ಮೈಸೂರು

ಸರ್ಕಾರ ರಚಿಸಲು ಮೋದಿಗೆ ರಾಷ್ಟ್ರಪತಿ ಆಹ್ವಾನ
ಮೈಸೂರು

ಸರ್ಕಾರ ರಚಿಸಲು ಮೋದಿಗೆ ರಾಷ್ಟ್ರಪತಿ ಆಹ್ವಾನ

May 26, 2019

ನವದೆಹಲಿ: ಕೇಂದ್ರದಲ್ಲಿ ಸರ್ಕಾರ ರಚಿಸಲು ಎನ್‍ಡಿಎ ಮೈತ್ರಿ ಕೂಟದ ಸಂಸದೀಯ ನಾಯಕ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾತ್ರಿ ಆಹ್ವಾನ ನೀಡಿದರು. ಎನ್‍ಡಿಎ ಸಂಸದೀಯ ನಾಯಕರಾಗಿ ಆಯ್ಕೆಯಾದ ನಂತರ ಮೋದಿ ಅವರು ಇಂದು ಸಂಜೆ ರಾಷ್ಟ್ರಪತಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಅದಕ್ಕೆ ಸಮ್ಮತಿಸಿದ ರಾಷ್ಟ್ರಪತಿ, ಸರ್ಕಾರ ರಚನೆಗೆ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ ಎಂದು ರಾಷ್ಟ್ರ ಪತಿ ಭವನ ಟ್ವೀಟ್ ಮಾಡಿದೆ. ಇದೇ ವೇಳೆ ರಾಷ್ಟ್ರಪತಿ ಭವನದಲ್ಲಿ…

ಅಹಂಕಾರವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೇ ಒಳ್ಳೆಯದು..
ಮೈಸೂರು

ಅಹಂಕಾರವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೇ ಒಳ್ಳೆಯದು..

May 26, 2019

ನವದೆಹಲಿ: ನಮಗೆ ಯಾವತ್ತೂ ಅಹಂಕಾರ ಬರಬಾರದು. ಅಹಂಕಾರ ವನ್ನು ಎಷ್ಟು ದೂರ ತಳ್ಳುತ್ತೇವೆಯೋ ಅಷ್ಟು ನಮಗೆ ಒಳ್ಳೆಯದಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸದರಿಗೆ ಪಾಠ ಮಾಡಿದರು. ಸಂಸತ್‍ನ ಸೆಂಟ್ರಲ್ ಹಾಲ್‍ನಲ್ಲಿ ನಡೆದ ಎನ್‍ಡಿಎ ಮೈತ್ರಿ ಕೂಟದ ಸಭೆಯಲ್ಲಿ ಸಂಸದೀಯ ನಾಯಕನಾಗಿ ಆಯ್ಕೆಯಾದ ನಂತರ ನೂತನ ಸಂಸದರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಜನರಿಂದಾಗಿ ನಾವು ಇಲ್ಲಿ ಇದ್ದೇವೆ. ನಾವು ಎಷ್ಟೇ ಬೆಳೆದರೂ ನಮ್ಮ ಬೇರುಗಳನ್ನು ಕೈಬಿಡಬಾರದು. ಯಾವಾಗ ನಿಮ್ಮಲ್ಲಿ ಅಹಂಕಾರ ಬೆಳೆಯುತ್ತದೋ, ಆಗ ಮೋದಿ ಅಲ್ಲ,…

ರಾಹುಲ್ ಗಾಂಧಿ ರಾಜೀನಾಮೆ ನಿಲುವು ತಿರಸ್ಕರಿಸಿದ ಕಾಂಗ್ರೆಸ್ ಕಾರ್ಯಕಾರಿಣಿ
ಮೈಸೂರು

ರಾಹುಲ್ ಗಾಂಧಿ ರಾಜೀನಾಮೆ ನಿಲುವು ತಿರಸ್ಕರಿಸಿದ ಕಾಂಗ್ರೆಸ್ ಕಾರ್ಯಕಾರಿಣಿ

May 26, 2019

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಲು ಮುಂದಾದ ರಾಹುಲ್‍ಗಾಂಧಿ ಅವರ ನಿಲುವನ್ನು ಸರ್ವಾನು ಮತದಿಂದ ತಿರಸ್ಕರಿಸಿರುವ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ, ಪಕ್ಷವನ್ನು ಪುನರ್ ರಚಿಸುವ ಅಧಿಕಾರವನ್ನು ರಾಹುಲ್ ಗಾಂಧಿ ಅವರಿಗೆ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆಗಾಗಿ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ. ಕಾಂಗ್ರೆಸ್ ಕಾರ್ಯಕಾರಿಣಿ ಅದನ್ನು ಸರ್ವಾನುಮತದಿಂದ ತಿರಸ್ಕರಿಸಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ…

ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ
ಮೈಸೂರು

ಪ್ರತಿ ಹೆಜ್ಜೆಯಲ್ಲೂ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತೇನೆ

May 26, 2019

ಬೆಂಗಳೂರು: ಉತ್ತಮ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಿಗೆ ನಿಯೋಜಿಸಿ ಆಡಳಿತ ಯಂತ್ರದ ಮೇಲೆ ಬಿಗಿ ಹಿಡಿತ ಸಾಧಿಸಿ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ನಂತರ ಕುಮಾರ ಸ್ವಾಮಿ ಅವರು, ಸಿದ್ದರಾಮಯ್ಯ ನಿವಾಸಕ್ಕೆ ಶುಕ್ರವಾರ ತೆರಳಿ ಸುದೀರ್ಘ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಈ ಸಲಹೆ ನೀಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ನಿಮ್ಮ ವಿಷಯದಲ್ಲಿ ನಾನೂ ತಪ್ಪಾಗಿ ನಡೆದು ಕೊಂಡಿದ್ದೇನೆ, ನಿಮ್ಮಿಂದಲೂ ತಪ್ಪಾ ಗಿದೆ, ಆಗಿದ್ದನ್ನು ಮರೆಯೋಣ,…

ಪಕ್ಷೇತರರ ಸೆಳೆದ ಸಿದ್ದರಾಮಯ್ಯ
ಮೈಸೂರು

ಪಕ್ಷೇತರರ ಸೆಳೆದ ಸಿದ್ದರಾಮಯ್ಯ

May 26, 2019

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬೆಂಬಲಿಗರು ಆಪರೇಷನ್ ಕಮಲಕ್ಕೆ ಮುಂದಾಗಿರುವ ಬೆನ್ನಲ್ಲೇ ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ, ಪ್ರತಿಪಕ್ಷವನ್ನು ಬೆಂಬ ಲಿಸಿದ್ದ ಶಾಸಕರನ್ನು ಮತ್ತೆ ಸೆಳೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷದ ವರಿಷ್ಠರು ಮತ್ತು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನೀಡಿದ್ದ ವಾಗ್ದಾನದಂತೆ ಇಬ್ಬರು ಪಕ್ಷೇತರ ಸದಸ್ಯರನ್ನು ಮತ್ತೆ ಹಿಂದಕ್ಕೆ ಕರೆತಂದಿದ್ದಾರೆ. ಈಗಾಗಲೇ ನಾಗೇಶ್ ಕಾಂಗ್ರೆಸ್ ಸೇರಿಯಾಗಿದೆ, ಮತ್ತೊಬ್ಬ ಪಕ್ಷೇತರ ಸದಸ್ಯ ಆರ್. ಶಂಕರ್ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡು ಮತ್ತೆ ಮರಳುವ ನಿರ್ಧಾರ ತಿಳಿಸಿದ್ದಾರೆ. ಶಂಕರ್…

ಮಾರುತಿ ರಿಟ್ಜ್ ಕಾರಿನೊಂದಿಗೆ ಪರಾರಿಯಾದ ಚಾಲಾಕಿ ಕಳ್ಳ
ಮೈಸೂರು

ಮಾರುತಿ ರಿಟ್ಜ್ ಕಾರಿನೊಂದಿಗೆ ಪರಾರಿಯಾದ ಚಾಲಾಕಿ ಕಳ್ಳ

May 26, 2019

ಮೈಸೂರು: ಖತರ್ನಾಕ್ ಕಳ್ಳನೊಬ್ಬ ಬೇರೊಬ್ಬರ ಟ್ಯಾಬ್‍ನಿಂದ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ತಾನು ಬಾಡಿಗೆ ಕರೆದೊಯ್ದಿದ್ದ ಕಾರನ್ನೇ ಎಗರಿಸಿ ಪರಾರಿಯಾದ ಸಿನಿಮೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ರೈಲ್ವೆ ನಿಲ್ದಾಣದ ಬಳಿ ನಿಂತಿದ್ದ ವ್ಯಕ್ತಿಯೊಬ್ಬರ ಟ್ಯಾಬ್‍ನಲ್ಲಿ ಜುಗ್ನೂ ಕ್ಯಾಬ್ ಬುಕ್ ಮಾಡಿಸಿ, ಸ್ಥಳಕ್ಕೆ ಬಂದ ಮಾರುತಿ ರಿಟ್ಜ್ ಕಾರಿನಲ್ಲಿ ಮೊದಲು ಇನ್ಫೋ ಸಿಸ್ ಬಳಿಗೆ ತೆರಳಿ, ನಂತರ ಚಾಲಕನ ಮನವೊಲಿಸಿ ಮೈಸೂರು ತಾಲೂಕು ಮೇಗಳಾಪುರದ ಬಳಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಅಲ್ಲಿ ಚಾಲಕನಿಗೆ ಚಳ್ಳೆಹಣ್ಣು ತಿನ್ನಿಸಿ, ಕಾರನ್ನೇ…

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಮಮತಾ ಬ್ಯಾನರ್ಜಿಯನ್ನು ತಡೆದ ಟಿಎಂಸಿ
ದೇಶ-ವಿದೇಶ, ಮೈಸೂರು

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಮಮತಾ ಬ್ಯಾನರ್ಜಿಯನ್ನು ತಡೆದ ಟಿಎಂಸಿ

May 26, 2019

ಕೋಲ್ಕತಾ: ಲೋಕಸಭೆ ಚುನಾವಣೆಯ ಸೋಲಿನ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾ ಗಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪ್ರಸ್ತಾವನೆಯನ್ನು ಟಿಎಂಸಿ ತಿರಸ್ಕರಿ ಸಿದೆ. ಇಂದು ಟಿಎಂಸಿ ನಾಯಕರ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದೆ. ಆದರೆ, ಪಕ್ಷ ನನ್ನ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಹೀಗಾಗಿ ನಾನು ಸಿಎಂ ಸ್ಥಾನದಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಬಿಜೆಪಿ ಪಶ್ಚಿಮ ಬಂಗಾಳದಲ್ಲಿ…

ಮೈಸೂರಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭ
ಮೈಸೂರು

ಮೈಸೂರಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭ

May 26, 2019

ಮೈಸೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮ ಕಾತಿಗಾಗಿ ಮೈಸೂರಲ್ಲಿ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆ ಗಳು ಆರಂಭವಾಗಿವೆ. ಶಿಕ್ಷಣ ಇಲಾಖೆಯಿಂದ ಆಯೋಜಿಸಿರುವ ಸ್ಪರ್ಧಾ ತ್ಮಕ ಪರೀಕ್ಷೆಗಳು ಮೈಸೂರಿನ ನಿರ್ಮಲ ಪ್ರೌಢಶಾಲೆ, ಚಿನ್ಮಯ ಪದವಿ ಪೂರ್ವ ಕಾಲೇಜು, ಮರಿಮಲ್ಲಪ್ಪ ಪಿಯು ಕಾಲೇಜು, ಅವಿಲಾ ಕಾನ್ವೆಂಟ್, ವಿಜಯ ವಿಠಲ ಶಿಕ್ಷಣ ಸಂಸ್ಥೆ, ಸೇಂಟ್ ಮೇರಿಸ್ ಪ್ರೌಢಶಾಲೆ, ನಟರಾಜ ಪ್ರಥಮ ದರ್ಜೆ ಕಾಲೇಜು, ಜೆಎಸ್‍ಎಸ್ ಪ್ರೌಢಶಾಲೆ, ಮಹಾರಾಜ, ಸದ್ವಿದ್ಯಾ, ಮಹಾರಾಣಿ, ಗೋಪಾಲಸ್ವಾಮಿ ಕಾಲೇಜು ಕೇಂದ್ರಗಳಲ್ಲಿ ನಡೆಯುತ್ತಿವೆ. ಮೊದಲ ದಿನವಾದ ಇಂದು…

ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ
ಮೈಸೂರು

ಜೂ.1ರಿಂದ ಬಸ್ ದರ ಏರಿಕೆಯಾಗಲ್ಲ

May 26, 2019

ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಇದುವರೆಗೆ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. ಸದ್ಯಕ್ಕೆ ಬಸ್ ದರ ಹೆಚ್ಚಳ ಇಲ್ಲ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾಪ ಕಳುಹಿಸಲಾಗಿತ್ತಾದರೂ ಅದರ ಬಗ್ಗೆ ಇನ್ನೂ ಚರ್ಚೆಯೇ ನಡೆದಿಲ್ಲ. ನಮ್ಮ ಹಂತದಲ್ಲಿಯೂ ಇನ್ನೂ ಚರ್ಚೆ ಯಾಗಿಲ್ಲ. ಪ್ರಯಾಣ ದರ ಹೆಚ್ಚಳ ಬಗ್ಗೆ ಮುಖ್ಯಮಂತ್ರಿಗಳು ಅನುಮತಿ ನೀಡಿಲ್ಲ. ಪ್ರಸ್ತಾವನೆ ಇನ್ನೂ ಚರ್ಚೆಯ ಹಂತ ದಲ್ಲಿಯೇ…

ಪ್ರತ್ಯೇಕ ಹಲ್ಲೆ: 6 ಮಂದಿ ಬಂಧನ
ಮೈಸೂರು

ಪ್ರತ್ಯೇಕ ಹಲ್ಲೆ: 6 ಮಂದಿ ಬಂಧನ

May 26, 2019

ಮೈಸೂರು: ಪ್ರತ್ಯೇಕ ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಶಾಂತಲಾ ಚಿತ್ರಮಂದಿರದ ಸಿಗ್ನಲ್ ಬಳಿ ಮೇ19ರಂದು ಬೆಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಗೊಲ್ಲಗೇರಿಯ ನಿವಾಸಿ ಮನೋಜ್ (22), ಇಟ್ಟಿಗೆಗೂಡಿನ ನಿವಾಸಿ ಹರ್ಷಿತಾಗೌಡ (25) ಹಾಗೂ ವೀಣೆಶೇಷಣ್ಣ ರಸ್ತೆಯ ನಿವಾಸಿ ಮಹೇಶ್‍ಕುಮಾರ್ (24) ಅವರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಚಂದು ಎಂಬುವವನನ್ನು ಬಂಧಿಸಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಮದ್ಯ ಸೇವಿಸಿ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪ…

1 973 974 975 976 977 1,611
Translate »