ಕೆರೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ ಸಕಲೇಶಪುರದಲ್ಲಿ ಘಟನೆ
ಮೈಸೂರು

ಕೆರೆಗೆ ಹಾರಿ ಪ್ರೇಮಿಗಳ ಆತ್ಮಹತ್ಯೆ ಸಕಲೇಶಪುರದಲ್ಲಿ ಘಟನೆ

October 14, 2019

ಹಾಸನ, ಅ.13- ತಮ್ಮ ಪ್ರೀತಿಗೆ ಮನೆಯವರ ವಿರೋಧವಿರುವುದಕ್ಕೆ ಬೇಸರಗೊಂಡ ಮೂಡಿಗೆರೆ ಮೂಲದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಮೂಡಿಗೆರೆ ತಾಲೂಕಿನ ಕಟ್ಟೇಬೈಲು ಗ್ರಾಮದ ಪವಿತ್ರಾ (20) ಮತ್ತು ಹಾರ್ಲೆ ಕೂಡಿಗೆ ಗ್ರಾಮದ ಪ್ರವೀಣ್ (25) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಪವಿತ್ರಾ ಮತ್ತು ಪ್ರವೀಣ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ತಮ್ಮ ಪ್ರೀತಿಗೆ ಮನೆಯವರು ವಿರೋಧಿಸುತ್ತಿದ್ದಾರೆ ಎಂದು ಬೇಸರಗೊಂಡ ಪ್ರೇಮಿಗಳಿಬ್ಬರೂ ಎರಡು ದಿನಗಳ ಹಿಂದೆಯೇ ಮನೆ ಬಿಟ್ಟಿದ್ದಾರೆ. ಬಳಿಕ ಸಕಲೇಶಪುರಕ್ಕೆ ಬಂದಿದ್ದಾರೆ. ಶನಿವಾರ ರಾತ್ರಿ ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಾಲಯ ಬಳಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಕೆರೆಯಲ್ಲಿ ಯುವಕ, ಯುವತಿಯ ಮೃತದೇಹಗಳು ತೇಲುತ್ತಿದ್ದು ದ್ದನ್ನು ಗಮನಿಸಿದ ಸಾರ್ವಜನಿಕರು ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಈಜುಗಾರರ ನೆರವು ಪಡೆದ ಪೊಲೀಸರು ಎರಡೂ ಮೃತದೇಹಗಳನ್ನು ಕೆರೆಯಿಂದ ಮೇಲೆ ತೆಗೆಸಿ ಪರಿಶೀಲಿಸಿದ್ದಾರೆ. ಬಳಿಕ ಇಬ್ಬರ ವಿಳಾಸ, ಮನೆಯವರ ದೂರವಾಣಿ ಸಂಖ್ಯೆ ಪತ್ತೆ ಹಚ್ಚಿದ್ದಾರೆ. ದೂರವಾಣಿ ಕರೆ ಮಾಡಿ ಎರಡೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »