ಮೈಸೂರು

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ
ಮೈಸೂರು

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಬಂಧನ

June 3, 2019

ಬೆಂಗಳೂರು: ಪ್ರಗತಿಪರ ಚಿಂತಕ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕ ರಣವನ್ನು ಭೇದಿಸುವಲ್ಲಿ ಎಸ್‍ಐಟಿ ತಂಡ ಮಹತ್ವದ ಘಟ್ಟಕ್ಕೆ ತಲುಪಿದ್ದು, ಮುಖ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಹುಬ್ಬಳ್ಳಿಯಲ್ಲಿ ಪ್ರಮುಖ ಆರೋಪಿ ಕೃಷ್ಣಮೂರ್ತಿ ಎಂಬಾತ ನನ್ನು ಪೆÇಲೀಸರು ಬಂಧಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಹೇಳಿಕೆಯ ಮೇರೆಗೆ ಕೃಷ್ಣಮೂರ್ತಿಯನ್ನು ಎಸ್‍ಐಟಿ ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಎಂ.ಎಂ.ಕಲ್ಬುರ್ಗಿ ಹತ್ಯೆ ಕೇಸ್ ನಲ್ಲಿ ಆರೋಪಿ ಕೃಷ್ಣಮೂರ್ತಿ ಬೈಕ್ ಓಡಿಸಿದ್ದು, ಗಣೇಶ್ ಮಸ್ಕಿನ್ ಗುಂಡು ಹಾರಿಸಿದ್ದಾಗಿ ದೃಢಪಟ್ಟಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ…

ಇಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಸಿಯಾಚಿನ್‍ಗೆ ಭೇಟಿ
ಮೈಸೂರು

ಇಂದು ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಸಿಯಾಚಿನ್‍ಗೆ ಭೇಟಿ

June 3, 2019

ನವದೆಹಲಿ: ರಕ್ಷಣಾ ಸಚಿವ ರಾಜ್‍ನಾಥ್ ಸಿಂಗ್ ಅವರು ಜಗ ತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‍ಗೆ ಸೋಮವಾರ ಭೇಟಿ ನೀಡಿ, ಪಾಕಿಸ್ತಾನದೊಂದಿಗೆ ಗಡಿ ಹಂಚಿ ಕೊಂಡಿರುವ ಅಲ್ಲಿನ ಭದ್ರತಾ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಈ ಭೇಟಿ ವೇಳೆ ರಕ್ಷಣಾ ಸಚಿವರ ಜತೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ರಕ್ಷಣಾ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಈ ಬಗ್ಗೆ ಸರಕಾರದ ಮೂಲಗಳು ಖಚಿತಪಡಿಸಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ….

ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ
ಮೈಸೂರು

ಕಾವ್ಯದ ಮೂಲಕ ಅಮಾನವೀಯತೆ ವಿರುದ್ಧ ಹೋರಾಡಿದ ಮುಳ್ಳೂರು ನಾಗರಾಜ

June 3, 2019

ಮೈಸೂರು: ಸಾಹಿತಿ ಮುಳ್ಳೂರು ನಾಗರಾಜ ಅವರು ಅಪಮಾನ, ಹಸಿವು, ಅಭದ್ರತೆ, ಅಮಾನವೀಯತೆ ವಿರುದ್ಧ ಕಾವ್ಯದ ಮೂಲಕ ದನಿ ಎತ್ತಿ ಹೋರಾಡಿದ ಹೋರಾಟಗಾರ ಎಂದು ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು. ಮೈಸೂರಿನ ಕಲಾಮಂದಿರ ಕಿರುರಂಗ ಮಂದಿರದಲ್ಲಿ ರಂಗವಾಹಿನಿ, ನೆಲೆ ಹಿನ್ನೆಲೆ, ರಾಮಮನೋಹರ ಲೋಹಿಯಾ ಟ್ರಸ್ಟ್ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮುಳ್ಳೂರು ನಾಗರಾಜ ರಾಜ್ಯಮಟ್ಟದ 9ನೇ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಮುಳ್ಳೂರು ನಾಗರಾಜ ಬಹು ದೊಡ್ಡ ಪ್ರಭಾವಶಾಲಿ ಲೇಖಕರಾಗಿರಲಿಲ್ಲ. ಅಂದಂ…

ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ
ಮೈಸೂರು

ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಣಕ್ಕೆ ಮುಂದಾದ ವಿದ್ಯಾರ್ಥಿ ತಂಡ

June 3, 2019

ಮೈಸೂರು: ಪರಿಸರಕ್ಕೆ ಮಾರಕ ವಾಗುವ ಪ್ಲಾಸ್ಟಿಕ್ ಬ್ಯಾಗ್ ನಿಯಂತ್ರಿಸಲು ವಿದ್ಯಾರ್ಥಿ ತಂಡವೊಂದು ವಿನೂತನ ಕಾರ್ಯಕ್ರಮ ರೂಪಿಸಿದೆ. `ಹಸ್ತಿ’ ಹೆಸರಿನಲ್ಲಿ ವಿದ್ಯಾರ್ಥಿಗಳ ತಂಡವೊಂದು ಸಂಘ ಟಿತವಾಗಿ ಮೈಸೂರಿನ ನಾಗರಿಕರಿಗೆ ಪರಿಸರ ಸ್ನೇಹಿ ಬಟ್ಟೆ ಬ್ಯಾಗ್‍ಗಳನ್ನು ಉಚಿತವಾಗಿ ನೀಡಲು ಮುಂದಾಗಿದೆ. `ಹಸ್ತಿ’ ಎಂದರೆ ಸಂಸ್ಕೃತದಲ್ಲಿ ಹಸಿರು ಎಂಬ ಅರ್ಥ ವಿದ್ದು, ಈ ಹೆಸರಿನಲ್ಲಿ ಮೈಸೂರಿನ ಆರ್‍ಐಇ (ಪ್ರಾದೇಶಿಕ ಶಿಕ್ಷಣ ಸಂಸ್ಥೆ) ಆವರಣದ ಡಿಎಂಎಸ್ ಶಾಲೆಯ 12ನೇ ತರಗತಿ ವಿದ್ಯಾರ್ಥಿಗಳಾದ ಎಸ್.ತೇಜಸ್ವಿನಿ ಹಾಗೂ ಶಿವಶಂಕರ್ ಅಂಬೇಡ್ಕರ್ ಮುಂದಾಳತ್ವದಲ್ಲಿ 10ಕ್ಕೂ ಹೆಚ್ಚು ಮಂದಿಯ…

ಯುಪಿಎಸ್‍ಸಿ ಪರೀಕ್ಷೆಗೆ 3487 ಮಂದಿ ಹಾಜರು
ಮೈಸೂರು

ಯುಪಿಎಸ್‍ಸಿ ಪರೀಕ್ಷೆಗೆ 3487 ಮಂದಿ ಹಾಜರು

June 3, 2019

ಮೈಸೂರು: ಭಾನುವಾರ ನಡೆದ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಮೈಸೂರಿನ 16 ಪರೀಕ್ಷಾ ಕೇಂದ್ರಗಳಲ್ಲಿ 3487 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು. ಯುಪಿಎಸ್‍ಸಿ ಸಂಸ್ಥೆಯು ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಸೇರಿ ದಂತೆ ಇನ್ನಿತರ ನಾಗರಿಕ ಸೇವಾ ಇಲಾಖೆ ಗಳಲ್ಲಿ ಖಾಲಿ ಇರುವ 896 ಹುದ್ದೆಗಳಿಗೆ ಮೈಸೂರು ಸೇರಿದಂತೆ ದೇಶದ 72 ನಗರ ಗಳಲ್ಲಿ ಇಂದು ಏಕಕಾಲಕ್ಕೆ ಪೂರ್ವಭಾವಿ ಪರೀಕ್ಷೆಯನ್ನು ಆಯೋಜಿಸಿತ್ತು. ಮೈಸೂರು ಜಿಲ್ಲೆಯಲ್ಲಿ 6238 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ನೋಂದಣಿ ಮಾಡಿಕೊಂಡಿದ್ದರು. ಇದಕ್ಕಾಗಿ ಮೈಸೂರಿನ ಮಹಾರಾಜ ಪದವಿ ಪೂರ್ವ ಕಾಲೇಜು,…

ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು
ಮೈಸೂರು

ಚಾಮುಂಡಿಬೆಟ್ಟ ಹತ್ತುವ ಸ್ಪರ್ಧೆಯಲ್ಲಿ ಮಿಂಚಿದ ಮಹಿಳಾ ಮಣಿಯರು

June 3, 2019

ಮೈಸೂರು: ಮೈಸೂರಿನ ಜೆ.ಪಿ.ನಗರದ ಅಭ್ಯುದಯ ಮಹಿಳಾ ಸಮಾಜವು ಭಾನುವಾರ ಆಯೋ ಜಿಸಿದ್ದ ಚಾಮುಂಡಿಬೆಟ್ಟ ಮೆಟ್ಟಿಲು ಹತ್ತುವ ಸ್ಪರ್ಧೆಯಲ್ಲಿ ಹಲವಾರು ಮಹಿಳೆಯರು ಪಾಲ್ಗೊಂ ಡಿದ್ದಾರಾದರೂ, ಯುವತಿಯರ ವಿಭಾಗದಲ್ಲಿ ಓಟಗಾರ್ತಿ ತಿಪ್ಪವ್ವ ಸಣ್ಣಕ್ಕಿ 13 ನಿಮಿಷ ಹಾಗೂ ಹಿರಿಯರ ವಿಭಾಗದ ಸ್ಪರ್ಧೆ ಯಲ್ಲಿ ಗೃಹಿಣಿ ಸೌಮ್ಯ 17 ನಿಮಿಷದಲ್ಲಿ ಬೆಟ್ಟ ಹತ್ತುವ ಮೂಲಕ ಗಮನ ಸೆಳೆದರು. ಅಭ್ಯುದಯ ಮಹಿಳಾ ಸಮಾಜ 25ನೇ ವಾರ್ಷಿಕೋತ್ಸವದ(ಬೆಳ್ಳಿ ಹಬ್ಬ) ಹಿನ್ನೆಲೆ ಯಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಚಾಮುಂಡಿಬೆಟ್ಟದ ಮೆಟ್ಟಲು ಹತ್ತುವ ಸ್ಪರ್ಧೆಯಲ್ಲಿ…

ಜೂ.5ರಂದು ಸಾವಿರ ಗಿಡ ನೆಡುವ ಕಾರ್ಯಕ್ರಮ
ಮೈಸೂರು

ಜೂ.5ರಂದು ಸಾವಿರ ಗಿಡ ನೆಡುವ ಕಾರ್ಯಕ್ರಮ

June 3, 2019

ಮೈಸೂರು: ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಜೂ.5 ರಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿಯ ಕಾರ್ಯ ಗ್ರಾಮದ ಸಮೀಪ ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೋಟಿ ವೃಕ್ಷ ಪ್ರತಿಷ್ಠಾನದ ಅಧ್ಯಕ್ಷ ಶ್ರೀಕಾಂತ್ ಭಟ್ ತಿಳಿಸಿದ್ದಾರೆ. ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಜೂ.5 ಬೆಳಿಗ್ಗೆ 7.35ಕ್ಕೆ ಹುಲ್ಲಹಳ್ಳಿಯ ಯಜಮಾನ ಚಿತ್ರಮಂದಿರದ ಬಳಿ ಪರಿಸರ ಪ್ರೇಮಿಗಳು, ಸ್ವಯಂಸೇವಕರೊಂದಿಗೆ ಗಿಡ ನೆಡುವ ಸ್ಥಳಕ್ಕೆ ತೆರಳಿ ಸಾವಿರ ಗಿಡಗಳನ್ನು ನೆಡಲಾಗುವುದು. ಕಳೆದ 4 ವರ್ಷಗಳಿಂದ ಪ್ರತಿಷ್ಠಾನವು…

ಬಜೆಟ್ ಅನುಷ್ಠಾನ ಪ್ರಗತಿ ಮಾಹಿತಿ ಪಡೆಯಲು ಶೀಘ್ರ ಡಿಸಿ, ಸಿಇಓಗಳ ಸಭೆ
ಮೈಸೂರು

ಬಜೆಟ್ ಅನುಷ್ಠಾನ ಪ್ರಗತಿ ಮಾಹಿತಿ ಪಡೆಯಲು ಶೀಘ್ರ ಡಿಸಿ, ಸಿಇಓಗಳ ಸಭೆ

June 2, 2019

ಬೆಂಗಳೂರು: ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಯೋಜನೆಗಳ ಅನು ಷ್ಠಾನ ಕುರಿತಂತೆ ಸಮಾಲೋಚನೆ ಹಾಗೂ ಬರ ಪರಿಹಾರ ನಿರ್ವ ಹಣೆ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾರ್ಯ ನಿರ್ವಹಣಾಧಿ ಕಾರಿಗಳ ಸಭೆ ಕರೆದಿದ್ದಾರೆ. ದೆಹಲಿಯಿಂದ ಹಿಂತಿರುಗುತ್ತಿ ದ್ದಂತೆ ಇಂದು ಇಡೀ ದಿನ ಮುಖ್ಯ ಕಾರ್ಯದರ್ಶಿಗಳ ಜೊತೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಸಭೆ ನಡೆಸಿ ದರು. ವಿಧಾನಸೌಧ ತಮ್ಮ ಕಚೇರಿ ಸೇರಿದಂತೆ ಸರ್ಕಾರಿ ಕಾರ್ಯಾ ಲಯಗಳನ್ನು ದೂರವಿಟ್ಟ ಮುಖ್ಯಮಂತ್ರಿಗಳು ಎಫ್‍ಕೆಸಿಸಿಐ…

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಆಯ್ಕೆ
ಮೈಸೂರು

ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಆಯ್ಕೆ

June 2, 2019

ನವದೆಹಲಿ:ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರು ಆಯ್ಕೆ ಯಾಗಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಲೋಕ ಸಭಾ ಚುನಾವಣೆಯಲ್ಲಿನ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ರಾಹುಲ್ ಗಾಂಧಿ ಮನವೊಲಿಕೆ ಕಸರತ್ತು ಬಿರುಸಿ ನಿಂದ ಸಾಗಿತ್ತು. ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಈ…

ತಂದೆ ಮಗನ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದ ತಂದೆ
ಮೈಸೂರು

ತಂದೆ ಮಗನ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದ ತಂದೆ

June 2, 2019

ಕಿಕ್ಕೇರಿ: ಮಗನ ಜೊತೆ ನಡೆದ ಜಗಳದಲ್ಲಿ ಚೂರಿ ಇರಿತದಿಂದ ತಂದೆ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಾದಾ ಪುರಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದ್ದು, ಪೊಲೀಸರು ಮಗನ ವಿರುದ್ಧ ಉದ್ದೇಶವಲ್ಲದ ಕೊಲೆ (ಐಪಿಸಿ 304) ಪ್ರಕರಣ ದಾಖಲಿಸಿದ್ದಾರೆ. ಗ್ರಾಮದ ನಿವಾಸಿ ನಂಜೇಗೌಡ(59) ತನ್ನ ಮಗ ಮಂಜು ಅಲಿಯಾಸ್ ಮಂಜೇ ಗೌಡ(29) ಜೊತೆ ನಡೆದ ಜಗಳದಲ್ಲಿ ಚೂರಿ ಇರಿತಕ್ಕೆ ಬಲಿಯಾದವರು. ಘಟನೆ ವಿವರ: ಕ್ಲುಲ್ಲಕ ಕಾರಣಕ್ಕೆ ನಂಜೇಗೌಡ ಮತ್ತು ಆತನ ಮಗ ಮಂಜೇ ಗೌಡ ನಡುವೆ ಜಗಳ ಆರಂಭವಾಗಿದೆ. ಈ…

1 962 963 964 965 966 1,611
Translate »