ಎನ್‍ಟಿಎಂ ಶಾಲೆ, ಅದರ ಜಾಗವನ್ನು ಸಂರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಯಡಿಯೂರಪ್ಪ ಸೂಚನೆ
ಮೈಸೂರು

ಎನ್‍ಟಿಎಂ ಶಾಲೆ, ಅದರ ಜಾಗವನ್ನು ಸಂರಕ್ಷಿಸುವಂತೆ ಜಿಲ್ಲಾಧಿಕಾರಿಗೆ ಸಿಎಂ ಯಡಿಯೂರಪ್ಪ ಸೂಚನೆ

October 15, 2019

ಮೈಸೂರು,ಅ.14-ಎನ್‍ಟಿಎಂ ಶಾಲೆಗೆ ಸೇರಿದ ಜಾಗವನ್ನು ಹಾಗೆ ಉಳಿಸಿಕೊಂಡು, ಶಾಲೆ ನಡೆಸಲು ಯಾವುದೇ ಹಸ್ತಕ್ಷೇಪ ಉಂಟಾಗದಂತೆ ಉಳಿಕೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸಲು ಕ್ರಮ ವಹಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಮೈಸೂರು ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಪಿ.ಪುಟ್ಟಸಿದ್ದಶೆಟ್ಟಿ, ಪ್ರೊ.ಪಿ.ವಿ.ನಂಜರಾಜ ಅರಸ್, ನಂದೀಶ್ ಅರಸ್ ಹಾಗೂ ಇತರ ಹೋರಾಟ ಸಮಿತಿ ಸದಸ್ಯರು ಮೈಸೂರು ಮಹಾರಾಣಿ ಎನ್‍ಟಿಎಂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಈ ಶಾಲೆಯ ಜಾಗದಲ್ಲಿ ಶ್ರೀ ರಾಮಕೃಷ್ಣ ಆಶ್ರಮದವರು ಶ್ರೀ ವಿವೇಕಾನಂದ ಸ್ಮಾರಕ ನಿರ್ಮಿಸಲು ಸದರಿ ಶಾಲೆಯನ್ನು ನೆಲಸಮ ಮಾಡಲು ಮುಂದಾಗಿರುವುದಾಗಿ ತಿಳಿಸಿ, ಸದರಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯನ್ನು ಉಳಿಸಿಕೊಡುವಂತೆ ಕೋರಿರುವ ಮನವಿಯನ್ನು ಟಿಪ್ಪಣಿಯೊಂದಿಗೆ ಲಗತ್ತಿಸಿರುವುದಾಗಿ ಮುಖ್ಯಮಂತ್ರಿಗಳು ತಮ್ಮ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

Translate »