ಕಾಮಗಾರಿ ಸ್ಥಗಿತಗೊಳಿಸಲು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು

ಕಾಮಗಾರಿ ಸ್ಥಗಿತಗೊಳಿಸಲು ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

December 12, 2018

ಹುಣಸೂರು: ನಗರದ ದೇವರಾಜ ಅರಸು ಕ್ರೀಡಾಂಗಣದ ಮುಂದೆ ಸ್ವಚ್ಛ ಭಾರತ್ ಮಿಷನ್‍ಯಡಿ ನಗರಸಭೆ ಯಿಂದ ನಿರ್ಮಿಸುತ್ತಿರುವ ಸಾರ್ವಜನಿಕ ಹೈಟೆಕ್ ಶೌಚಾಲಯ ಕಾಮಗಾರಿ ಸ್ಥಗಿತಗೊಳಿಸುವಂತೆ ಬಾಲಕರ ಸರ್ಕಾರಿ ಕಿರಿಯ ಕಾಲೇಜು ವಿದ್ಯಾರ್ಥಿಗಳಿಂದು ಪ್ರತಿಭಟಿಸಿದರು.

ಕಾಮಗಾರಿ ಸ್ಥಳದಲ್ಲಿ ಜಮಾಯಿಸಿದ ವಿದ್ಯಾರ್ಥಿಗಳು ನಗರದ ಕ್ರೀಡಾಂಗಣ ಮತ್ತು ಕಾಲೇಜು ಮುಂಭಾಗದಲ್ಲೇ ಶೌಚಾಲಯ ನಿರ್ಮಿಸುತ್ತಿರುವುದು ಸರಿಯಲ್ಲ. ಕೂಡಲೇ ಇದನ್ನು ಬೇರೆಡೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು.

ಕಾಲೇಜಿನ ಪ್ರಾಂಶುಪಾಲ ನಾಗರಾಜು ಅರಸು ಮಾತನಾಡಿ, ಕ್ರೀಡಾಂಗಣ ಮತ್ತು ಕಾಲೇಜಿನ ಮುಂಭಾಗದಲ್ಲೇ ಸಾರ್ವ ಜನಿಕ ಶೌಚಾಲಯ ಕಟ್ಟುತ್ತಿರುವುದು ಅವಲಕ್ಷಣವಾಗಿದೆ. ಇದನ್ನು ಬೇರೆÀಡೆ ನಿರ್ಮಿಸಲಿ ಎಂದರು. ಕಾಲೇಜು ಅಭಿ ವೃದ್ಧಿ ಸಮಿತಿ ಉಪಾಧ್ಯಕ್ಷ ಎಂ.ಎಸ್. ಮೋಹನ್‍ರಾವ್ ಕೂಡ ದನಿಗೂಡಿ ಸಿದರು. ವಿಷಯ ತಿಳಿದು ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಇದು ಕೇಂದ್ರದ ಸ್ವಚ ಭಾರತ್ ಮಿಷನ್‍ನ ಕಾರ್ಯಕ್ರಮವಾಗಿದ್ದು, ಸುತ್ತಮುತ್ತಲಿ ನವರ ಅವಶ್ಯಕತೆ ಅರಿತು ಹೈಟೆಕ್ ಶೌಚಾಲಯ ನಿರ್ಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಹಾಗು-ಹೋಗು ಗಳನ್ನು ಸಹ ಕೇಂದ್ರದ ಸ್ವಚ ಭಾರತ್ ಮಿಷನ್‍ನವರೇ ನೋಡಿಕೊಳ್ಳುತ್ತಾರೆ ಎಂದ ಅವರು ಪ್ರತಿಭಟನೆ ಕೈಬಿಡುವಂತೆ ತಿಳಿಸಿದರು.

ಈ ಬಗ್ಗೆ ನಗರ ಸಭೆ ಆಯುಕ್ತ ಶಿವಪ್ಪ ನಾಯಕ ಮಾತನಾಡಿ, ಇದು ಕೇಂದ್ರದ ಸ್ವಚ್ಛ ಭಾರತ್ ಮಿಷನ್ ನಗರದಲ್ಲಿ ತಾಲೂಕು ಕ್ರೀಡಾಂಗಣ ಮತ್ತು ಕಲ್ಕುಣಿಕೆ ಸರ್ಕಲ್ ಬಳಿ ಎರಡು ಕಡೆ 18 ಲಕ್ಷ ರೂ. ವೆಚ್ಚದಲ್ಲಿ ಪ್ರಾಯೋಗಿಕವಾಗಿ ಎರಡು ಹೈಟೆಕ್ ಶೌಚಾ ಲಯ ನಿರ್ಮಿಸಲು ಮುಂದಾಗಿದ್ದು, ಇವು ಯಾಶಸ್ವಿ ಆದಲ್ಲಿ ನಗರದ್ಯಾಂತ ಇನ್ನು ಹಲವೆಡೆ ಹೈಟೆಕ್ ಶೌಚಾಲಯ ನಿರ್ಮಿಸಲಾ ಗುವುದು. ಕ್ರೀಡಾಂಗಣಕ್ಕೆ ಬರುವ ಕ್ರೀಡಾ ಪಟುಗಳು, ಆಟೋ ಚಾಲಕರು, ಕಾರ್ಮಿಕರು, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಈ ಸ್ಥಳ ಗುರುತಿಸಿ ಶೌಚಾಲಯವನ್ನು ನಿರ್ಮಿಸಲಾಗುತ್ತಿದೆ ನಗರದ ಅಭಿವೃದ್ಧಿ ಮತ್ತು ಸ್ವಚ್ಛತೆ ದೃಷ್ಟಿಯಿಂದ ಕೇಂದ್ರದ ಸ್ವಚ್ಛ ಭಾರತ್ ಮಿಷನ್ ಈ ಕಾರ್ಯಕ್ರಮ ಹಾಕಿಕೊಂಡಿದ್ದು, ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು. ಪ್ರತಿಭಟನೆಯಲ್ಲಿ ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳಿದ್ದರು.

Translate »