ಮುಕ್ತ ವಿವಿ ಎಲ್ಲಾ ಗೊಂದಲ ನಿವಾರಣೆಕುಲಪತಿ ಎಸ್.ವಿದ್ಯಾಶಂಕರ್ ಸ್ಪಷ್ಟನೆ
ಹಾಸನ

ಮುಕ್ತ ವಿವಿ ಎಲ್ಲಾ ಗೊಂದಲ ನಿವಾರಣೆಕುಲಪತಿ ಎಸ್.ವಿದ್ಯಾಶಂಕರ್ ಸ್ಪಷ್ಟನೆ

July 4, 2019

ಹಾಸನ, ಜು.3- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣ ಪಡೆ ಯಲು ಯಾವ ಆತಂಕವೂ ಬೇಡ. ಈವರೆ ಗಿದ್ದ ಕೆಲ ಸಣ್ಣ-ಪುಟ್ಟ ಗೊಂದಲಗಳು ನಿವಾರಣೆಯಾಗಿವೆ ಎಂದು ಮುಕ್ತ ವಿವಿ ಕುಲಪತಿ ಎಸ್.ವಿದ್ಯಾಶಂಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ನಾನು ಕುಲಪತಿಯಾಗಿ ಬಂದ ಮೇಲೆ ಮೊದಲಿಗೇ ಗೊಂದಲ ಗಳನ್ನು ನಿವಾರಣೆ ಮಾಡಿದೆ. ವಿವಿ ಮಾನ್ಯತೆ ರದ್ದು ವಿಚಾರಕ್ಕೆ ಸಂಬಂಧಿಸಿ ಹಲವು ಸಣ್ಣ ಪುಟ್ಟ ಗೊಂದಲಗಳಿದ್ದವು. ಈಗ ಅವೆಲ್ಲವೂ ನಿವಾರಣೆಯಾಗಿವೆ. ಯುಜಿಸಿಯಿಂದ 2018-19 ಹಾಗೂ 2022-23ರ ಸಾಲಿನ ವರೆಗೂ ಮುಕ್ತ ವಿವಿಗೆ ಮಾನ್ಯತೆ ದೊರೆತಿದೆ. ವಿದ್ಯಾರ್ಥಿಗಳು ಗೊಂದಲ, ಅನುಮಾನ ಇಲ್ಲದೇ ತರಗತಿಗಳಿಗೆ ದಾಖಲಾಗಬಹುದು ಎಂದು ಹೇಳಿದರು.

ನಾನು ಕುಲಪತಿಯಾದಾಗಿನಿಂದ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಕಾಲೇಜಿಗೆ ಬಂದು ಓದಲು ಸಾಧ್ಯವಾಗದವರಿಗೆ ಮನೆಯಲ್ಲೇ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಜಾರಿ ಗೊಳಿಸುತ್ತಿದ್ದೇವೆ. ಕೌಶಲಾಭಿವೃದ್ಧಿ ಸೇರಿ ದಂತೆ ಅನೇಕ ಕೋರ್ಸ್‍ಗಳ ವ್ಯಾಸಂಗಕ್ಕೆ ಅವಕಾಶವಿದೆ. ಯುಜಿಸಿ 2018-19ನೇ ಸಾಲಿನಲ್ಲಿ ವಿಶ್ವವಿದ್ಯಾನಿಲಯ ಕೋರಿದ್ದ 32 ಕೋರ್ಸ್‍ಗಳಲ್ಲಿ ಕೇವಲ 17 ಕೋರ್ಸು ಗಳಿಗೆ ಮಾನ್ಯತೆ ನೀಡಿತ್ತು. ಪುನಃ ಮನವಿ ಮಾಡಿದ ಹಿನ್ನೆಲೆಯಲ್ಲಿ ಉಳಿದ ಕೋರ್ಸ್ ಗಳಿಗೂ ಅನುಮೋದನೆ ನೀಡಿದೆ ಎಂದರು.

ಪಿಯುಸಿ ಆಗಿರಬೇಕು: ಕೆಎಸ್‍ಒಯು ನಲ್ಲಿ ಪ್ರವೇಶ ಪಡೆಯುವ ಅಭ್ಯರ್ಥಿಗಳು ಕಡ್ಡಾಯವಾಗಿ (10+2) ಪಿಯುಸಿ ವ್ಯಾಸಂಗ ಮುಗಿಸಿರಬೇಕು ಹಿಂದಿನಂತೆ ವಯಸ್ಸಿನ ಆಧಾರದಲ್ಲಿ ಪ್ರವೇಶ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಈ ಬಾರಿ ಪ್ರವೇಶ ಪ್ರಕ್ರಿಯೆ ಆರಂಭ ವಾದ 20 ದಿನಗಳಲ್ಲಿಯೇ 800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 15 ಸಾವಿರ ಅಭ್ಯರ್ಥಿಗಳು ಪ್ರವೇಶ ಪಡೆಯಲಿದ್ದಾರೆ ಎಂದು ಅಂದಾ ಜಿಸಲಾಗಿದೆ. ಈಗಾಗಲೇ ದಾಖಲಾತಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಮುಕ್ತ ವಿವಿ ಹಾಸನ ಕೇಂದ್ರದ ಅಧಿಕಾರಿ ಹರೀಶ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳು ತಮ್ಮ ಪದವಿ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಅವಕಾಶವಾಗಲಿ ಎಂಬ ಉದ್ದೇಶದಿಂದ ಹೊಸ ಸೌಕರ್ಯ ಜಾರಿ ಚಿಂತನೆ ಇದೆ. ನುರಿತ ಶಿಕ್ಷಕರಿಂದ ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳಿಗೆ ಬೋಧನಾ ವ್ಯವಸ್ಥೆ ಮಾಡುವ ಚಿಂತನೆ ಇದೆ. ಮುಂದಿನ ದಿನದಲ್ಲಿ ಇದನ್ನು ಕಾರ್ಯ ರೂಪಕ್ಕೆ ತರಲಾಗುವುದು. -ವಿದ್ಯಾಶಂಕರ್, ಮುಕ್ತ ವಿವಿ ಕುಲಪತಿ

Translate »