ಇಬ್ಬರು ಜೇಬುಗಳ್ಳರು, ಮೂವರು ಗಾಂಜಾ ಮಾರಾಟಗಾರರ ಸೆರೆ
ಮೈಸೂರು

ಇಬ್ಬರು ಜೇಬುಗಳ್ಳರು, ಮೂವರು ಗಾಂಜಾ ಮಾರಾಟಗಾರರ ಸೆರೆ

November 15, 2019

ಮೈಸೂರು,ನ.14(ಆರ್‍ಕೆ)- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕುಖ್ಯಾತ ಜೇಬುಗಳ್ಳರು ಹಾಗೂ ಮೂವರು ಗಾಂಜಾ ಮಾರಾಟಗಾರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಮಾರಾಟ ಮಾಡು ತ್ತಿದ್ದ ಮೂವರನ್ನು ಬಂಧಿಸಿ, 4 ಕೆಜಿ 300 ಗ್ರಾಂ ಗಾಂಜಾ, 32 ಸಾವಿರ ರೂ. ನಗದು ಹಾಗೂ ಸ್ಕೂಟರ್ ವಶಪಡಿಸಿಕೊಂಡಿ ದ್ದಾರೆ. ಮಂಡಿ ಮೊಹಲ್ಲಾ ಕೆ.ಟಿ.ಸ್ಟ್ರೀಟ್ ನಿವಾಸಿ ಇಮ್ರಾನ್(39), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ನಿವಾಸಿ ಪುಟ್ಟೇಗೌಡ(44) ಹಾಗೂ ಲಷ್ಕರ್ ಮೊಹಲ್ಲಾ ನಿವಾಸಿ ಸೈಯ್ಯದ್ ಆಯೂಬ್ @ ಚಿಕ್ಕಪ್ಪ(60) ಬಂಧಿತರು. ಮಂಡಿ ಠಾಣಾ ವ್ಯಾಪ್ತಿಯ ಅಶೋಕ ರಸ್ತೆಯ ಮೈಸೂರು ಕೇಂದ್ರ ಕಾರಾಗೃಹದ ಮುಂಭಾಗದ ರಸ್ತೆಯಲ್ಲಿ ಮೂವರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ಜಂಬೂಸವಾರಿ ಮೆರವಣಿಗೆ ಮಾರ್ಗ ಹಾಗೂ ಬಸ್ ನಿಲ್ದಾಣ ಗಳಲ್ಲಿ ಸಾರ್ವಜನಿಕರ ಜೇಬಿನಿಂದ ಮೊಬೈಲ್ ಕಳವು ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ, 1.50 ಲಕ್ಷ ರೂ. ಮೌಲ್ಯದ 12 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಭರತ್‍ನಗರ ನಿವಾಸಿ ಅಬ್ದುಲ್ ಜಮೀಲ್@ಪಿಕೆ ಹಾಗೂ ಹೂಟಗಳ್ಳಿ ನಿವಾಸಿ ಸುರೇಶ್ ಬಂಧಿತರು. ಕಳವು ಮಾಡಿದ ಮೊಬೈಲ್‍ಗಳನ್ನು ಲಷ್ಕರ್ ಠಾಣಾ ವ್ಯಾಪ್ತಿಯ ಕೆ.ಟಿ.ಸ್ಟ್ರೀಟ್‍ನಲ್ಲಿನ ಕಾವೇರಿ ಎಲೆಕ್ಟ್ರಾನಿಕ್ಸ್ ಅಂಗಡಿಯ ಮುಂಭಾಗದಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »