ಸ್ವಗ್ರಾಮದಲ್ಲಿ ಪರಮೇಶ್ವರ್ ಪಿಎ ರಮೇಶ್ ಅಂತ್ಯಕ್ರಿಯೆ
ಮೈಸೂರು

ಸ್ವಗ್ರಾಮದಲ್ಲಿ ಪರಮೇಶ್ವರ್ ಪಿಎ ರಮೇಶ್ ಅಂತ್ಯಕ್ರಿಯೆ

October 14, 2019

ರಾಮನಗರ: ಆತ್ಮಹತ್ಯೆ ಮಾಡಿಕೊಂಡಿರುವ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರ ಅಂತ್ಯ ಸಂಸ್ಕಾರ ಇಂದು ಸ್ವಗ್ರಾಮ ರಾಮನಗರ ತಾಲೂಕು ಮೆಲ್ಲಹಳ್ಳಿದೊಡ್ಡಿಯಲ್ಲಿ ಒಕ್ಕಲಿಗರ ಸಂಪ್ರದಾಯದಂತೆ ಬೆಳಿಗ್ಗೆ 11 ಗಂಟೆಗೆ ನಿವಾಸದಿಂದ 500 ಮೀ. ದೂರದಲ್ಲಿರುವ ಜಮೀನಿನಲ್ಲಿ ಅವರ ಅಂತ್ಯಸಂಸ್ಕಾರ ನಡೆಯಿತು. ಕುಟುಂಬ ಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರು ಅಂತ್ಯಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಎಂಎಲ್‍ಸಿ ಕೆ.ಪಿ.ನಂಜುಂಡಿ ಮೇಳೆಹಳ್ಳಿ ಗ್ರಾಮದಲ್ಲಿರುವ ರಮೇಶ್ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಜಿ.ಪರಮೇಶ್ವರ್ ಮತ್ತು ಅವರ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿಯಿಂದ ಹೆದರಿದ ಆಪ್ತ ಸಹಾಯಕ ರಮೇಶ್(40) ಜ್ಞಾನಭಾರತಿ ಆವರಣದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

Translate »