ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟಶೈಲಿಯಲ್ಲಿ ‘ಅಪ್ಪಂದಿರ ದಿನ’ ಆಚರಣೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶಿಷ್ಟಶೈಲಿಯಲ್ಲಿ ‘ಅಪ್ಪಂದಿರ ದಿನ’ ಆಚರಣೆ

June 19, 2018

ಮೈಸೂರು: ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಅಪ್ಪಂದಿರ ದಿನಾಚರಣೆಯನ್ನು ವಿಶಿಷ್ಟ ಶೈಲಿಯಲ್ಲಿ ಆಚರಿಸಲಾಯಿತು.

ಕಾಲೇಜು ಪ್ರಾಂಶುಪಾಲ ಶ್ರೀಧರ್ ಮಕ್ಕಳೆಲ್ಲರಿಗೂ `ಮಾತೃ ದೇವೋ ಭವ, ಪಿತೃ ದೇವೋ ಭವ ಆಚಾರ್ಯ ದೇವೋ ಭವ’ ಎಂದು ಶ್ಲೋಕದ ಮೂಲಕ ಮಕ್ಕಳಿಗೆ ತಂದೆ-ತಾಯಿಗೆ ಜೀವನದಲ್ಲಿರುವ ಪ್ರಾಮುಖ್ಯತೆ ಮತ್ತು ಗುರುಗಳಿಂದ ನಮಗೆ ಇರುವ ಆಧಾರಗಳು ಬಹಳ ಮುಖ್ಯ ಎಂದು ತಿಳಿಸಿಕೊಟ್ಟರು. ಶಾಲಾ ಆಡಳಿತ ಸಂಯೋಜನಾಧಿಕಾರಿ ಶ್ರೀಮತಿ ಕಾಂತಿನಾಯಕ್ ತಮ್ಮ ಜೀವನದಲ್ಲಿ ತಮ್ಮ ತಂದೆಯೊಡನೆ ಇದ್ದ ಮತ್ತು ಕಳೆದ ದಿನಗಳ ಬಗ್ಗೆ ಹಾಗೂ ಅವರ ಅನುಭವಗಳನ್ನು ಹೇಳಿಕೊಂಡರು. ಜೀವನದಲ್ಲಿ ತಂದೆಯ ಪಾತ್ರ ಮತ್ತು ಕಾಳಜಿಯನ್ನು ವಿವರಿಸಿದರು.

ಶಾಲೆ ಸಂಸ್ಥಾಪಕ ಟಿ.ರಂಗಪ್ಪನವರು ತಂದೆಯ ದಿನಾಚರಣೆಯ ವಿಶೇಷಣೆ ಬಗ್ಗೆ ತಿಳಿಸಿಕೊಟ್ಟು, ಮಕ್ಕಳಿಗೆ ತಂದೆ ತಾಯಿಯನ್ನು ಗೌರವಿಸಬೇಕು ಮತ್ತು ತಂದೆ ತಾಯಿಯ ಆಶೀರ್ವಾದ ಜೀವನದಲ್ಲಿ ಬಹಳ ಮುಖ್ಯ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಝರೀನ ಬಾಬುಲ್ ಅವರು ತಂದೆಯ ದಿನಾಚರಣೆಯ ಪ್ರಯುಕ್ತ ತಂದೆÉಯು ಜೀವನದಲ್ಲಿ ವಹಿಸಿರುವ ವಿಶೇಷ ಪಾತ್ರದ ಬಗ್ಗೆ ವಿವರಿಸಿದರು.

ವಿದ್ಯಾರ್ಥಿಗಳಾದ ಮೋನಿಕಾ ಪಿ.ಎಂ., ಸಿಮ್ರಾನ್ ಸಿಂಗ್, ಸಿಂಚನ ಪಿ., ಶ್ವೇತ ಡಿ.ಎನ್., ಪಂಚಮಿ ಎಸ್., ವರ್ಷಿಣ ಎಲ್. ಮತ್ತು ಮೌನ ಯು. ತಂದೆಯ ದಿನಾಚರಣೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

Translate »