ಮೈಸೂರಲ್ಲಿ ಆಕರ್ಷಕ ಶ್ವಾನ ಪ್ರದರ್ಶನ
ಮೈಸೂರು

ಮೈಸೂರಲ್ಲಿ ಆಕರ್ಷಕ ಶ್ವಾನ ಪ್ರದರ್ಶನ

October 14, 2019

ಮೈಸೂರು,ಅ.13(ಎಂಟಿವೈ)-ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣದಲ್ಲಿ ಭಾನುವಾರ ಮುದ್ದು ಶ್ವಾನ ಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಶ್ವಾನಗಳು ತಮ್ಮ ಮೈಮಾಟದಿಂದ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವಲ್ಲದೆ, ತಮ್ಮ ಪ್ರಾಮಾಣಿಕತೆಯಿಂದ ಗಮನ ಸೆಳೆಯುತ್ತಿದ್ದವು.

ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಆಯೋ ಜಿಸಿದ್ದ `ಶ್ವಾನ ಪ್ರದರ್ಶನ’ದಲ್ಲಿ ಸುಮಾರು 36 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೆರೆದಿದ್ದ ಅಪಾರ ಸಂಖ್ಯೆಯ ಪ್ರಾಣಿ ಪ್ರಿಯರ ಮನಗೆದ್ದವು. ಮೈಸೂ ರಿನ ವಿವಿಧ ಬಡಾವಣೆಗಳಲ್ಲದೆ, ಬೆಂಗಳೂರು, ಮಡಿ ಕೇರಿ, ಕೇರಳ, ತಮಿಳುನಾಡು, ಪುಣೆ ಸೇರಿದಂತೆ ವಿವಿ ಧೆಡೆಗಳಿಂದ ಕರೆ ತರಲಾಗಿದ್ದ ಶ್ವಾನಗಳು ಪ್ರದರ್ಶನ ದಲ್ಲಿ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿ ಸೈ ಎನಿಸಿ ಕೊಂಡವು. ಕೆನೈನ್ ಕ್ಲಬ್ ಆಫ್ ಮೈಸೂರು ಸಂಸ್ಥೆ ಮೈಸೂರಿನಲ್ಲಿ ಆಯೋಜಿಸುವ ಶ್ವಾನ ಪ್ರದರ್ಶನ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇಂದು ನಡೆದ ಶ್ವಾನ ಪ್ರದರ್ಶನ ಕೆನೈನ್ ಕ್ಲಬ್ ಆಫ್ ಮೈಸೂರು ಸಂಸ್ಥೆಯ 6ನೇ ಪ್ರದರ್ಶನವಾಗಿದ್ದು, ಸಾವಿ ರಾರು ಮಂದಿ ಪ್ರಾಣಿ ಪ್ರಿಯರನ್ನು ಆಕರ್ಷಿಸಿತು. ಪ್ರದರ್ಶನದಲ್ಲಿ 3 ಕೆಜಿ ತೂಕದ ಮಿನಿಯೇಚರ್ ಪಿಂಚರ್ ತಳಿಯ ಶ್ವಾನದಿಂದ ಹಿಡಿದು 130 ಕೆಜಿ ತೂಕದ ಸೆಂಟ್ ಬರ್ನಾಡ್, ಗ್ರೇಟ್ ಡೇನ್ ಸೇರಿದಂತೆ ಇನ್ನಿತರ ತಳಿಗಳ ಶ್ವಾನಗಳು ಪಾಲ್ಗೊಂಡಿದ್ದವು. ಅಲ್ಲದೆ 20 ಸಾವಿರ ಬೆಲೆಬಾಳುವ ಶ್ವಾನದಿಂದ ಲಕ್ಷಾಂ ತರ ರೂ ಬೆಲೆಬಾಳುವ ಶ್ವಾನಗಳು ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದವು. ಪ್ರದರ್ಶನದಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ವನ್ ಹೌಂಡ್, ಮುದೋಳ್, ರಾಜಪಾಳ್ಯಂ, ವಿಪೆಟ್, ಪಗ್, ಶಿಜು ಟುಜ್ಸ್, ಇಂಗ್ಲೀಷ್ ಕುಕರ್ ಸ್ಪಾನಿಲ್, ಗೋಲ್ಡನ್ ರಿಟ್ರಿವರ್, ಲ್ಯಾಬ್ರಡಾರ್ ರಿಟ್ರವರ್, ಬೀಗಲ್, ಅಕಿಟ, ಚೌಚೌ, ಪೊಮೆರಿಯನ್, ಸೈಬೀರಿಯನ್ ಹಸ್ಕಿ, ಡಾಶ್‍ಹೌಂಡ್ ಮಿನಿಯೇಚರ್, ಡಾಶ್‍ಹೌಂಡ್ ಸ್ಟಾಂಡರ್ಡ್, ಬುಲ್ ಟೆರಿರ್, ಬಾಕ್ಸರ್, ಬುಲ್ಡಾಗ್, ಡಾಬರ್‍ಮನ್, ಗ್ರೇಟ್‍ಡೇನ್, ರಾಟ್‍ವೀ ಲರ್, ಸೇಂಟ್ ಬರ್ನಾಡ್, ಜೆರ್ಮನ್ ಶೆಫರ್ಡ್, ಗ್ರೇಟ್ ಡೇನ್, ಚಿಪ್ಪಿಪರಾಯ್, ಕಾಂಬೈ, ಕನ್ನಿ, ಫ್ರೆಂಚ್ ಬುಲ್ಡಾಗ್, ಫಾಕ್ಸ್ ಟೆರೈರ್, ಜಾಕ್ ರಸಲ್ ಟೆರೈರ್, ಮಸ್ತೀಫ್ ಸೇರಿದಂತೆ ಇನ್ನಿತರ ತಳಿಗಳ ಶ್ವಾನಗಳು 2 ರಿಂಗ್‍ನಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡವು. ಶ್ವಾನ ಪ್ರದರ್ಶನದಲ್ಲಿ ಉತ್ತಮ ಶ್ವಾನಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಲಕ್ನೋದಿಂದ ಕೆ.ಕೆ.ತ್ರಿವೇದಿ ಹಾಗೂ ಬೆಂಗ ಳೂರಿನ ಟಿ. ಪ್ರೀತಮ್ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಎಲ್ಲಾ ಶ್ವಾನಗಳು ನಡಿಗೆ, ನಿಲ್ಲುವುದು, ಮಾಲೀಕನ ಆಜ್ಞೆ ಪಾಲಿಸುವುದು, ಕೂದಲು, ಮೈಕಟ್ಟು ಸೇರಿದಂತೆ ವಿವಿಧ ಚಟುವಟಿಕೆ ಯಲ್ಲಿ ಪಾಲ್ಗೊಂಡು ಸೈ ಎನಿಸಿಕೊಂಡವು.

ಬಿಸಿಲಿನ ಬೇಗೆ: ಮುದ್ದು ಮುದ್ದಾದ ಶ್ವಾನಗಳು ಬಿಸಿಲಿನ ಬೇಗೆಗೆ ಬಳಲಿದವು. ಇಂದು ಬಿಸಿಲಿನ ಪ್ರತಾಪ ಹೆಚ್ಚಾಗಿದ್ದರಿಂದ ವಿದೇಶಿ ತಳಿಗಳ ಶ್ವಾನಗಳು ಪರದಾ ಡಿದವು. ಪ್ರೀತಿಯಿಂದ ಮಗುವಿನಂತೆ ಸಾಕಿದ್ದ ಶ್ವಾನ ಗಳನ್ನು ಬಿಸಿಲಿನಿಂದ ರಕ್ಷಿಸಲು ಮಾಲೀಕರು ಹರ ಸಾಹಸ ಮಾಡಿದರು. ನೆರೆ ರಾಜ್ಯ ಸೇರಿದಂತೆ ವಿವಿಧೆಡೆ ಗಳಿಂದ ಬಂದಿದ್ದ ಶ್ವಾನಗಳ ಮಾಲೀಕರು ತಮ್ಮ ವಾಹನ ಗಳಲ್ಲಿ ಎಸಿ ಆನ್ ಮಾಡಿ ಬಿಸಿಲಿನಿಂದ ತಮ್ಮ ಮುದ್ದಿನ ಶ್ವಾನಗಳನ್ನು ರಕ್ಷಿಸಿದರು. ಕೆಲವರು ಮೈಗೆ ನೀರನ್ನು ಸಿಂಪಡಿಸಿದರೆ, ಮತ್ತೆ ಕೆಲವರು ಮಂಜುಗಡ್ಡೆಯನ್ನು ಬಟ್ಟೆಯಲ್ಲಿ ಸುತ್ತಿ ಶ್ವಾನಗಳ ಮೈಗೆ ಸವರುತ್ತಿದ್ದರು.

ಚಾಲನೆ: ಶಾಸಕ ಎಲ್.ನಾಗೇಂದ್ರ ಇಂದು ಬೆಳಿಗ್ಗೆ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿ ಶುಭ ಕೋರಿದರ ಲ್ಲದೆ, ಶ್ವಾನಗಳ ಪ್ರಾಮುಖ್ಯತೆಯನ್ನು ಕೊಂಡಾಡಿದರು. ಮಾಜಿ ಶಾಸಕ ವಾಸು, ಗಾಲ್ಫ್ ಕ್ಲಬ್ ಅಧ್ಯಕ್ಷ ರವಿಶಂಕರ್, ಕಾರ್ಯದರ್ಶಿ ತಿಮ್ಮಪ್ಪ, ಉದ್ಯಮಿ ಹರೀಶ್‍ಹೆಗ್ಡೆ, ಕೆನೈನ್ ಕ್ಲಬ್ ಆಫ್ ಮೈಸೂರು ಅಧ್ಯಕ್ಷ ಬಿ.ಪಿ.ಮಂಜುನಾಥ್, ಉಪಾಧ್ಯಕ್ಷ ಡಾ.ಎಸ್.ಸಿ.ಸುರೇಶ್, ಜಂಟಿ ಕಾರ್ಯ ದರ್ಶಿ ಟಿ.ಸತೀಶ್‍ಕುಮಾರ್, ಖಜಾಂಚಿ ಎಂ.ಸಿ. ವಿನೋದ್‍ಕುಮಾರ್, ಕಾರ್ಯದರ್ಶಿ ಡಾ.ಸಂಜೀವ್ ಮೂರ್ತಿ ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಿದ್ದಗಂಗಾಮಠದ ದಿವಂಗತ ಡಾ. ಶಿವಕುಮಾರ ಸ್ವಾಮೀಜಿ ಅವರಿಗೆ ಸಮರ್ಪಿಸಲಾಯಿತು.

Translate »