ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ನಾಯಕ ಸಂಘಟನೆಗಳಿಂದ ಪ್ರತಿಭಟನೆ
ಮೈಸೂರು

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ನಾಯಕ ಸಂಘಟನೆಗಳಿಂದ ಪ್ರತಿಭಟನೆ

October 14, 2019

ಮೈಸೂರು, ಅ.13(ಪಿಎಂ)- ಮೈಸೂರು ನಗರದ ಮಿನಿ ವಿಧಾನಸೌಧದ ಬಳಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ, ಕರ್ನಾಟಕ ರಾಜ್ಯ ನಾಯಕ ಜನಾಂ ಗದ ಹಿತರಕ್ಷಣಾ ವೇದಿಕೆ ಜಂಟಿ ಆಶ್ರಯ ದಲ್ಲಿ ಮೈಸೂರು ಮಹಾನಗರ ಪಾಲಿಕೆ ಎದುರು ಭಾನುವಾರ ಪ್ರತಿಭಟನೆ ನಡೆಸಲಾಯಿತು.

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ಮಾಜಿ ಸಚಿವ ಜಿ.ಟಿ.ದೇವೇ ಗೌಡ ಹಾಗೂ ಅನರ್ಹ ಶಾಸಕ ಎ.ಹೆಚ್. ವಿಶ್ವನಾಥ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ಸೂಚಿಸಿದರು. ಒಂದೆಡೆ ಜಿಲ್ಲಾಡಳಿತ ಇಂದು ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದರೆ, ಇಲ್ಲಿ ಪ್ರತಿಭಟನಾಕಾರರು ಕಪ್ಪುಪಟ್ಟಿ ಧರಿಸಿ ತಮ್ಮ ಪ್ರತಿಭಟನೆ ದಾಖ ಲಿಸಿದರು. ಜೊತೆಗೆ ಪ್ರತಿಭಟನಾ ಸ್ಥಳ ದಲ್ಲೇ ವಾಲ್ಮೀಕಿ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಜಯಂತಿ ಆಚರಿಸಿದರು.

ಜಿಲ್ಲಾಡಳಿತ ಹಾಗೂ ಪಾಲಿಕೆ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿ ಭಟನಾಕಾರರು, ಕಳೆದ 10 ವರ್ಷಗಳಿಂದ ವಾಲ್ಮೀಕಿ ಪ್ರತಿಮೆ ಸ್ಥಾಪಿಸುವಂತೆ ಮನವಿ ಸಲ್ಲಿಸುತ್ತ ಬಂದಿದ್ದರೂ ಪ್ರಯೋಜನವಾಗಿಲ್ಲ. ಜೊತೆಗೆ ಪ್ರತಿಭಟನೆ ನಡೆಸುತ್ತಿದ್ದರೂ ಬೇಡಿಕೆ ಮಾತ್ರ ಈಡೇರುತ್ತಲೇ ಇಲ್ಲ. ಜಿಲ್ಲಾಡಳಿತ ವಾಲ್ಮೀಕಿ ಜಯಂತಿಯನ್ನು ಕಾಟಾಚಾರಕ್ಕೆ ಆಚರಿಸಿ ಪ್ರತಿಮೆ ನಿರ್ಮಿಸದೇ ವಾಲ್ಮೀಕಿ ಸಮುದಾಯಕ್ಕೆ ಅವಮಾನ ಮಾಡುತ್ತಿದೆ ಎಂದು ಆರೋಪಿಸಿದರು.

ವಾಲ್ಮೀಕಿ ಪ್ರತಿಮೆ ಸ್ಥಾಪನೆಗೆ ಕಾನೂನು ತೊಡಕು ಇದೆ ಎಂದು ಪಾಲಿಕೆ ಅಧಿಕಾರಿ ಗಳು ಕೈಚೆಲ್ಲುತ್ತಿದ್ದರೆ, ಪಾಲಿಕೆ ಕೌನ್ಸಿಲ್ ಸಭೆ ಯಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಈಗಾಗಲೇ ಮಾಜಿ ಶಾಸಕ ದಿ.ಚಿಕ್ಕ ಮಾದು, ಶಾಸಕರಾದ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮಾಜಿ ಶಾಸಕ ವಾಸು, ಸಂಸದ ಪ್ರತಾಪ್ ಸಿಂಹ ಪ್ರತಿಮೆ ನಿರ್ಮಿಸಲು ಪತ್ರ ಬರೆದಿದ್ದರೂ ಪಾಲಿಕೆ ಮೀನಾಮೇಷ ಎಣಿಸುತ್ತಿದೆ. ಪ್ರತಿ ವರ್ಷ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮುಂದಿನ ವರ್ಷದೊಳಗೆ ಪ್ರತಿಮೆ ನಿರ್ಮಿಸುವು ದಾಗಿ ಭರವಸೆ ನೀಡುತ್ತಿದ್ದರೂ ಅದು ಕಾರ್ಯಗತ ಮಾತ್ರ ಆಗುತ್ತಲೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನತೆಯೇ ಸ್ಥಾಪಿಸಬೇಕಾಗುತ್ತದೆ: ಅನರ್ಹ ಶಾಸಕ ಎ.ಹೆಚ್.ವಿಶ್ವನಾಥ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಜಗತ್ತಿಗೆ ಮಹಾಗ್ರಂಥ ಸಮರ್ಪಿಸಿದ್ದಾರೆ. ಅವರ ಪ್ರತಿಮೆ ಖಂಡಿತ ಸ್ಥಾಪನೆ ಆಗಲೇಬೇಕು. ನಮ್ಮ ಧಾರ್ಮಿಕ -ಸಾಂಸ್ಕøತಿಕ ಸ್ಫೂರ್ತಿ ಮುಂದಿನ ಪೀಳಿಗೆಗೆ ದೊರೆಯಬೇಕಾದರೆ ಪ್ರತಿಮೆ ಸ್ಥಾಪನೆ ಆಗ ಬೇಕು. ನಾವು ನೀಡುವ ಗಡುವಿನೊಳಗೆ ಪ್ರತಿಮೆ ಸ್ಥಾಪನೆ ಮಾಡದಿದ್ದರೆ ಜನತೆಯೇ ಅದಕ್ಕೆ ಮುಂದಾಗಬೇಕಾಗುತ್ತದೆ. ಅದಕ್ಕೆ ಅವಕಾಶ ನೀಡದೇ ಜಿಲ್ಲಾಡಳಿತ ಹಾಗೂ ನಗರಪಾಲಿಕೆ ಶೀಘ್ರವೇ ಪ್ರತಿಮೆ ಸ್ಥಾಪನೆಗೆ ಮುಂದಾಬೇಕು ಎಂದು ಆಗ್ರಹಿಸಿದರು.

ಮೇಯರ್ ಭರವಸೆಗೆ ಪ್ರತಿಭಟನೆ ಕೈ ಬಿಟ್ಟರು: ಸ್ಥಳಕ್ಕೆ ಆಗಮಿಸಿದ ಮೇಯರ್ ಪುಷ್ಪಲತಾ ಜಗನ್ನಾಥ್, ಮುಂದಿನ ಕೌನ್ಸಿಲ್ ಸಭೆಯಲ್ಲಿ ಪ್ರತಿಮೆ ಸ್ಥಾಪನೆ ವಿಚಾರದ ಬಗ್ಗೆ ಚರ್ಚೆ ನಡೆಸಿ ಸರ್ಕಾರದಿಂದ ಅನುಮತಿ ಕೋರಿ ಪತ್ರ ಬರೆಯಲು ಅನು ಮೋದಿಸಲಾಗುವುದು ಎಂದು ಭರವಸೆ ನೀಡಿದರು. ಕೌನ್ಸಿಲ್ ಸಭೆಯಲ್ಲಿ ಸರ್ಕಾ ರಕ್ಕೆ ಈ ಸಂಬಂಧ ಪತ್ರ ಬರೆಯದಿದ್ದಲ್ಲಿ ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸು ವುದಾಗಿ ಎಚ್ಚರಿಸಿ, ಪ್ರತಿಭಟನೆ ಕೈಬಿಡಲಾ ಯಿತು. ನಾಯಕರ ಯುವ ಸೇನೆ ರಾಜ್ಯಾ ಧ್ಯಕ್ಷ ದೇವರಾಜು ಟಿ.ಕಾಟೂರು, ನಾಯಕರ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮ್ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 

Translate »