ಚದುರಂಗ ಆಟದಿಂದ ಮಕ್ಕಳ ಬುದ್ಧಿ ಸಾಮಥ್ರ್ಯ ಹೆಚ್ಚುತ್ತೆ
ಹಾಸನ

ಚದುರಂಗ ಆಟದಿಂದ ಮಕ್ಕಳ ಬುದ್ಧಿ ಸಾಮಥ್ರ್ಯ ಹೆಚ್ಚುತ್ತೆ

November 19, 2018

ಬೇಲೂರು: ಚದುರಂಗ ಆಟ ಮಕ್ಕಳ ಬುದ್ಧಿ ಸಾಮಥ್ರ್ಯವನ್ನು ಹೆಚ್ಚಿಸು ವಲ್ಲಿ ಸಹಕಾರಿಯಾಗಿದ್ದು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಹಿರಿಯ ಚೆಸ್ ಆಟಗಾರ ಶಾಂತಾರಾಂ ಹೇಳಿದರು.

ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಸಮೀಪ ವೇಲಾಪುರಿ ಚೆಸ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಕ್ರೀಡೆಗಳಂತೆ ಚದುರಂಗ ದೈಹಿಕವಾಗಿ ಆಡುವ ಕ್ರೀಡೆಯಾಗಿರದೆ ತಲೆಗೆ ಮತ್ತು ಬುದ್ಧಿಗೆ ಕೆಲಸಕೊಟ್ಟು ಚಾಣಾಕ್ಷತನದಿಂದ ಆಡುವ ಆಟ ವಾಗಿದೆ. ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಯಲ್ಲಿ ಬೇಲೂರಿನ ಸುಬ್ರಹ್ಮಣ್ಯ ಅವರಿಗೆ ಉತ್ತಮವಾದ ಹೆಸರು ಇದೆ. ಅಲ್ಲದೆ ಕೆಲ ತಿಂಗಳ ಹಿಂದೆ ವೇಲಾಪುರಿ ಚೆಸ್ ಅಸೋಸಿಯೇಷನ್, ರಾಜ್ಯಮಟ್ಟದ ಚೆಸ್ ಸ್ಪರ್ಧೆಯನ್ನು ನಡೆಸಿ ಎಲ್ಲರ ಗಮನವನ್ನು ಬೇಲೂರಿನತ್ತ ತಿರುಗುವಂತೆ ಮಾಡಿದ್ದಾರೆ. ಈಗ ತಾಲೂಕಿನ ಮಕ್ಕಳು ಚದುರಂಗದ ಆಟದ ಬಗ್ಗೆ ತಿಳಿಯಬೇಕು. ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ, ವಿಶ್ವದ ಗಮನವನ್ನು ಸೆಳೆಯುವಂತಾಗಬೇಕು ಎಂಬ ನಿಟ್ಟಿನಲ್ಲಿ ವೇಲಾಪುರಿ ಚೆಸ್ ಶಾಲೆಯನ್ನು ಆರಂಭಿ ಸಿರುವುದು ಶ್ಲಾಘನೀಯ. ಪೋಷಕರು ಹಾಗೂ ವಿದ್ಯಾರ್ಥಿಗಳು ಚದುರಂಗ ಆಟದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿ ತರಬೇತಿ ಶಾಲೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹಿರಿಯ ಚೆಸ್ ಆಟ ಗಾರ ಸುಬ್ರಹ್ಮಣ್ಯ, ಪುರಸಭಾ ಸದಸ್ಯ ಶ್ರೀನಿಧಿ, ತರಬೇತುದಾರ ಕೃಷ್ಣಮೂರ್ತಿ, ಪತ್ರ ಕರ್ತರ ಸಂಘದ ಅಧ್ಯಕ್ಷ ಮೋಹನ್‍ಕುಮಾರ್, ಟ್ರಾಫಿಕ್ ಪೊಲೀಸ್ ಪರಮೇಶ್, ಅಸೋಸಿ ಯೇಷನ್ ಸದಸ್ಯರಾದ ಚಂದ್ರಶೇಖರ್, ಶ್ರೀವತ್ಸ, ವೆಂಕಟೇಶ್ ಇತರರು ಇದ್ದರು.

Translate »