ಬಜೆಟ್ ಅನುಷ್ಠಾನ ಪ್ರಗತಿ ಮಾಹಿತಿ ಪಡೆಯಲು ಶೀಘ್ರ ಡಿಸಿ, ಸಿಇಓಗಳ ಸಭೆ
ಮೈಸೂರು

ಬಜೆಟ್ ಅನುಷ್ಠಾನ ಪ್ರಗತಿ ಮಾಹಿತಿ ಪಡೆಯಲು ಶೀಘ್ರ ಡಿಸಿ, ಸಿಇಓಗಳ ಸಭೆ

June 2, 2019

ಬೆಂಗಳೂರು: ಮುಂಗಡ ಪತ್ರದಲ್ಲಿ ಪ್ರಕಟಿಸಿರುವ ಯೋಜನೆಗಳ ಅನು ಷ್ಠಾನ ಕುರಿತಂತೆ ಸಮಾಲೋಚನೆ ಹಾಗೂ ಬರ ಪರಿಹಾರ ನಿರ್ವ ಹಣೆ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಕಾರ್ಯ ನಿರ್ವಹಣಾಧಿ ಕಾರಿಗಳ ಸಭೆ ಕರೆದಿದ್ದಾರೆ.

ದೆಹಲಿಯಿಂದ ಹಿಂತಿರುಗುತ್ತಿ ದ್ದಂತೆ ಇಂದು ಇಡೀ ದಿನ ಮುಖ್ಯ ಕಾರ್ಯದರ್ಶಿಗಳ ಜೊತೆ ಆಡಳಿತಕ್ಕೆ ಚುರುಕು ಮುಟ್ಟಿಸುವ ಉದ್ದೇಶದಿಂದ ಸಭೆ ನಡೆಸಿ ದರು. ವಿಧಾನಸೌಧ ತಮ್ಮ ಕಚೇರಿ ಸೇರಿದಂತೆ ಸರ್ಕಾರಿ ಕಾರ್ಯಾ ಲಯಗಳನ್ನು ದೂರವಿಟ್ಟ ಮುಖ್ಯಮಂತ್ರಿಗಳು ಎಫ್‍ಕೆಸಿಸಿಐ ಕಚೇರಿಯಲ್ಲಿ ಕಡತ ವಿಲೇವಾರಿ ಮತ್ತು ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಸಂಬಂಧ ಚರ್ಚೆ ಮಾಡಿದರು.

ಬಜೆಟ್ ಅನುಷ್ಠಾನದ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿಗಳಿಂದಲೇ ಮಾಹಿತಿ ಪಡೆಯುವ ಉದ್ದೇಶದಿಂದ ತಕ್ಷಣವೇ ಜಿಲ್ಲಾಡಳಿತದ ಸಭೆ ಕರೆಯುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು.

ಅಷ್ಟೇ ಅಲ್ಲ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಪರಿಶೀಲನೆ ಕುರಿತಂತೆ ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಪಡೆದ ಮುಖ್ಯಮಂತ್ರಿಯವರು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆರಂಭಗೊಳ್ಳುತ್ತಿರುವ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಮೊದಲ ಆದ್ಯತೆ ನೀಡುವಂತೆ ಸಲಹೆ ಮಾಡಿದರು. ಸರ್ಕಾರ ಆರಂಭ ಮಾಡುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಗ್ರಾಮೀಣ ಭಾಗದಲ್ಲಿ ಭಾರೀ ಬೇಡಿಕೆ ಬಂದಿದೆ. ಇದರಿಂದ ಸಾವಿರಾರು ರೂ. ಕೊಟ್ಟು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದ ಹುಡುಗರು ಇದೀಗ ನಮ್ಮ ಶಾಲೆಗಳತ್ತ ಬರುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ಬೋಧಕ ಸಿಬ್ಬಂದಿ ಅಲ್ಲದೆ, ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗಿದ್ದರೆ, ಅಥವಾ ಮಂದಗತಿಯಲ್ಲಿ ಸಾಗುತ್ತಿದ್ದರೆ, ಇದಕ್ಕೆ ಕಾರಣಗಳರಿತು, ತಕ್ಷಣವೇ ಸಮಸ್ಯೆ ಬಗೆಹರಿಸಿ ಎಂದು ಮುಖ್ಯ ಕಾರ್ಯದರ್ಶಿಯವರಿಗೆ ಸಲಹೆ ಮಾಡಿದರು.

ಆರೋಗ್ಯ, ಶಿಕ್ಷಣ ಮತ್ತು ವಸತಿ ಯೋಜನೆಗಳಿಗೆ ನನ್ನ ಆದ್ಯತೆ ಇರಲಿ, ಈ ವಿಷಯದಲ್ಲಿ ಎಲ್ಲಿಯಾದರೂ ಲೋಪ ಕಂಡು ಬಂದಲ್ಲಿ ತಕ್ಷಣವೇ ನೀವು ಮಧ್ಯೆ ಪ್ರವೇಶ ಮಾಡಿ, ಕ್ರಮ ಕೈಗೊಳ್ಳಿ ಎಂದು ಸಲಹೆ ಮಾಡಿದ್ದಾರೆ.

ದಿನದಿಂದ ದಿನಕ್ಕೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ವಿಸ್ತರಣೆ ಮತ್ತು ಆಧುನಿಕ ಸೌಕರ್ಯ ಕಲ್ಪಿಸಲು ನಾವು ನಿಗದಿಪಡಿಸಿರುವ ಹಣವನ್ನು ತ್ವರಿತಗತಿಯಲ್ಲಿ ವೆಚ್ಚ ಮಾಡಿ. ಅಗತ್ಯ ಕಂಡು ಬಂದಲ್ಲಿ ವೈದ್ಯರ ನೇಮಕಾತಿಗೂ ನೀವು ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದಾರೆ. ವಸತಿ ಯೋಜನೆಗಳ ಸಮರ್ಪಕ ಅನುಷ್ಠಾನ ಹಾಗೂ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರೆಯು ವುದನ್ನು ಖಾತರಿಪಡಿಸಲು ಕ್ರಮ ವಹಿಸುವಂತೆ ನಿರ್ದೇಶನ ನೀಡಿದರು.

ರಾಜ್ಯದಲ್ಲಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ, ಆದರೂ ಕೆಲವು ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದೆ ಎದುರಾಗಬಹುದಾದ ಸಂಕಷ್ಟಗಳಿಗೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಇದೂ ಸೇರಿದಂತೆ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆಯಲು ಜಿಲ್ಲಾಧಿಕಾರಿ ಹಾಗೂ ಕಾರ್ಯನಿರ್ವಹಣಾ ಧಿಕಾರಿಗಳ ಸಭೆ ಕರೆಯುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದಾರೆ.

Translate »