ಮೈಸೂರು

ಐಟಿ-ಇಡಿ ದಾಳಿಗೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು
ಮೈಸೂರು

ಐಟಿ-ಇಡಿ ದಾಳಿಗೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು

October 14, 2019

ಮೈಸೂರು, ಅ.13(ಪಿಎಂ)- ಐಟಿ ಹಾಗೂ ಇಡಿ ದಾಳಿಗಳಿಗೆ ಸಂಬಂ ಧಿಸಿದಂತೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು ಎಂದು ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ಇಂದಿಲ್ಲಿ ತಿಳಿಸಿದರು. ಮೈಸೂರಿನಲ್ಲಿ ಭಾನು ವಾರ ಮಾಧ್ಯಮದವರೊಂ ದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವತಃ ಅವರೇ ತಮ್ಮ ಮೇಲಿನ ಐಟಿ ದಾಳಿಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೆ ಕೆಲವು ರಾಜಕಾರಣಿ ಗಳು ಈ ದಾಳಿಗಳಿಗೆ ರಾಜಕೀಯ ಬಣ್ಣ ಕಟ್ಟಲು ಹೊರಟಿದ್ದಾರೆ. ಐಟಿ ದಾಳಿಯನ್ನು ರಾಜಕೀಯ ರಾಡಿ ಮಾಡುವುದು ಬೇಡ…

ಸ್ವಗ್ರಾಮದಲ್ಲಿ ಪರಮೇಶ್ವರ್ ಪಿಎ ರಮೇಶ್ ಅಂತ್ಯಕ್ರಿಯೆ
ಮೈಸೂರು

ಸ್ವಗ್ರಾಮದಲ್ಲಿ ಪರಮೇಶ್ವರ್ ಪಿಎ ರಮೇಶ್ ಅಂತ್ಯಕ್ರಿಯೆ

October 14, 2019

ರಾಮನಗರ: ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮ ರಾಮನಗರ ತಾಲೂಕು ಮೆಲ್ಲಹಳ್ಳಿದೊಡ್ಡಿಯಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಬೆಳಿಗ್ಗೆ 11 ಗಂಟೆಗೆ ನಿವಾಸದಿಂದ 500 ಮೀ. ದೂರದಲ್ಲಿರುವ ಜಮೀನಿನಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು. ಕುಟುಂಬ ಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಎಂಎಲ್‍ಸಿ ಕೆ.ಪಿ.ನಂಜುಂಡಿ ಮೇಳೆಹಳ್ಳಿ ಗ್ರಾಮದಲ್ಲಿರುವ ರಮೇಶ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಜಿ.ಪರಮೇಶ್ವರ್ ಮತ್ತು ಅವರ ಶಿಕ್ಷಣ ಸಂಸ್ಥೆಗಳ ಮೇಲೆ…

ಉನ್ನತ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಉನ್ನತ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ

October 14, 2019

ಮೈಸೂರು,ಅ.13-ನಗರದ ಊಟಿ ರಸ್ತೆ ಯಲ್ಲಿರುವ ಜೆಎಸ್‍ಎಸ್ ಕಾಲೇಜಿನ ವತಿ ಯಿಂದ ನಂಜನಗೂಡು ತಾಲೂಕು ಮೂಡ ಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಭಾರತ ಸರ್ಕಾ ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿ ವಾಲಯದ ಕಾರ್ಯಕ್ರಮವಾದ ‘ಉನ್ನತ ಭಾರತ್ ಅಭಿಯಾನ್’ ಮತ್ತು ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮಕ್ಕೆ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆ ಬೆಳೆದು ಬಂದ ಬಗೆ ಹಾಗೂ ಅದ ರಿಂದಾಗುತ್ತಿರುವ ಅನಾನುಕೂಲತೆಗಳ ಬಗ್ಗೆ ಗ್ರಾಮಸ್ಥರು…

ಮೈಸೂರಲ್ಲಿ ಆಕರ್ಷಕ ಶ್ವಾನ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

October 14, 2019

ಮೈಸೂರು,ಅ.13(ಎಂಟಿವೈ)-ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣದಲ್ಲಿ ಭಾನುವಾರ ಮುದ್ದು ಶ್ವಾನ ಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಶ್ವಾನಗಳು ತಮ್ಮ ಮೈಮಾಟದಿಂದ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವಲ್ಲದೆ, ತಮ್ಮ ಪ್ರಾಮಾಣಿಕತೆಯಿಂದ ಗಮನ ಸೆಳೆಯುತ್ತಿದ್ದವು. ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಆಯೋ ಜಿಸಿದ್ದ `ಶ್ವಾನ ಪ್ರದರ್ಶನ’ದಲ್ಲಿ ಸುಮಾರು 36 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೆರೆದಿದ್ದ ಅಪಾರ ಸಂಖ್ಯೆಯ ಪ್ರಾಣಿ ಪ್ರಿಯರ ಮನಗೆದ್ದವು. ಮೈಸೂ ರಿನ ವಿವಿಧ ಬಡಾವಣೆಗಳಲ್ಲದೆ, ಬೆಂಗಳೂರು, ಮಡಿ ಕೇರಿ, ಕೇರಳ, ತಮಿಳುನಾಡು, ಪುಣೆ…

ಮೋದಿ ತಾಯಿ ಭೇಟಿಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮೈಸೂರು

ಮೋದಿ ತಾಯಿ ಭೇಟಿಯಾದ ರಾಷ್ಟ್ರಪತಿ ರಾಮನಾಥ್ ಕೋವಿಂದ್

October 14, 2019

ಗುಜರಾತ್: ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಗುಜರಾತ್‍ನ ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹಿರಾ ಬೆನ್‍ರನ್ನ ಭೇಟಿಯಾಗಿದ್ದಾರೆ. ಎರಡು ದಿನಗಳ ಕಾಲ ಗುಜರಾತ್ ಪ್ರವಾಸ ಕೈಗೊಂಡಿರುವ ಅವರು, ಇಂದು ಗಾಂಧಿನಗರದಲ್ಲಿ ಹಿರಾ ಬೆನ್‍ರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಈ ವಿಚಾರವನ್ನು ಕೋವಿಂದ್ ತಮ್ಮ ಟ್ವಿಟರ್ ಅಕೌಂಟ್‍ನಲ್ಲಿ ಹಂಚಿಕೊಂಡಿದ್ದಾರೆ. ಕೋವಿಂದ್ ಗುಜರಾತ್ ಪ್ರವಾಸಕ್ಕೆ ಅವರ ಧರ್ಮಪತ್ನಿ ಸವಿತಾ ಕೂಡಾ ಸಾಥ್ ನೀಡಿದ್ದಾರೆ. ಮೊನ್ನೆಯಷ್ಟೇ ಕೋವಿಂದ್, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ,…

ಹೊರ ರಾಜ್ಯಕ್ಕೆ ಕಬ್ಬು ಸಾಗಾಣಿಕೆ ವೆಚ್ಚ ಸರ್ಕಾರವೇ ಭರಿಸುತ್ತದೆಕಂದಾಯ ಸಚಿವ ಆರ್.ಅಶೋಕ್
ಮೈಸೂರು

ಹೊರ ರಾಜ್ಯಕ್ಕೆ ಕಬ್ಬು ಸಾಗಾಣಿಕೆ ವೆಚ್ಚ ಸರ್ಕಾರವೇ ಭರಿಸುತ್ತದೆಕಂದಾಯ ಸಚಿವ ಆರ್.ಅಶೋಕ್

October 14, 2019

ಬೆಂಗಳೂರು: ರಾಜ್ಯ ಸರ್ಕಾರವು ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ನೀಡಿದ್ದು, ಕಬ್ಬು ಬೆಳೆಗಾರರು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಕಬ್ಬು ಸಾಗಿಸಲು ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳುವು ದಾಗಿ ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ವಿಧಾನಪರಿಷತ್‍ನಲ್ಲಿ ಜೆಡಿಎಸ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಂಡ್ಯ, ಮೈಸೂರು ಭಾಗದಲ್ಲಿ ಕೆಲವು ಸಕ್ಕರೆ ಕಾರ್ಖಾನೆಗಳು ಮುಚ್ಚಿರುವ ಹಿನ್ನೆಲೆಯಲ್ಲಿ ಕಬ್ಬು ಸಾಗಣೆ ವೆಚ್ಚವನ್ನು ಭರಿಸಬೇಕೆಂದು ಒತ್ತಾಯಿಸಿ ದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಆರ್.ಅಶೋಕ್, ಈ ಬಗ್ಗೆ ಸಿಎಂ…

ಕೆರೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ ಸಕಲೇಶಪುರದಲ್ಲಿ ಘಟನೆ
ಮೈಸೂರು

ಕೆರೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ ಸಕಲೇಶಪುರದಲ್ಲಿ ಘಟನೆ

October 14, 2019

ಹಾಸನ, ಅ.13- ತಮ್ಮ ಪ್ರೀತಿಗೆ ಮನೆಯವರ ವಿರೋಧವಿರುವುದಕ್ಕೆ ಬೇಸರಗೊಂಡ ಮೂಡಿಗೆರೆ ಮೂಲದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕಟ್ಟೇಬೈಲು ಗ್ರಾಮದ ಪವಿತ್ರಾ (20) ಮತ್ತು ಹಾರ್ಲೆ ಕೂಡಿಗೆ ಗ್ರಾಮದ ಪ್ರವೀಣ್ (25) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಪವಿತ್ರಾ ಮತ್ತು ಪ್ರವೀಣ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಗೆ ಮನೆಯವರು ವಿರೋಧಿಸುತ್ತಿದ್ದಾರೆ ಎಂದು ಬೇಸರಗೊಂಡ ಪ್ರೇಮಿಗಳಿಬ್ಬರೂ ಎರಡು ದಿನಗಳ ಹಿಂದೆಯೇ ಮನೆ ಬಿಟ್ಟಿದ್ದಾರೆ. ಬಳಿಕ ಸಕಲೇಶಪುರಕ್ಕೆ…

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ನಾಯಕ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ನಾಯಕ ಸಂಘಟನೆಗಳಿಂದ ಪ್ರತಿಭಟನೆ

October 14, 2019

ಮೈಸೂರು, ಅ.13(ಪಿಎಂ)- ಮೈಸೂರು ನಗರದ ಮಿನಿ ವಿಧಾನಸೌಧದ ಬಳಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ, ಕರ್ನಾಟಕ ರಾಜ್ಯ ನಾಯಕ ಜನಾಂ ಗದ ಹಿತರಕ್ಷಣಾ ವೇದಿಕೆ ಜಂಟಿ ಆಶ್ರಯ ದಲ್ಲಿ ಮೈಸೂರು ಮಹಾನಗರ ಪಾಲಿಕೆ ಎದುರು ಭಾನುವಾರ ಪ್ರತಿಭಟನೆ ನಡೆಸಲಾಯಿತು. ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಮಾಜಿ ಸಚಿವ ಜಿ.ಟಿ.ದೇವೇ ಗೌಡ ಹಾಗೂ ಅನರ್ಹ ಶಾಸಕ ಎ.ಹೆಚ್. ವಿಶ್ವನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು. ಒಂದೆಡೆ ಜಿಲ್ಲಾಡಳಿತ…

ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಶಾಸಕ ಜಿಟಿಡಿ
ಮೈಸೂರು

ತಮಟೆ ಸದ್ದಿಗೆ ಹೆಜ್ಜೆ ಹಾಕಿದ ಶಾಸಕ ಜಿಟಿಡಿ

October 14, 2019

ಕಲಾಪ್ರೇಮಿಯೂ ಆಗಿರುವ ಚಾಮುಂ ಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇ ಗೌಡರು ಮೆರವಣಿಗೆಯಲ್ಲಿ ಕೈಯಲ್ಲಿ ಕತ್ತಿ ಹಿಡಿದು ತಮಟೆ ಸದ್ದಿಗೆ ಸರಿ ಯಾಗಿ ವೀರಭದ್ರ ಕುಣಿತದ ಹೆಜ್ಜೆ ಇಟ್ಟು ಕುಣಿದು ಎಲ್ಲರ ಗಮನ ಸೆಳೆದರು. ಯಾವುದೇ ಮಹನೀಯರ ಜಯಂ ತೋತ್ಸವದ ಮೆರವಣಿಗೆ ಸಂದರ್ಭ ದಲ್ಲಿ ಜಿ.ಟಿ.ದೇವೇಗೌಡರು ಹೆಜ್ಜೆ ಹಾಕಿ ಕುಣಿಯುವುದು ವಿಶೇಷ. ಅಂತೆಯೇ ಇಂದೂ ಕೂಡ ಅವರು ಜ್ವರ ಇದ್ದರೂ ಹೆಜ್ಜೆ ಹಾಕಿ ತಮಗಿ ರುವ ಕಲಾಪ್ರೇಮವನ್ನು ಪ್ರದರ್ಶಿಸಿದರು.

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ
ಮೈಸೂರು

ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ

October 14, 2019

ಮೈಸೂರು, ಅ.13(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ಕಾಲೇಜು ಆವರಣದಲ್ಲಿ ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪ್ರಯುಕ್ತ ವಾಲ್ಮೀಕಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಮೈಸೂರು ವಿವಿ ಪ್ರಾಚ್ಯ ವಿದ್ಯಾ ಸಂಶೋಧನಾ ಲಯದ ನಿರ್ದೇಶಕ ಪ್ರೊ.ಎಸ್.ಶಿವರಾಜಪ್ಪ, ಮಹಾರಾಜ ಕಾಲೇಜು ಪ್ರಾಂಶು ಪಾಲರಾದ ಪ್ರೊ.ಸಿ.ಪಿ.ಸುನಿತಾ, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಆಂಜ ನೇಯ, ಡಾ.ದಿನೇಶ್, ಡಾ.ಸಿ.ಡಿ.ಪರಶುರಾಮ್, ಡಾ.ರಾಜಯ್ಯ, ಎಂ.ಡಿ.ಚೆನ್ನ ಬಸಪ್ಪ, ಪ್ರೊ.ಬಿ.ಎಸ್.ದಿನಮಣಿ, ಚೆಲುವಾಂಬಿಕೆ, ವೇದಿಕೆ ಅಧ್ಯಕ್ಷ ಆರ್.ವಾಸುದೇವ್, ಕಾರ್ಯದರ್ಶಿ ಮಹೇಶ್‍ಬಾಬು ರೆಡ್ಡಿ ಇನ್ನಿತರರು ಉಪಸ್ಥಿತದ್ದರು.

1 800 801 802 803 804 1,611
Translate »