ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಪ್ರೀತಮ್ ಜೆ.ಗೌಡ ಕರೆ
ಹಾಸನ

ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಿ: ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಶಾಸಕ ಪ್ರೀತಮ್ ಜೆ.ಗೌಡ ಕರೆ

July 4, 2019

ಹಾಸನ, ಜು.3- ಬಿಜೆಪಿ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಸಂಘಟಿಸಿದಾಗ ಮಾತ್ರ ಪಕ್ಷವನ್ನು ಸದೃಢಗೊಳಿಸಲು ಸಾಧ್ಯ ಎಂದು ಶಾಸಕ ಪ್ರಿತಂ ಜೆ.ಗೌಡ ತಿಳಿಸಿದರು.

ನಗರದಲ್ಲಿನ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಅವರು, 5 ವರ್ಷಗಳಿಂದ ಪಕ್ಷ ಸಂಘಟನೆಗೆ ಎಲ್ಲಾ ಕಾರ್ಯಕರ್ತರು ಬಹಳವಾಗಿ ಶ್ರಮಿಸಿದ್ದಾರೆ. ನನ್ನನ್ನು ಶಾಸಕನಾಗಿಸಲು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಸಾವಿರಾರು ಕಾರ್ಯಕರ್ತರು ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಿದ ಪರಿಣಾಮ ಬಿಜೆಪಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಖಾತೆ ತೆರೆಯಲು ಅವಕಾಶವಾಗಿದೆ ಎಂದರು.

ಜೆಡಿಎಸ್‍ನ ಭದ್ರಕೋಟೆ ಎನಿಸಿದ ಕ್ಷೇತ್ರÀದಲ್ಲಿಯೇ ಬಿಜೆಪಿ ಗೆಲುವು ಸಾಧಿಸಿರುವುದು ಗಮನಾರ್ಹ. ಇದರ ಶ್ರೇಯ ಕಾರ್ಯ ಕರ್ತರಿಗೇ ಸಲ್ಲುತ್ತದೆ. ಅದೇ ರೀತಿ ಈಗಲೂ ಶ್ರಮಪಡುವ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ಸಾಮಥ್ರ್ಯವನ್ನು ಹೆಚ್ಚಿಸಬೇಕು. ತಾಪಂ, ಜಿಪಂ ಸೇರಿದಂತೆ ಮುಂದಿನ ಎಲ್ಲ ಚುನಾವಣೆಗಳಲ್ಲೂ ಯಶ ಕಾಣಬೇಕೆಂದರೆ ನಮ್ಮನ್ನು ಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.

ದೇಶ ಮೊದಲು, ನಂತರ ಪಕ್ಷ, ಆನಂತರವೇ ವ್ಯಕ್ತಿ ಎಂಬುದು ಪಕ್ಷದ ಸಿದ್ಧಾಂತವಾಗಿದೆ. ತತ್ವ ಸಿದ್ಧಾಂತವನ್ನು ಒಪ್ಪಿದರಷ್ಟೇ ಪಕ್ಷದ ಮೇಲೆ ಪ್ರೀತಿ ಮೂಡಲು ಸಾಧ್ಯ. ಪ್ರತಿ ಕಾರ್ಯಕರ್ತರು ಕನಿಷ್ಟ 25 ಸದಸ್ಯರನ್ನು ಹೊಸದಾಗಿ ನೋಂದಾಯಿಸುವ ಮೂಲಕ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ಹುರಿದುಂಬಿಸಿದರು.

ಲೋಕಸಭೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ಹಾಸನ ಜಿಲ್ಲೆ ಜನತೆ 5.35 ಲಕ್ಷ ಮತಗಳನ್ನು ನೀಡಿದ್ದಾರೆ. ಹಾಸನ ವಿಧಾನಸಭಾ ಕ್ಷೇತ್ರದೊಳಗೆ 273 ಬೂತ್‍ಗಳಿದ್ದು, ಹಾಸನದಲ್ಲೆ ಕನಿಷ್ಟ 25 ಸಾವಿರ ಸದಸ್ಯರನ್ನು ಹೊಸದಾಗಿ ಪಕ್ಷಕ್ಕೆ ಸೇರಿಸಬಹುದು ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ನಗರಾಧ್ಯಕ್ಷ ಶೋಭನ್ ಬಾಬು, ಗ್ರಾಮಾಂತರ ಅಧ್ಯಕ್ಷ ಮೊಗಣ್ಣಗೌಡ, ಸಂಚಾಲಕ ಪ್ರಸನ್ನಕುಮಾರ್, ಮುಖಂಡರಾದ ಹೆಚ್.ಎಂ.ಸುರೇಶ್ ಕುಮಾರ್, ನಾರಾಯಣಗೌಡ, ಮಮತೇಶ್, ಜಯಶಂಕರ್, ಪುನೀತ್, ಮಂಜುನಾಥ್ ಮತ್ತಿತರರಿದ್ದರು.

Translate »