ಐಟಿ-ಇಡಿ ದಾಳಿಗೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು
ಮೈಸೂರು

ಐಟಿ-ಇಡಿ ದಾಳಿಗೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು

October 14, 2019

ಮೈಸೂರು, ಅ.13(ಪಿಎಂ)- ಐಟಿ ಹಾಗೂ ಇಡಿ ದಾಳಿಗಳಿಗೆ ಸಂಬಂ ಧಿಸಿದಂತೆ ಆಡಳಿತ ಪಕ್ಷದತ್ತ ಬೊಟ್ಟು ಮಾಡುವುದು ತಪ್ಪು ಎಂದು ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.

ಮೈಸೂರಿನಲ್ಲಿ ಭಾನು ವಾರ ಮಾಧ್ಯಮದವರೊಂ ದಿಗೆ ಮಾತನಾಡಿದ ಅವರು, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಸ್ವತಃ ಅವರೇ ತಮ್ಮ ಮೇಲಿನ ಐಟಿ ದಾಳಿಗೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದಿದ್ದಾರೆ. ಆದರೆ ಕೆಲವು ರಾಜಕಾರಣಿ ಗಳು ಈ ದಾಳಿಗಳಿಗೆ ರಾಜಕೀಯ ಬಣ್ಣ ಕಟ್ಟಲು ಹೊರಟಿದ್ದಾರೆ. ಐಟಿ ದಾಳಿಯನ್ನು ರಾಜಕೀಯ ರಾಡಿ ಮಾಡುವುದು ಬೇಡ ಎಂದರು.

ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆಯನ್ನು ತಳ್ಳಿ ಹಾಕಲಾಗದು. ಅವರಿಗೆ ಅಪಾರವಾದ ರಾಜಕೀಯ ಅನುಭವ ವಿದೆ. ಅವರು ಹೇಳಿದಂತೆ ಮಧ್ಯಂತರ ಚುನಾವಣೆ ಆಗಲೂಬಹುದು. ನಾನು ಕ್ಷೇತ್ರದಲ್ಲಿ ಶಾಂತಿಗಾಗಿ ಕೆಲಸ ಮಾಡಿದ್ದೇನೆ. ಹೀಗಾಗಿ ಜನರ ವಿಶ್ವಾಸ ನನ್ನ ಮೇಲೆ ಯಾವಾಗಲೂ ಇರಲಿದೆ ಎಂಬ ಬಲವಾದ ನಂಬಿಕೆ ಇದೆ ಎಂದು ಹೇಳಿದರು.

Translate »