ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಇಂದು 233 ಅಭ್ಯರ್ಥಿಗಳ ಭವಿಷ್ಯಕ್ಕೆ ಮುದ್ರೆ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ: ಇಂದು 233 ಅಭ್ಯರ್ಥಿಗಳ ಭವಿಷ್ಯಕ್ಕೆ ಮುದ್ರೆ

August 31, 2018

ಚಾಮರಾಜನಗರ:  ಚಾಮ ರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ಒಟ್ಟು 62 ಸದಸ್ಯ ಸ್ಥಾನಗಳ ಪೈಕಿ 60 ಸ್ಥಾನಗಳಿಗೆ ನಾಳೆ (ಆ.31) ಬೆಳಿಗ್ಗೆ 7 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ.

ಚಾಮರಾಜನಗರ ನಗರಸಭೆಯ 31 ಸ್ಥಾನ ಗಳಿಗೆ ಆಯ್ಕೆ ಬಯಸಿ ನಗರಸಭೆಯ ಹಾಲಿ ಅಧ್ಯಕ್ಷರು, ಇಬ್ಬರು ಮಾಜಿ ಮಾಜಿ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು ಸೇರಿದಂತೆ ಒಟ್ಟು 132 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 4 ಸೇವಾ ಮತದಾ ರರು ಸೇರಿದಂತೆ ಒಟ್ಟು 53,767 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದು, ಅಭ್ಯರ್ಥಿಗಳ ರಾಜಕೀಯದ ಹಣೆಬರಹವನ್ನು ಬರೆಯಲಿದ್ದಾರೆ.

ಕೊಳ್ಳೇಗಾಲ ನಗರಸಭೆಯು 31 ವಾರ್ಡ್ ಗಳನ್ನು ಹೊಂದಿದೆ. ಈ ಪೈಕಿ 6ನೇ ವಾರ್ಡ್ ನಿಂದ ಬಿಎಸ್‍ಪಿ ಅಭ್ಯರ್ಥಿಯಾಗಿದ್ದ ಗಂಗಮ್ಮ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 9ನೇ ವಾರ್ಡ್ ನಿಂದ ಆಯ್ಕೆ ಬಯಸಿ ಬಿಎಸ್‍ಪಿಯಿಂದ ಸ್ಪರ್ಧಿ ಸಿದ್ದ ಎಸ್.ರಮೇಶ್ ಮೃತರಾದ ಹಿನ್ನೆಲೆಯಲ್ಲಿ ವಾರ್ಡ್‍ನ ಮತದಾನವನ್ನು ಮುಂದೂಡಲಾಗಿದೆ. ಉಳಿದ 29 ವಾರ್ಡ್‍ನ ಸದಸ್ಯ ಸ್ಥಾನಕ್ಕೆ ಮತ ದಾನ ನಡೆಯಲಿದೆ. ಆಯ್ಕೆ ಬಯಸಿ 101 ಅಭ್ಯ ರ್ಥಿಗಳು ಸ್ಪರ್ಧಿಸಿದ್ದಾರೆ. ಈ ಅಭ್ಯರ್ಥಿಗಳ ಹಣೆ ಬರಹವನ್ನು ಒಟ್ಟು 44455 ಮತದಾರರು ಬರೆಯಲಿದ್ದಾರೆ.

ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರ ಸಭೆಯ ಒಟ್ಟು 60 ಸ್ಥಾನಕ್ಕೆ ಆಯ್ಕೆ ಬಯಸಿ ಒಟ್ಟಾರೆ 233 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಈ ಎರಡೂ ಪಟ್ಟಣದ ಒಟ್ಟಾರೆ 98,222 ಮತದಾರರು ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರ ಪಡಿಸಲಿದ್ದಾರೆ.

ಮತಗಟ್ಟೆಗಳ ಸ್ಥಾಪನೆ: ಚಾಮರಾಜನಗರ ನಗರ ಸಭಾ ವ್ಯಾಪ್ತಿಯಲ್ಲಿ ಒಟ್ಟಾರೆ 61 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 11 ಮತಗಟ್ಟೆಗಳನ್ನು ಅತೀ ಸೂಕ್ಷ್ಮ, 14 ಸೂಕ್ಷ್ಮ, 36 ಸಾಮಾನ್ಯ ಮತ ಗಟ್ಟೆಗಳು ಎಂದು ಗುರುತಿಸಲಾಗಿದೆ.
ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯಲ್ಲಿ ಒಟ್ಟು 45 ಮತಗಟ್ಟೆಗಳನ್ನು ತೆರೆಯಲಾಗಿದೆ. ಈ ಪೈಕಿ 10 ಮತ ಗಟ್ಟೆಗಳನ್ನು ಅತೀ ಸೂಕ್ಷ್ಮ, 19 ಸೂಕ್ಷ್ಮ ಮತ್ತು 16 ಸಾಮಾನ್ಯ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

ಬಂದೋಬಸ್ತ್: ಶಾಂತಿಯುತ ಮತದಾನಕ್ಕಾಗಿ ಪೊಲೀಸ್ ಇಲಾಖೆ ಚಾಮರಾಜನಗರ ಹಾಗೂ ಕೊಳ್ಳೇಗಾಲ ಪಟ್ಟಣದ ನಗರಸಭಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಜಿಲ್ಲಾ ಪೊಲೀಸ್ ವರಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಅವರ ನೇತೃತ್ವದಲ್ಲಿ ಬಂದೋ ಬಸ್ತ್ ಆಯೋಜಿಸಲಾಗಿದೆ.

ಮಸ್ಟರಿಂಗ್: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‍ವಿ ಜೂನಿಯರ್ ಕಾಲೇಜಿನಲ್ಲಿ ಇಂದು (ಗುರುವಾರ) ಮಸ್ಟರಿಂಗ್ ಕಾರ್ಯ ನಡೆಯಿತು.

ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿ ಗಳು ಹಾಗೂ ಸಿಬ್ಬಂದಿ ವಿದ್ಯುನ್ಮಾನ ಮತಯಂತ್ರ ಜೊತೆ ಅಗತ್ಯ ಇರುವ ಪರಿಕರದೊಂದಿಗೆ ತಮಗೆ ನಿಗಧಿಯಾಗಿದ್ದ ಮತಗಟ್ಟೆಗೆ ತೆರಳಿದರು.

ಮತಗಟ್ಟೆಗಳಲ್ಲಿ ಮತದಾನಕ್ಕೆ ಅಗತ್ಯವಾಗಿ ಬೇಕಾ ಗಿರುವ ಸಿದ್ಧತೆಗಳನ್ನು ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಏಜೆಂಟರ ಸಮ್ಮುಖದಲ್ಲಿ ಅಣುಕು ಮತದಾನ ನಡೆಯಲಿದೆ. ಈ ವೇಳೆ ಏಜೆಂಟರು ಗೈರು ಹಾಜರಾಗಿದ್ದರೆ 6.15ರವರೆಗೆ ಕಾಯ ಲಾಗುವುದು. ಈ ವೇಳೆಗೂ ಏಜೆಂಟರು ಬರದಿ ದ್ದರೆ, ಮತಗಟ್ಟೆ ಅಧಿಕಾರಿಗಳು ಅಣುಕು ಮತ ದಾನ ನಡೆಸುವರು. 7 ಗಂಟೆಗೆ ಸರಿಯಾಗಿ ಎಲ್ಲಾ ಮತಗಟ್ಟೆಗಳಲ್ಲಿ ಮತದಾನ ಆರಂಭ ವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಶಾಂತಿಯುತ ಮತದಾನಕ್ಕಾಗಿ ಬೇಕಾಗುವ ಎಲ್ಲಾ ಪೂರ್ವ ತಯಾರಿಯನ್ನು ಮಾಡಿಕೊಳ್ಳ ಲಾಗಿದೆ. ಎಲ್ಲಾ ಮತಗಟ್ಟೆಗಳಿಗೆ ಪೊಲೀಸ್ ಬಂದೋ ಬಸ್ತ್ ಆಯೋಜಿಸಲಾಗಿದೆ. ಒಂದು ಸಾವಿರಕ್ಕಿಂತ ಹೆಚ್ಚಿರುವ ಮತಗಟ್ಟೆಗಳಿಗೆ ಒಬ್ಬರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುಕ್ತ, ನ್ಯಾಯ ಸಮ್ಮತ ಮತ್ತು ಪಾರದರ್ಶಕವಾಗಿ ಚುನಾ ವಣೆ ನಡೆಸಲು ಬೇಕಾಗುವ ಎಲ್ಲಾ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವಂತೆ ಬಿ.ಬಿ.ಕಾವೇರಿ ಮನವಿ ಮಾಡಿದರು.

Translate »