡಿಸಿದ ದೃಶ್ಯ ಅಪರೂಪದಲ್ಲೇ ಅಪ ರೂಪ ಎನ್ನು ವಂತಿತ್ತು. ಒಂದೆಡೆ ತರಗತಿಯಲ್ಲಿ ರುಚಿಕರ ಆಹಾರ ಖಾದ್ಯಗಳ ತಯಾರಿಕೆಯಲ್ಲಿ ಕೆಲ ವಿದ್ಯಾರ್ಥಿಗಳು ಬ್ಯುಸಿ ಯಾಗಿದ್ದರೆ, ಮತ್ತೊಂದೆಡೆ ಇನ್ನು ಕೆಲ ವಿದ್ಯಾರ್ಥಿ ಗಳು, ತಮಗೆ ಯಾವುದೇ ಅರಿವೇ ಇಲ್ಲ ಎಂಬಂತೆ ಖಾಲಿ ಕಾಗದದ ಮೇಲೆ ಬಣ್ಣ ಬಣ್ಣದ ಚಿತ್ತಾರ ಬಿಡಿಸುತ್ತಿದ್ದ ದೃಶ್ಯ ಅವರ ಪ್ರತಿಭೆಯನ್ನು ಅನಾವರಣಗೊಳಿಸಿತು.

 

Translate »