News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಕೇಂದ್ರ ಮಧ್ಯಪ್ರವೇಶ
News

ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಕೇಂದ್ರ ಮಧ್ಯಪ್ರವೇಶ

December 15, 2022

ನವದೆಹಲಿ: ಕರ್ನಾಟಕ ಮತ್ತು ಮಹಾ ರಾಷ್ಟ್ರ ನಡುವಿನ ಗಡಿ ಗಲಾಟೆಗೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಈ ಸಂಬಂಧ ಪ್ರತ್ಯೇಕ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಉಭಯ ರಾಜ್ಯಗಳ ಗಡಿ ವಿವಾದ ರಸ್ತೆ ಯಲ್ಲಿ ನಿಂತು ಬಗೆಹರಿಸುವ ವಿಷಯ ವಲ್ಲ. ಸಂವಿಧಾನಬದ್ಧವಾಗಿ ವಿವಾದ ಇತ್ಯರ್ಥಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾ ದದ ಇತ್ಯರ್ಥ ಹಾಗೂ ಸಾಂವಿಧಾನಿಕ…

ವಯಸ್ಸಾದವರಿಗೆ ಸಹಾಯ ಮಾಡುವ ಸೋಗಿನಲ್ಲಿ ಅವರ ಎಟಿಎಂ ಕಾರ್ಡ್ ಕದ್ದು ಭಾರೀ ವಂಚನೆ ಮೈಸೂರು ಖದೀಮ ಚಿಕ್ಕಬಳ್ಳಾಪುರದಲ್ಲಿ ಬಂಧನ
News

ವಯಸ್ಸಾದವರಿಗೆ ಸಹಾಯ ಮಾಡುವ ಸೋಗಿನಲ್ಲಿ ಅವರ ಎಟಿಎಂ ಕಾರ್ಡ್ ಕದ್ದು ಭಾರೀ ವಂಚನೆ ಮೈಸೂರು ಖದೀಮ ಚಿಕ್ಕಬಳ್ಳಾಪುರದಲ್ಲಿ ಬಂಧನ

December 15, 2022

ಚಿಕ್ಕಬಳ್ಳಾಪುರ, ಡಿ. 14- ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಎಟಿಎಂ ಕಾರ್ಡ್ ಲಪಟಾಯಿಸಿ, ಹಣ ಡ್ರಾ ಮಾಡಿ ಕೊಂಡು ವಂಚಿಸುತ್ತಿದ್ದ ಮೈಸೂರು ಮೂಲದ ಖದೀಮನನ್ನು ಬಂಧಿಸಿ, 14 ಎಟಿಎಂ ಕಾರ್ಡ್, ಹಾಗೂ 2.46 ಲಕ್ಷ ರೂ. ವಶಪಡಿಸಿ ಕೊಳ್ಳುವಲ್ಲಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮೈಸೂರಿನ ಆಲನಹಳ್ಳಿ ಗಿರಿದರ್ಶಿನಿ ಬಡಾವಣೆ ನಿವಾಸಿ ಬಿ.ಕೆ.ಕಿರಣ್‍ಕುಮಾರ್ (32) ಬಂಧಿತ ಖದೀಮನಾಗಿದ್ದು, ಎಟಿಎಂ ಕೇಂದ್ರಗಳಲ್ಲಿ ಅಮಾಯಕರನ್ನು ವಂಚಿಸು ವುದನ್ನೇ ಈತ ವೃತ್ತಿಯಾಗಿಸಿಕೊಂಡಿದ್ದು, ಇಂತಹ ಪ್ರಕರಣಗಳಲ್ಲಿ ಈಗಾಗಲೇ ಕೊಡಗು, ಕುಮಟ, ಶಿರಾಳಕೊಪ್ಪ,…

ಚಿತ್ರದುರ್ಗದಲ್ಲಿ ಜ.8ರಂದು ಕಾಂಗ್ರೆಸ್‍ನಿಂದ ಪರಿಶಿಷ್ಟರ ಐಕ್ಯತಾ ಸಮಾವೇಶ
News

ಚಿತ್ರದುರ್ಗದಲ್ಲಿ ಜ.8ರಂದು ಕಾಂಗ್ರೆಸ್‍ನಿಂದ ಪರಿಶಿಷ್ಟರ ಐಕ್ಯತಾ ಸಮಾವೇಶ

December 15, 2022

ಮೈಸೂರು, ಡಿ.14(ಆರ್‍ಕೆಬಿ)- ಕಾಂಗ್ರೆಸ್ ಪಕ್ಷದಿಂದ ಪರಿಶಿಷ್ಟರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜ.8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಎಸ್‍ಸಿ-ಎಸ್‍ಟಿ ಬೃಹತ್ ಐಕ್ಯತಾ ಸಮಾವೇಶ ಆಯೋಜಿಸಲಾಗುವುದು. ಸಮಾವೇಶ ದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 5 ಲಕ್ಷಕ್ಕೂ ಅಧಿಕ ಜನರನ್ನು ಸಂಘಟಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಮಾವೇಶ ಸಮಿತಿಯ ಅಧ್ಯಕ್ಷರೂ ಆದ ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟರ ಐಕ್ಯತಾ ಸಮಾ ವೇಶ ನಡೆಸುವ ಸಂಬಂಧ ಈಗಾಗಲೇ ಬೆಂಗಳೂರಿನಲ್ಲಿ ಪೂರ್ವಭಾವಿ…

ಜನರ ವಂಚಿಸುತ್ತಿರುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ಪ್ರತ್ಯೇಕ ನಿಗಾ ಘಟಕ ಸ್ಥಾಪನೆ
News

ಜನರ ವಂಚಿಸುತ್ತಿರುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ಪ್ರತ್ಯೇಕ ನಿಗಾ ಘಟಕ ಸ್ಥಾಪನೆ

December 13, 2022

ಬೆಂಗಳೂರು,ಡಿ.12(ಕೆಎಂಶಿ)-ಬಡ ಹಾಗೂ ಮಧ್ಯಮ ವರ್ಗದ ಜನರನ್ನು ವಂಚಿಸುವ ಬ್ಲೇಡ್ ಕಂಪನಿಗಳ ಹತ್ತಿಕ್ಕಲು ತಮಿಳುನಾಡು ಮಾದರಿಯಲ್ಲೇ ಕಾನೂನು ತರುವುದಾಗಿ ಹೇಳಿರುವ ಕಂದಾಯ ಸಚಿವ ಆರ್.ಅಶೋಕ್, ಇದಕ್ಕಾಗಿ ಪ್ರತ್ಯೇಕ ನಿಗಾ ಘಟಕವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಗಿಯಾದ ಕಾನೂನು ಇದ್ದರೂ, ಒಂದಲ್ಲ ಒಂದು ಮಾರ್ಗದಲ್ಲಿ ಆಸೆಗಳನ್ನು ತೋರಿಸಿ, ಬ್ಲೇಡ್ ಕಂಪನಿಗಳು ಜನರಿಂದ ಕೋಟ್ಯಾಂತರ ರೂ. ಲೂಟಿ ಮಾಡುತ್ತಿವೆ. ಜನಸಾಮಾನ್ಯರಿಗೂ ಕಂಪನಿಗಳ ಬಗ್ಗೆ ತಿಳಿದಿದ್ದರೂ ದುರಾಸೆಯಿಂದ ತಾವು ಕಷ್ಟಪಟ್ಟು ದುಡಿದ ಹಣವನ್ನು ಸುರಿದು ಮೋಸಕ್ಕೆ ಒಳಗಾಗುತ್ತಾರೆ….

ಆಪರೇಷನ್‍ಗೆ ಒಳಗಾಗುವವರಿಗೆ ಟಿಕೆಟ್‍ಗೆ ಶಿಫಾರಸು ಬೇಡ
News

ಆಪರೇಷನ್‍ಗೆ ಒಳಗಾಗುವವರಿಗೆ ಟಿಕೆಟ್‍ಗೆ ಶಿಫಾರಸು ಬೇಡ

December 13, 2022

ಬೆಂಗಳೂರು, ಡಿ.12(ಕೆಎಂಶಿ)-ಚುನಾವಣೆಗಳಲ್ಲಿ ಸ್ಪರ್ಧಿಸಿ, ಗೆದ್ದ ಬಳಿಕ ಬೇರೆ ಪಕ್ಷಗಳಿಗೆ ಜಿಗಿಯುವಂತಹ ಮಂದಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವಕಾಶ ಬೇಡ. ಗೆದ್ದೇ ಗೆಲ್ಲುತ್ತೇವೆ ಎಂಬ ಕ್ಷೇತ್ರಗಳಲ್ಲಿ ಯಾರು ಅಭ್ಯರ್ಥಿ ಎಂಬುದನ್ನು ಮೌಖಿಕವಾಗಿ ತಿಳಿಸು ವಂತೆ ಕಾಂಗ್ರೆಸ್ ವರಿಷ್ಠರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್‍ಸಿಂಗ್ ಸುರ್ಜೇವಾಲ ದೆಹಲಿಯಲ್ಲಿಂದು ಕರ್ನಾ ಟಕ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಮುಖಂಡರೊಟ್ಟಿಗೆ ಸುದೀರ್ಘ ಸಮಾಲೋಚನೆ ನಡೆಸಿ, ಕೆಲವು ಸಲಹೆ-ಸೂಚನೆ ಗಳನ್ನು ನೀಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಯ ವರು…

ಇಂದು ವರಿಷ್ಠರಿಂದ ರಾಜ್ಯ ಮುಖಂಡರೊಂದಿಗೆ ಚರ್ಚೆ
News

ಇಂದು ವರಿಷ್ಠರಿಂದ ರಾಜ್ಯ ಮುಖಂಡರೊಂದಿಗೆ ಚರ್ಚೆ

December 10, 2022

ಬೆಂಗಳೂರು, ಡಿ.9- ಗುಜರಾತ್, ಹಿಮಾಚಲ ಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆ ಮುಗಿಯು ತ್ತಿದ್ದಂತೆ ಬಿಜೆಪಿ ವರಿಷ್ಠರು ಕರ್ನಾಟಕ ವಿಧಾನಸಭಾ ಚುನಾವಣೆಗೆ ರಂಗ ಪ್ರವೇಶ ಮಾಡುತ್ತಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರ ಸಚಿವರಾದ ಪಿಯುಷ್ ಗೋಯಲ್ ಧರ್ಮೇಂದ್ರ ಪ್ರಧಾನ್ ಹಾಗೂ ಭೂಪೇಂದ್ರ ಯಾದವ್ ನಾಳೆ (ಡಿ.10) ರಾಜ್ಯ ನಾಯಕರೊಟ್ಟಿಗೆ ಚುನಾ ವಣಾ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಈ ಮೂವರು ನಾಯಕರು ನಾಳೆ ರಾಜ್ಯಕ್ಕೆ ಭೇಟಿ ನೀಡಲಿ ದ್ದಾರೋ ಇಲ್ಲವೇ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಚರ್ಚೆ ಮಾಡಲಿದ್ದಾರೋ…

ಪ್ರಧಾನಿ ಮೋದಿ ತವರು ಗುಜರಾತ್‍ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
News

ಪ್ರಧಾನಿ ಮೋದಿ ತವರು ಗುಜರಾತ್‍ನಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

December 9, 2022

ಅಹಮದಾಬಾದ್, ಡಿ.8-ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಸತತ ಏಳನೇ ಬಾರಿಗೆ ಪ್ರಧಾನಿ ಮೋದಿ ತವರಿನಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿಯುವ ಮೂಲಕ ತನ್ನ ಗೆಲುವಿನ ನಾಗಾ ಲೋಟವನ್ನು ಮುಂದುವರೆಸಿದೆ. ಒಟ್ಟು 182 ಕ್ಷೇತ್ರಗಳ ಪೈಕಿ ಬಿಜೆಪಿ 156 ಸ್ಥಾನ ಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಕೇವಲ 17 ಸ್ಥಾನಗಳಿಗೆ ಕುಸಿದಿದೆ. ಆಮ್ ಆದ್ಮಿ ಪಾರ್ಟಿ 5 ಸ್ಥಾನಗಳನ್ನು ತನ್ನದಾಗಿಸಿಕೊಂಡರೆ, ನಾಲ್ವರು ಇತರರು ಗೆಲುವು ಸಾಧಿಸಿದ್ದಾರೆ. ಗುಜರಾತ್ ವಿಧಾನಸಭೆ ಇತಿಹಾಸದಲ್ಲಿ ಸತತ…

ವಿದ್ಯುತ್ ದರ ಕಡಿತಕ್ಕೆ ಸಂಪುಟ ಸಭೆ ಸಮ್ಮತಿ
News

ವಿದ್ಯುತ್ ದರ ಕಡಿತಕ್ಕೆ ಸಂಪುಟ ಸಭೆ ಸಮ್ಮತಿ

December 9, 2022

ಬೆಂಗಳೂರು, ಡಿ.8(ಕೆಎಂಶಿ)- ರಾಜ್ಯ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟು ಕೊಂಡು ವಿದ್ಯುತ್ ದರ ಕಡಿತಗೊಳಿಸಲು ತೀರ್ಮಾನಿಸಿರುವ ಸರ್ಕಾರ, ಇದರಿಂದ ವಿದ್ಯುತ್ ಕಂಪನಿಗಾಗುವ 3000 ಕೋಟಿ ರೂ. ನಷ್ಟ ಭರಿಸಲು ಸಚಿವ ಸಂಪುಟ ಸಮ್ಮತಿಸಿದೆ. ವಿದ್ಯುತ್ ಸರಬರಾಜು ಕಂಪನಿಗಳ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ಸರ್ಕಾರದಿಂದ ಹಣಕಾಸಿನ ನೆರವು ಒದಗಿಸುವುದರ ಜೊತೆಗೆ ಮೂರು ಸಾವಿರ ಕೋಟಿ ರೂ.ಗಳ ಸಾಲವನ್ನು ಪಡೆಯಲು ಖಾತರಿ ನೀಡಿದೆ. ಕಳೆದ ಎರಡು ತಿಂಗಳ ಹಿಂದೆಯಷ್ಟೇ ವಿದ್ಯುತ್ ಪ್ರಸರಣ ನಿಗಮಗಳು ಪ್ರತಿ ಯುನಿಟ್‍ಗೆ 2 ರಿಂದ 3 ರೂ. ದರ…

ಕೈಗಾರಿಕಾ ಪ್ರದೇಶಕ್ಕೆ ರೈತರಿಂದ ಬಲವಂತವಾಗಿ ಜಮೀನು ಸ್ವಾಧೀನ ಇಲ್ಲ
News

ಕೈಗಾರಿಕಾ ಪ್ರದೇಶಕ್ಕೆ ರೈತರಿಂದ ಬಲವಂತವಾಗಿ ಜಮೀನು ಸ್ವಾಧೀನ ಇಲ್ಲ

December 7, 2022

ಬೆಂಗಳೂರು,ಡಿ. 6(ಕೆಎಂಶಿ)- ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ರೈತರಿಂದ ಬಲವಂತವಾಗಿ ಜಮೀನು ಭೂಸ್ವಾಧೀನ ಮಾಡುವುದಿಲ್ಲ ಎಂದು ಭಾರೀ ಕೈಗಾರಿಕೆ ಸಚಿವ ಮುರು ಗೇಶ ನಿರಾಣಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಏರ್ಪ ಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಕೈಗಾರಿಕಾ ಉದ್ದೇಶಗಳಿಗೆ ನಾವು ಯಾವುದೇ ರೈತರಿಂದಲೂ ಬಲವಂತ ವಾಗಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳು ತ್ತಿಲ್ಲ. ಸ್ವಯಂಪ್ರೇರಿತರಾಗಿ ಯಾರು ಜಮೀನು ಕೊಡಲು ಮುಂದೆ ಬರುತ್ತಾರೋ ಅಂತಹವರಿಂದ ಮಾತ್ರ ಜಮೀನು ಪಡೆದುಕೊಳ್ಳುತ್ತಿದ್ದೇವೆ ಎಂದರು. ಯಾವುದೇ ಕಾರಣಕ್ಕೂ ಕೃಷಿಯೋಗ್ಯ ಭೂಮಿ ಯನ್ನು ಸ್ವಾಧೀನಪಡಿಸಿಕೊಳ್ಳುವುದಿಲ್ಲ…

ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ…
News

ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೂ ಪರಿಣಾಮ ಬೀರಲಿದೆ…

December 7, 2022

ಬೆಂಗಳೂರು, ಡಿ. 6(ಕೆಎಂಶಿ)- ಗುಜರಾತ್ ಚುನಾವಣೋ ತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಬರಲಿದ್ದು, ಕರ್ನಾಟಕದಲ್ಲಿಯೂ ಇದರ ಪರಿಣಾಮ ಬೀರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾವು ನೂರಕ್ಕೆ ನೂರರಷ್ಟು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ನಾವು ನೀಡಿರುವ ಕಾರ್ಯಕ್ರಮಗಳು ಜನಮನ್ನಣೆಯನ್ನು ಗಳಿಸಿವೆ. ಪ್ರತಿಪಕ್ಷದ ನಾಯಕರ ಸುಳ್ಳುಗಳ ಸರಮಾಲೆ ಜನರ ದಾರಿ ತಪ್ಪಿಸಲು ಸಾಧ್ಯವಾಗಿಲ್ಲ. ಗುಜರಾತ್ ಆಡಳಿತದ…

1 8 9 10 11 12 73
Translate »