ರಾಮನಗರ: ರಾಜ್ಯದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಕಾಂಗ್ರೆಸ್ ಹಿಂದೆ ಸರಿಯಬೇಕು, ಒಂದೊಮ್ಮೆ ಮೈತ್ರಿ ಮುಂದು ವರಿಸಿದರೆ, ಪಕ್ಷ ನಾಮಾವಶೇಷವಾಗಲಿದೆ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಮೇಲ್ಮನೆ ಸದಸ್ಯ ಸಿ.ಎಂ.ಲಿಂಗಪ್ಪ ಶನಿವಾರ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಅತಿ ದೊಡ್ಡ ಪ್ರಮಾದ ಎಸಗಿದೆ ಎಂದು ಅಭಿಪ್ರಾಯಪಟ್ಟರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲನ್ನು ಪ್ರಸ್ತಾಪಿಸಿದ ಲಿಂಗಪ್ಪ, ದೇಶದ ಚುನಾವಣಾ ಇತಿಹಾಸದಲ್ಲಿ ಕಾಂಗ್ರೆಸ್…
ದೇಶ ಬಿಟ್ಟು ಹೋಗುತ್ತಿದ್ದ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್, ಪತ್ನಿಯನ್ನು ತಡೆದ ಅಧಿಕಾರಿಗಳು
May 26, 2019ಮುಂಬೈ: ತೀವ್ರ ಆರ್ಥಿಕ ಸಂಕಷ್ಟ ಹಾಗೂ ಸಾಲದಿಂದಾಗಿ ಹಾರಾಟ ಸ್ಥಗಿತಗೊಳಿಸಿರುವ ಜೆಟ್ ಏರ್ ವೇಸ್ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಗೋಯಲ್ ಅವರ ವಿದೇಶ ಪ್ರವಾಸಕ್ಕೆ ಅನುಮತಿ ನೀಡಲು ವಲಸೆ ಪ್ರಾಧಿಕಾರಿದ ಅಧಿಕಾರಿಗಳು ನಿರಾಕರಿಸಿದ್ದಾರೆ. ಇಂದು ದೇಶ ಬಿಟ್ಟು ಹೊರಡಲು ಅಣಿಯಾಗಿ ವಿಮಾನ ಏರಲು ಬಂದಿದ್ದ ನರೇಶ್ ಗೋಯಲ್ ಮತ್ತು ಅವರ ಪತ್ನಿ ಅನಿತಾ ಅವರನ್ನು ವಿಮಾನ ನಿಲ್ದಾಣ ಅಧಿಕಾರಿ ಗಳು ತಡೆದಿದ್ದಾರೆ. ನರೇಶ್ ಗೋಯಲ್ ಅವರು ತಮ್ಮ ಪತ್ನಿಯೊಂದಿಗೆ ಇಂದು…
ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದ ಶಾಸಕ ಎನ್.ಮಹೇಶ್
May 26, 2019ಚಾಮರಾಜನಗರ: ನಾನು ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಿಳಿಸಿದ್ದಾರೆ. ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ವದಂತಿಯ ಬಗ್ಗೆ ಮಾತನಾಡಿದ ಅವರು ನಾನು ಬಿಜೆಪಿಗೆ ಹೋಗುವ ಮಾತೇ ಇಲ್ಲ. ನಾನು ಬಿಎಸ್‍ಪಿ ಪಕ್ಷದ ಶಿಸ್ತಿನ ಸಿಪಾಯಿ ಯಾಗಿದ್ದೇನೆ. ಪಕ್ಷದ ಹೈಕಮಾಂಡ್ ಮಾಯಾವತಿ ಅವರು ಹೇಳಿದರೆ ನಾನು ಬಿಜೆಪಿಗೆ ಬೆಂಬಲ ನೀಡುತ್ತೇನೆ ಎಂದರು. ಇದಕ್ಕೂ ಮೊದಲು ನನ್ನ ವಿರುದ್ಧದ ಹೇಳಿಕೆಗಳು ಕೇವಲ ಉಹಾಪೆÇೀಹಗಳು ಅಷ್ಟೇ. ನಾನು ಈಗ ಸಮ್ಮಿಶ್ರ ಸರ್ಕಾರದಿಂದ ತಾಂತ್ರಿಕವಾಗಿ ಹೊರಗುಳಿದಿದ್ದೇನೆ ಎಂದು…
ಗಣಪತಿ ಸಚ್ಚಿದಾನಂದ ಶ್ರೀಗಳ 77ನೇ ವರ್ಧಂತ್ಯುತ್ಸವ
May 26, 2019ಮೈಸೂರು: ಮೈಸೂರಿನ ಊಟಿ ರಸ್ತೆಯಲ್ಲಿರುವ ಅವ ಧೂತ ದತ್ತಪೀಠ ಶ್ರೀ ಗಣಪತಿ ಸಚ್ಚಿದಾ ನಂದ ಆಶ್ರಮದಲ್ಲಿ ಶನಿವಾರ ವಿಕಲಚೇ ತನರಿಗೆ ವಿವಿಧ ಸಹಾಯ ವಸ್ತುಗಳ ವಿತರಣೆ ಮತ್ತು ದತ್ತಪೀಠ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಯವರ 77ನೇ ವರ್ಧಂತ್ಯುತ್ಸವ, ನಾದ ಮಂಟಪದ 21ನೇ ವಾರ್ಷಿಕೋತ್ಸವ ಹಾಗೂ ಶ್ರೀ ದತ್ತವೆಂಕಟೇಶ್ವರ ಸ್ವಾಮಿ ಕ್ಷೇತ್ರದ 20ನೇ ಬ್ರಹ್ಮೋತ್ಸವ ಅಂಗವಾಗಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು 5 ಮಂದಿ ವಯಸ್ಕರರಿಗೆ ಮೊಣಕೈ ಊರು…
ಈ ಬಾರಿಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ: ಜಿ.ಟಿ.ದೇವೇಗೌಡ ಸಲಹೆ
May 26, 2019ಬೆಂಗಳೂರು: ಪುಲ್ವಾಮಾ ದಾಳಿ, ಸರ್ಜಿಕಲ್ ಸ್ಟ್ರೈಕ್‍ಗಳನ್ನು ಮುಂದಿಟ್ಟು ಕೊಂಡು ಚುನಾವಣೆಗಳನ್ನು ನಡೆಸಿ, ಕೇಂದ್ರದಲ್ಲಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ಮೋದಿ ಈ ಬಾರಿ ಯಾದರೂ ಅಭಿವೃದ್ಧಿಯತ್ತ ಗಮನ ಕೊಡಲಿ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಲಹೆ ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮದವ ರೊಂದಿಗೆ ಮಾತನಾಡಿದ ಅವರು, ಮೋದಿ ಈ ಮೊದಲು ಭರವಸೆ ಕೊಟ್ಟಂತೆ 15 ಲಕ್ಷ ರೂ.ಗಳನ್ನು ಪ್ರತಿಯೊಬ್ಬರ ಖಾತೆಗೆ ಹಾಕಲಿ. ರಾಜ್ಯದ ಬರ ಪರಿಸ್ಥಿತಿಗೆ, ಕುಡಿ ಯುವ ನೀರಿಗೆ ಸರಕಾರ ಕಳುಹಿಸಿರುವ ಪ್ರಸ್ತಾವನೆಯಂತೆ ಹಣ ನೀಡಲಿ….
ಮುಂಬೈ ಚೆ ರಾಜೆ ತಂಡಕ್ಕೆ ಜಯ
May 26, 2019ಮೈಸೂರು: ಮೈಸೂರಿನ ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಮುಂಬೈ ಚೆ ರಾಜೆ ತಂಡವು ಚೆನ್ನೈ ಚಾಲೆಂಜರ್ಸ್ ತಂಡದ ವಿರುದ್ಧ 4 ಅಂಕಗಳ ಗೆಲುವು ಸಾಧಿಸಿತು. ಇಂಡೋ ಇಂಟರ್‍ನ್ಯಾಷನಲ್ ಕಬಡ್ಡಿ ಫೆಡರೇಷನ್ ಮತ್ತು ಡಿ ಸ್ಪೋಟ್ರ್ಸ್ ಸಹ ಯೋಗದೊಂದಿಗೆ ಆಯೋಜಿಸಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿ ಯರ್ ಕಬಡ್ಡಿ ಪಂದ್ಯಾವಳಿಯ ಶನಿವಾರ ನಡೆದ ಪಂದ್ಯದಲ್ಲಿ ಆರಂಭದಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಮುಂಬೈ ಚೆ ರಾಜೆ ತಂಡ ದ್ವಿತೀಯಾರ್ಧದಲ್ಲಿ ಉತ್ತಮ ಆಟ ಪ್ರದರ್ಶಿಸಿ ಚೆÀನ್ನೈ ಚಾಲೆಂಜರ್ಸ್…
2022ರೊಳಗಾಗಿ ಕೆ.ಆರ್.ಕ್ಷೇತ್ರದ ಬಾಡಿಗೆ ಮನೆಯಲ್ಲಿರುವವರಿಗೆ ಸೂರು
May 26, 2019ಮೈಸೂರು: 2022ರೊಳಗಾಗಿ ಪ್ರಧಾನಮಂತ್ರಿಗಳ ಕನಸಿನಂತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಮೈಸೂರಿನ ಕೆ.ಆರ್.ಕ್ಷೇತ್ರದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಸ್ವಂತ ಸೂರು ಒದಗಿಸಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಸಂಸದರಾಗಿ ಎರಡನೇ ಬಾರಿ ಪ್ರತಾಪ್ ಸಿಂಹ ಅವರನ್ನು ಆಯ್ಕೆ ಮಾಡಿದ ಮತ ದಾರರಿಗೆ ಕೃತಜ್ಞತೆ ಹೇಳುವ ಸಲುವಾಗಿ ಮೈಸೂರಿನ ಬಿ.ಎನ್. ರಸ್ತೆಯಲ್ಲಿರುವ ಹೋಟೆಲ್ ಪ್ರೆಸಿಡೆಂಟ್‍ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಭಾರತದ 75ನೇ ಸ್ವಾತಂತ್ರ್ಯ ವರ್ಷ ವಾದ 2022ರ ಆಗಸ್ಟ್ 15ರೊಳಗಾಗಿ ಪ್ರಧಾನಮಂತ್ರಿಗಳ ಆವಾಜ್ ಹಾಗೂ…
ಮಾವು ಮೇಳ: ಒಂದೇ ದಿನದಲ್ಲಿ 19513 ಕೆಜಿ ಮಾವು ಮಾರಾಟ
May 26, 2019ಮೈಸೂರು: ಮಾವು ಮೇಳದಲ್ಲಿ ಕೆಲವು ಮಳಿಗೆಗಳಲ್ಲಿ ನಿಗದಿ ಪಡಿಸಿರುವ ಬೆಲೆಗಿಂತ ಹೆಚ್ಚಾಗಿ ಹಣ ವಸೂಲಿ ಮಾಡಲಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶನಿವಾರ ತೋಟ ಗಾರಿಕೆ ಇಲಾಖೆ ಹಿರಿಯ ಅಧಿಕಾರಿಗಳು ಎಲ್ಲಾ ಮಳಿಗೆಗಳಲ್ಲಿ ಪರಿಶೀಲಿಸಿದರಲ್ಲದೆ, ಹೆಚ್ಚುವರಿ ಹಣ ಪಡೆದರೆ ಮೇಳದಲ್ಲಿ ಮಾರಾಟ ಮಾಡಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಮೈಸೂರಿನ ಕರ್ಜನ್ ಪಾರ್ಕ್ ಆವ ರಣದಲ್ಲಿ ತೋಟಗಾರಿಕಾ ಇಲಾಖೆ ಆಯೋಜಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದ್ದು,…
ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹಗೆ ಅತೀ ಹೆಚ್ಚು ಮತಗಳ ಮುನ್ನಡೆ
May 26, 2019ಮೈಸೂರು: ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಪ್ರತಾಪ್‍ಸಿಂಹರಿಗೆ ಅತ್ಯಧಿಕ ಮತಗಳ ಮುನ್ನಡೆ ದೊರೆತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಪ್ರೆಸಿಡೆಂಟ್ ಹೋಟೆಲಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾ ಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 60,000 ಮತಗಳ ಮುನ್ನಡೆ ಸಾಧಿಸಲು ಅವಕಾಶ ನೀಡಿ, ಪ್ರತಾಪ್‍ಸಿಂಹ 2ನೇ ಬಾರಿ ಸಂಸದರಾಗಿ ಆಯ್ಕೆಯಾಗಲು ಕಾರಣಕರ್ತರಾದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದರು. 2018ರ ವಿಧಾನಸಭೆ ಚುನಾವಣೆಯಲ್ಲಿ 1,46,690 ಮತಗಳು ಚಲಾವಣೆಯಾಗಿತ್ತು. 100 ದಿನಗಳಲ್ಲಿ 1 ಲಕ್ಷ ಮತ ಕ್ಷೇತ್ರವಾಗಿಸುವ…
ಮೈಸೂರು ವಿವಿಯಲ್ಲಿ ಬರೀ ಶೇ.49ರಷ್ಟು ಬೋಧಕ ವರ್ಗವಿದೆ
May 26, 2019ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ನ್ಯಾಕ್ ಮಾನ್ಯತೆಗಾಗಿ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ ಉಪ ನ್ಯಾಸಕರ ಕೊರತೆಯನ್ನೂ ಎದುರಿಸುತ್ತಿದೆ. ಪ್ರಸ್ತುತ ಕೇವಲ ಶೇ.49ರಷ್ಟು ಬೋಧಕ ವರ್ಗ ಹೊಂದಿದೆ ಎಂದು ಸ್ವತಃ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ವಿಷಾದಿಸಿದ್ದಾರೆ. ಮೈಸೂರು ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಶನಿವಾರ ವಿಶ್ವ ವಿದ್ಯಾನಿಲಯದ ನ್ಯಾಕ್ ಮಾನ್ಯತೆ ಪ್ರಕ್ರಿಯೆ ಸಂಬಂಧ ವಿವಿಯ ಯೋಜನೆ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಬೋರ್ಡ್ (ಪಿಎಂ ಇಬಿ) ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಾಗಾರ…










