ಮೈಸೂರು,ಅ.14-ಎನ್‍ಟಿಎಂ ಶಾಲೆಗೆ ಸೇರಿದ ಜಾಗವನ್ನು ಹಾಗೆ ಉಳಿಸಿಕೊಂಡು, ಶಾಲೆ ನಡೆಸಲು ಯಾವುದೇ ಹಸ್ತಕ್ಷೇಪ ಉಂಟಾಗದಂತೆ ಉಳಿಕೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸಲು ಕ್ರಮ ವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮೈಸೂರು ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ಪುಟ್ಟಸಿದ್ದಶೆಟ್ಟಿ, ಪ್ರೊ.ಪಿ.ವಿ.ನಂಜರಾಜ ಅರಸ್, ನಂದೀಶ್ ಅರಸ್ ಹಾಗೂ ಇತರ ಹೋರಾಟ ಸಮಿತಿ ಸದಸ್ಯರು ಮೈಸೂರು ಮಹಾರಾಣಿ ಎನ್‍ಟಿಎಂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಈ ಶಾಲೆಯ ಜಾಗದಲ್ಲಿ…
ಸರ್ಕಾರಿ ಸೇವೆಗಳನ್ನು ಮನೆಗೇ ತಲುಪಿಸುವ ವಿನೂತನ ಯೋಜನೆ ‘ಜನಸೇವಕ’
October 15, 2019ಬೆಂಗಳೂರು, ಅ.14- ಸಾರ್ವಜನಿಕರಿಗೆ ಸರಕಾರಿ ಸೇವೆಗಳು ಸುಲಭವಾಗಿ ಸಿಗಲಿ ಎಂಬ ಉದ್ದೇಶದಿಂದ ‘ಸಕಾಲ’ ಯೋಜನೆಯಡಿಯಲ್ಲಿ ‘ಜನಸೇವಕ’ ಎಂಬ ವಿನೂತನ ಯೋಜನೆಯನ್ನು ಪೀಣ್ಯದ ದಾಸರಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಕಡೆ ಅದನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಸರಕಾರಿ ಕಚೇರಿಗೆ ಅಲೆದಾಡುವುದು, ಕಚೇರಿಯಲ್ಲಿ ಸರದಿ ಸಾಲಿನಲ್ಲಿ ನಿಲ್ಲುವುದು ಮತ್ತು ಮಧ್ಯವರ್ತಿಗಳ ಕಾಟ ತಪ್ಪಿಸಲು ಈ ಯೋಜನೆ ಜಾರಿಗೆ ತರಲಾಗಿದ್ದು, ಸರಕಾರ…
ಉದ್ದೇಶಿತ ಪ್ರತಿಷ್ಠಿತ ಬಲ್ಲಹಳ್ಳಿ ಬಡಾವಣೆಗೆ ಎಳ್ಳು-ನೀರು
October 15, 2019ಮೈಸೂರು,ಅ.14(ಆರ್‍ಕೆ)- ಭೂಮಿ ನೀಡಲು ರೈತರು ನಿರಾಕರಿಸಿರುವುದರಿಂದ ಮಹತ್ವಾಕಾಂ ಕ್ಷೆಯ ಬಲ್ಲಹಳ್ಳಿ ವಸತಿ ಬಡಾವಣೆ ಯೋಜನೆ ಮೂಲೆಗುಂಪಾಗುವುದು ಖಚಿತವಾಗಿದೆ. ಯೋಜ ನೆಯ ಅನುಕೂಲ, ಭವಿಷ್ಯದ ಸೌಲಭ್ಯಗಳು, ಸುತ್ತ ಮುತ್ತಲಿನ ಗ್ರಾಮಗಳಿಗೆ ಸಿಗುತ್ತಿದ್ದ ಸಂಪರ್ಕ ವ್ಯವಸ್ಥೆ, ವೈಯಕ್ತಿಕವಾಗಿ ಭೂ ಮಾಲೀಕರಿಗೆ ಆಗುತ್ತಿದ್ದ ಆರ್ಥಿಕ ಲಾಭ ಇತ್ಯಾದಿ ಅಂಶಗಳನ್ನು ತಿಳಿಸಿ ಮನವರಿಕೆ ಮಾಡದೇ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ರೈತರ ಆಕ್ರೋಶಕ್ಕೆ ಕಾರಣ ಎಂಬುದು ಇಂದು ನಡೆದ ಸಭೆಯಲ್ಲಿ ಮುಡಾ ಅಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಮನವರಿಕೆಯಾಯಿತು. ವಸತಿ ಬಡಾವಣೆ ನಿರ್ಮಿಸಲು 2012ರಲ್ಲೇ ಮುಡಾ…
ನನ್ನ ಮೇಲೆ ಐಟಿ ದಾಳಿಯಾದ್ರೆ ಅದಕ್ಕೆ ಹೆಚ್.ಡಿ.ದೇವೇಗೌಡ್ರೆ ಕಾರಣ
October 15, 2019ತುಮಕೂರು,ಅ.14- ನನ್ನ ಮೇಲೆ ಐಟಿ ದಾಳಿ ಏನಾದರೂ ಆದರೆ ಅದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೇ ಕಾರಣ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬೇಕಾದ್ರೇ ದೇವೇಗೌಡರೇ ನನ್ನ ವಿರುದ್ಧ ಪತ್ರ ಬರೆದಿರ್ತಾರೆ. ನನ್ನ ಮೇಲೆ ಐಟಿ ದಾಳಿ ಮಾಡಿ ಅಂತ. ಅವರಿಗೆ ಏನೂ ಕೆಲಸ ಇರಲ್ವಲ್ಲಾ ಅದಕ್ಕೆ ಸುಮ್ಮನೆ ಕುತ್ಕೊಂಡು ಹೀಗೆ ಬರೆದಿರ್ತಾರೆ ಎಂದು ಹೇಳಿದ್ದಾರೆ. ನಾನೂ ಹಾಗೆಯೇ ದೇವೇಗೌಡರ ಆಸ್ತಿಯನ್ನು ತನಿಖೆ ಮಾಡೋಕೆ ಒತ್ತಾಯಿಸ್ತೀನಿ. ಅವರ ಕುಟುಂಬದ ಎಲ್ಲವನ್ನೂ ತನಿಖೆ…
ಸಿಎಂ ಬಿಎಸ್‍ವೈ ಕಾರ್ಯಕ್ರಮಗಳ ಸ್ಥಳಾಂತರಕ್ಕೆ ಕಾರಣವಾದ ಇಲಿ!
October 15, 2019ಬೆಂಗಳೂರು,ಅ.14-ಆಡಳಿತದ ಶಕ್ತಿಕೇಂದ್ರ ವಿಧಾನ ಸೌಧದಲ್ಲಿ ಇಲಿ- ಹೆಗ್ಗಣಗಳ ಕಾಟ ಮಿತಿಮೀರಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಿಧಾನಸೌಧದ 3ನೆ ಮಹಡಿಯ ಲ್ಲಿನ ಕೊಠಡಿ ಸಂಖ್ಯೆ-313ರಲ್ಲಿ ಇಲಿ ಸತ್ತು ದುರ್ನಾತ ಬೀರಿದ ಪರಿಣಾಮ ಮುಖ್ಯಮಂತ್ರಿ ತಮ್ಮ ಅಧಿಕೃತ ಕಾರ್ಯಕ್ರಮವನ್ನು ಸ್ಥಳಾಂತರಿಸಿದ ಘಟನೆ ನಡೆಯಿತು. ಸೋಮವಾರ ಸಿಎಂ ಯಡಿಯೂರಪ್ಪ ಅವರಿಗೆ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ವಿವಿಧ ನಿಯೋಗಗಳ ಭೇಟಿಯ ಕಾರ್ಯಕ್ರಮ ನಿಗದಿಯಾಗಿತ್ತು. ಅದರನ್ವಯ ಬೆಳಿಗ್ಗೆ 10.30ಕ್ಕೆ ಸರಿಯಾಗಿ ಸಿಎಂ ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಆ ಕೊಠಡಿಯಲ್ಲಿ ಇಲಿಯೊಂದು ಸತ್ತು, ದುರ್ನಾತ…
ವಿಚಾರಣೆಗೆ ಹಾಜರಾಗಲು ಡಿಕೆಶಿ ತಾಯಿ, ಪತ್ನಿಗೆ ಇಡಿ ನೋಟಿಸ್
October 15, 2019ಬೆಂಗಳೂರು,ಅ.14(ಕೆಎಂಶಿ)- ಅಕ್ರಮ ಆಸ್ತಿ ಗಳಿಕೆ ಹಾಗೂ ಹಣ ಸಾಗಾಣಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್, ತಾಯಿ ಗೌರಮ್ಮ ಹಾಗೂ ಪತ್ನಿ ಉಷಾಗೆ ಜಾರಿ ನಿರ್ದೇಶ ನಾಲಯ ನೋಟಿಸ್ ಜಾರಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 1 ತಿಂಗಳಿಂದ ತಿಹಾರ್ ಜೈಲಿನಲ್ಲಿ ರುವ ಶಿವಕುಮಾರ್, ನಿರೀಕ್ಷಣಾ ಜಾಮೀನಿಗಾಗಿ ದೆಹಲಿ ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಅರ್ಜಿ ನಾಳೆ ವಿಚಾರಣೆಗೆ ಬರುತ್ತಿರುವ ಬೆನ್ನಲ್ಲೇ ಅವರ ಕುಟುಂಬ ವರ್ಗದವರನ್ನು ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ತಾಯಿ ಗೌರಮ್ಮರಿಗೆ, ಮಂಗಳವಾರ, ಬುಧವಾರ, ಪತ್ನಿ ಉಷಾ ಅವರಿಗೆ ಅ.17ರಂದು…
ಕಣ್ಮರೆಯಾಗಿದ್ದ ಯುವಕನ ಹತ್ಯೆ: ಆತನ ಸ್ನೇಹಿತರು ಪೊಲೀಸ್ ವಶಕ್ಕೆ
October 15, 2019ಮೈಸೂರು, ಅ.14(ಆರ್‍ಕೆ)- ಅಕ್ಟೋಬರ್ 3ರಂದು ಕಣ್ಮರೆಯಾಗಿದ್ದ ಯುವಕನನ್ನು ಸ್ನೇಹಿತರೇ ಕೊಲೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿದೆ. ಮೈಸೂರಿನ ಕುವೆಂಪುನಗರ ನಿವಾಸಿ ರಾಹುಲ್(27) ಕೊಲೆಯಾದ ಯುವಕ ನಾಗಿದ್ದು, ಈ ಸಂಬಂಧ ಲಕ್ಷ್ಮೀಪುರಂ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾ ರಣೆಗೊಳಪಡಿಸಿದ್ದಾರೆ. ಅಕ್ಟೋಬರ್ 3ರಂದು ಸಂಜೆ ಯುವ ದಸರಾಗೆ ಹೋಗುತ್ತೇನೆ ಎಂದು ಹೇಳಿ ಮನೆ ಯಿಂದ ಹೊರಬಂದಿದ್ದ ರಾಹುಲ್ ಅಂದು ರಾತ್ರಿ ಮನೆಗೆ ಹಿಂದಿರುಗಿರಲಿಲ್ಲ. ಮರುದಿನ ಅವರ ತಾಯಿ ಕುವೆಂಪುನಗರ ಠಾಣೆಗೆ ತೆರಳಿ ರಾಹುಲ್ ನಾಪತ್ತೆಯಾಗಿ…
ಮೈಸೂರು ವಿವಿ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣಡಿಸೆಂಬರ್‍ನಲ್ಲಿ ಕಟ್ಟಡ ಕಾಮಗಾರಿ ಆರಂಭ ಸಾಧ್ಯತೆ
October 15, 2019ಮೈಸೂರು, ಅ.14(ಎಸ್‍ಬಿಡಿ)- ಮೈಸೂರು ವಿಶ್ವವಿದ್ಯಾ ನಿಲಯದ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಡಿಸೆಂಬರ್‍ನಲ್ಲಿ ಕಟ್ಟಡ ಕಾಮಗಾರಿ ಆರಂಭವಾಗುವ ಸಾಧ್ಯತೆ ಇದೆ. ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನ ನಡೆಸುತ್ತಾರೆ. ಆದರೆ ಅವರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆಯಿಲ್ಲ. ಸ್ನಾತಕೋತ್ತರ ವಿದ್ಯಾರ್ಥಿಗಳಿಗಿರುವ ಹಾಸ್ಟೆಲ್ ಗಳಲ್ಲೇ ಪಿಹೆಚ್.ಡಿ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾ ಗಿದೆ. ಪರಿಣಾಮ ಕೊಠಡಿಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ವಿದ್ಯಾರ್ಥಿಗಳು ಉಳಿದುಕೊಳ್ಳುವುದರಿಂದ ಅವರ ಅಧ್ಯಯನಕ್ಕೂ ತೊಂದರೆಯಾಗಿದೆ. ಪ್ರಸ್ತುತ 1300ಕ್ಕೂ ಹೆಚ್ಚು ಪಿಹೆಚ್.ಡಿ ವಿದ್ಯಾರ್ಥಿಗಳಿದ್ದು, ನಾನಾ ವಿಷಯ…
ಮೈಸೂರು ವಿವಿಯಲ್ಲಿ ಶೀಘ್ರ ಬೌದ್ಧ ಅಧ್ಯಯನ ಕೇಂದ್ರ
October 15, 2019ಮೈಸೂರು, ಅ.14(ಎಂಕೆ)- ಪ್ರಸಕ್ತ ಸಾಲಿನಿಂದಲೇ ಬೌದ್ಧ ಅಧ್ಯಯನ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪೆÇ್ರ. ಜಿ. ಹೇಮಂತ್ ಕುಮಾರ್ ಹೇಳಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ವರ್ಷದ ಧಮ್ಮ ದೀಕ್ಷಾ ದಿನಾಚರಣೆಯ ಅಂಗವಾಗಿ ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಬುದ್ಧ ಗುರುವಿನತ್ತ ಪಯಣ: ಸಾಂಸ್ಕೃತಿಕ ತಲ್ಲಣಗಳು’ ವಿಶೇಷ ಉಪನ್ಯಾಸ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾರಂಭದ ಹಂತವಾಗಿ ವಿವಿಯಿಂದಲೇ 5 ಲಕ್ಷ ರೂ. ಬಿಡುಗಡೆ ಮಾಡಲಾಗುವುದು. ಸದ್ಯಕ್ಕೆ…
ಕನ್ನಡ ಓದಲು ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳ ಹಿಂಜರಿಕೆ
October 15, 2019ಮೈಸೂರು, ಅ.14(ಆರ್‍ಕೆಬಿ)-ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿ ಗಳು ಕನ್ನಡ ಭಾಷೆಯನ್ನು ಓದಲು ಹಿಂಜರಿಯುತ್ತಿದ್ದಾರೆ. ಹೀಗಾದರೆ ಕನ್ನಡದ ಪರಿಸ್ಥಿತಿ ಏನಾಗಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾ ಪಕಿ ಡಾ.ಎನ್.ಕೆ.ಲೋಲಾಕ್ಷಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿ ಜಿಲ್ಲಾ ಸಾಹಿತ್ಯ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬಾಲ ಸಾಹಿತ್ಯ ಚಿಂತನ ಬಳಗ ಆಯೋಜಿಸಿದ್ದ ಕೆ.ಎಸ್. ರೇಣುಕಾಪ್ರಸಾದ್ ಅವರ `ಶಬ್ಧಮಣಿದರ್ಪಣ’ದ ಅವಲೋಕನ ಹಾಗೂ `ಛಂದೋಲೋಕ’ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಹಳೆಗನ್ನಡ…










