ಉನ್ನತ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ
ಮೈಸೂರು

ಉನ್ನತ ಭಾರತ ಅಭಿಯಾನ, ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ

October 14, 2019

ಮೈಸೂರು,ಅ.13-ನಗರದ ಊಟಿ ರಸ್ತೆ ಯಲ್ಲಿರುವ ಜೆಎಸ್‍ಎಸ್ ಕಾಲೇಜಿನ ವತಿ ಯಿಂದ ನಂಜನಗೂಡು ತಾಲೂಕು ಮೂಡ ಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಭಾರತ ಸರ್ಕಾ ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿ ವಾಲಯದ ಕಾರ್ಯಕ್ರಮವಾದ ‘ಉನ್ನತ ಭಾರತ್ ಅಭಿಯಾನ್’ ಮತ್ತು ‘ಸ್ವಚ್ಛತಾ ಹಿ ಸೇವಾ’ ಕಾರ್ಯಕ್ರಮಕ್ಕೆ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ. ಸಾಂಬಶಿವಯ್ಯ ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಪ್ಲಾಸ್ಟಿಕ್ ಬಳಕೆ ಬೆಳೆದು ಬಂದ ಬಗೆ ಹಾಗೂ ಅದ ರಿಂದಾಗುತ್ತಿರುವ ಅನಾನುಕೂಲತೆಗಳ ಬಗ್ಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುತ್ತಾ, ಪ್ಲಾಸ್ಟಿಕ್ ಬಳಕೆ ಅನೇಕ ಕಾಯಿಲೆಗಳಿಗೆ ಕಾರಣವಾಗಿದ್ದು ಪರಿಸರ ವನ್ನು ನಾಶ ಮಾಡುತ್ತಿದೆ ಎಂದರು.

ಆದುದರಿಂದ ನಾವು ಪ್ಲಾಸ್ಟಿಕ್‍ಗೆ ಪರ್ಯಾ ಯವಾಗಿ ಬಟ್ಟೆ ಪದಾರ್ಥಗಳನ್ನು ಬಳ ಸುವ ಮೂಲಕ ನಮ್ಮ ಅರೋಗ್ಯ ಮತ್ತು ಪರಿಸರವನ್ನು ಕಾಪಾಡಿಕೊಳ್ಳಬೇಕಾಗಿದೆ. ಇಂದು ಇದರ ಅವಶ್ಯಕತೆ ಹಿಂದೆಂದಿ ಗಿಂತಲೂ ಹೆಚ್ಚಾಗಿದೆ ಎಂದರು. ಅಲ್ಲದೆ, ನಾವು ಜೀವಿಸುವ ಪರಿಸರವನ್ನು ಸ್ವಚ್ಛ ವಾಗಿಡುವುದು ವೈಯಕ್ತಿಕವಾಗಿ ಎಲ್ಲರ ಕರ್ತವ್ಯವಾಗಿದೆ ಎಂದು ಸಹ ತಿಳಿಸಿದರು.

ಕಾಲೇಜಿನ ಪ್ರಭಾರ ಪ್ರಾಚಾರ್ಯರಾದ ಪ್ರೊ.ಡಿ.ಎಸ್.ಸದಾಶಿವಮೂರ್ತಿ, ಗ್ರಾಮ ಪಂಚಾಯಿತಿ ಅಧಿಕಾರಿ ಶಿವಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ನಂದೀಶ್ ಕುಮಾರ್, ಆಲತ್ತೂರು ಗ್ರಾಮದ ಮುಖಂಡ ನಂಜುಂಡಸ್ವಾಮಿ, ಶಾಲಾ ಮುಖ್ಯ ಶಿಕ್ಷಕಿ ಪ್ರೇಮ ಮೊದಲಾದವರು ಅಭಿಯಾನ ದಲ್ಲಿ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿಕೊಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸ್ವಯಂ ಸೇವಕರು ಗ್ರಾಮದ ಬೀದಿಗಳಲ್ಲಿ ಜಾಥಾ ನಡೆಸಿ ಬೀದಿನಾಟಕಗಳ ಮೂಲಕ ಪ್ಲಾಸ್ಟಿಕ್‍ನಿಂದಾಗುವ ಅನಾನುಕೂಲಗಳನ್ನು ಪ್ರದರ್ಶಿಸಿದರು. ಗ್ರಾಮಸ್ಥರಿಂದ ಪ್ಲಾಸ್ಟಿಕ್ ಚೀಲಗಳನ್ನು ಪಡೆದು ಬದಲಿಗೆ ಬಟ್ಟೆ ಬ್ಯಾಗು ಗಳನ್ನು ವಿತರಿಸಿದರು. ಅಭಿಯಾನವನ್ನು ಆಲತ್ತೂರು, ಮಾದಯ್ಯನ ಹುಂಡಿ, ಹದಿ ನಾರುಮೋಳೆ, ಮಲ್ಲರಾಜಯ್ಯನಹುಂಡಿ ಗ್ರಾಮಗಳಲ್ಲೂ ನಡೆಸಲಾಯಿತು. ಕು. ಜಯಶ್ರೀ, ದ್ವಿತೀಯ ಬಿಬಿಎ ಪ್ರಾರ್ಥಿಸಿ ದರು. ಟಿ.ಬಿ.ನಿರಂಜನ್, ತೃತೀಯ ಬಿಎ ಸ್ವಾಗತಿಸಿದರು, ಡಾ.ಕುಮುದಿನಿ ಅಚ್ಚಿ ವಂದಿಸಿದರೆ, ದೀಪಿಕಾ, ದ್ವಿತೀಯ ಬಿಎಸ್ಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ ಎನ್‍ಎಸ್‍ಎಸ್ ಅಧಿಕಾರಿ ಗಳಾದ ಎನ್.ಸಂತೋಷ್‍ಕುಮಾರ್, ಶಾಲಾ ಶಿಕ್ಷಕ ವೃಂದ, ಗ್ರಾಮದ ಮುಖಂ ಡರು ಮತ್ತು ಎಲ್ಲಾ ಐದು ಹಳ್ಳಿಗಳ ಗ್ರಾಮ ಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Translate »