ವರ್ಣರಂಜಿತ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೆರೆ
ಮೈಸೂರು

ವರ್ಣರಂಜಿತ ದಸರಾ ಫಲಪುಷ್ಪ ಪ್ರದರ್ಶನಕ್ಕೆ ತೆರೆ

October 22, 2018

ಮೈಸೂರು: ಪೆಂಗ್ವಿನ್, ಅಶೋಕ ಸ್ತಂಭ, ಆನೆ ಗಾಡಿ, ಟೀ ಕೆಟಲ್, ಲೋಟಸ್ ಟೆಂಪಲ್ ಸೇರಿದಂತೆ ಹಲವು ಕಲಾಕೃತಿಗಳು ಅನಾವರಣ ಗೊಂಡು ಲಕ್ಷಾಂತರ ಜನರನ್ನು ಮನಸೂರೆ ಗೊಳಿಸಿದ್ದ ದಸರಾ ಫಲಪುಷ್ಪ ಪ್ರದರ್ಶನ- 2018ಕ್ಕೆ ಭಾನುವಾರ ತೆರೆಬಿದ್ದಿತು.

ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಿಶಾದ್ ಬಾಗ್‍ನ ಕುಪ್ಪಣ್ಣ ಪಾರ್ಕ್‍ನ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾ ಯತ್ ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ 12 ದಿನಗಳ ಕಾಲ ಆಯೋ ಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ 4.5 ಲಕ್ಷ ಮಂದಿ ಸಾರ್ವಜನಿಕರು ಭೇಟಿ ನೀಡಿ, ಪುಷ್ಪರಾಶಿ, ಸಸ್ಯ ಸಮ್ರಾಜ್ಯದಲ್ಲಿ ನಾನಾ ಕಲಾಕೃತಿಗಳನ್ನು ವೀಕ್ಷಿಸಿ ಖುಷಿಪಟ್ಟಿದ್ದಾರೆ.

ಭಾನುವಾರ ಸಂಜೆ ನಡೆದ ಸಮಾ ರೋಪÀದಲ್ಲಿ ದಸರಾ ಫಲಪುಷ್ಪ ಪ್ರದ ರ್ಶನದ ಅಂಗವಾಗಿ 1.ಕೈಗಾರಿಕಾ ಸಂಸ್ಥೆಗಳ ತೋಟಗಳು. 2.ಸರ್ಕಾರಿ ಮತ್ತು ಆಡಳಿತಾಧಿಕಾರಿಗಳ ಕಚೇರಿ ತೋಟ ಗಳು. 3.ಶಿಕ್ಷಣ ಸಂಸ್ಥೆ ತೋಟಗಳು. 4.ಅಪಾರ್ಟ್‍ಮೆಂಟ್-ಹೋಟೆಲ್-ಆಸ್ಪತ್ರೆ ತೋಟಗಳು. 5.ಖಾಸಗಿ ಮನೆಗಳ ತೋಟಗಳು ಈ 5 ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತಾದವರಿಗೆ ಬಹುಮಾನ ವಿತರಿಸಲಾಯಿತು.

ಕೈಗಾರಿಕಾ ಸಂಸ್ಥೆಗಳ ತೋಟಗಳು: ಈ ವಿಭಾಗದಲ್ಲಿ 36 ಕೈಗಾರಿಕೆಗಳು ಭಾಗವಹಿ ಸಿದ್ದು, ಬಿಇಎಂಎಲ್, ಜೆ.ಕೆ.ಟೈರ್ಸ್, ಇನ್ಫೋ ಸಿಸ್‍ನ ಸಿಐಎಸ್‍ಎಫ್ `ಅತ್ಯುತ್ತಮ’ ಬಹುಮಾನ ಪಡೆದುಕೊಂಡವು.

ಸರ್ಕಾರಿ ಮತ್ತು ಆಡಳಿತಾಧಿಕಾರಿಗಳ ಕಚೇರಿ ತೋಟಗಳು: ಈ ವಿಭಾಗದಲ್ಲಿ 19 ಕಚೇರಿಗಳು ಭಾಗವಹಿಸಿದ್ದು, ಮೈಸೂರು ಅರಮನೆ ಮಂಡಳಿ ಹಾಗೂ ಇಲ ವಾಲದ ಪವರ್ ಗ್ರೀಡ್ ಕಾರ್ಪೋ ರೇಷನ್ ಆಫ್ ಇಂಡಿಯಾ ಲಿ.(ವಿಶೇಷ ಬಹುಮಾನ), ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ(ಪ್ರಥಮ) ಬಹುಮಾನ ಪಡೆದುಕೊಂಡವು.

ಶಿಕ್ಷಣ ಸಂಸ್ಥೆ ತೋಟಗಳು: ಈ ವಿಭಾಗ ದಲ್ಲಿ 44 ಶಿಕ್ಷಣ ಸಂಸ್ಥೆಗಳು ಭಾಗ ವಹಿಸಿದ್ದು, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಮಾನಸಗಂಗೋತ್ರಿಯ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್(ಪ್ರಥಮ), ಬನ್ನಿ ಮಂಪಟದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಅತ್ಯುತ್ತಮ ಬಹುಮಾನಕ್ಕೆ ಭಾಜನವಾಗಿದೆ.

ಅಪಾರ್ಟ್‍ಮೆಂಟ್, ಹೋಟೆಲ್, ಆಸ್ಪತ್ರೆ ತೋಟಗಳು: ಲಲಿತಾದ್ರಿಪುರದ ಜೆಎಸ್‍ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಹೂಟಗಳ್ಳಿ ಕೆಆರ್‍ಎಸ್ ರಸ್ತೆಯಲ್ಲಿರುವ ಸೈಲೆಂಟ್ ಶೋರ್ಸ್ ಹೋಟೆಲ್ ಅಂಡ್ ರೆಸಾರ್ಟ್ `ಅತ್ಯುತ್ತಮ ಪ್ರಶಸ್ತಿ’ ಹಾಗೂ ಹುಲಿಕೆರೆಯ ಜುವಾರಿ ಗಾರ್ಡನ್ ಸಿಟಿ, ಜುವಾರಿ ಇನ್ಪ್ರಾ ವಲ್ರ್ಡ್ ಇಂಡಿಯಾ ಲಿ.(ಪ್ರಥಮ) ಬಹುಮಾನ ಪಡೆದುಕೊಂಡವು.

ಖಾಸಗಿ ಮನೆಗಳ ತೋಟ: ಸಿದ್ದಾರ್ಥ ನಗರ ವಿನಯ ಮಾರ್ಗದ ಡಾ.ಹೇಮಾ ಮಾಲಿನಿ ಲಕ್ಷ್ಮಣ್, ಜಯಲಕ್ಷ್ಮೀಪುರಂ ಅಲಿ ವಾಘ್, ವಿಜಯನಗರ 3ನೇ ಹಂತದ ಪ್ರೊ.ಎಂ.ರುದ್ರರಾಧ್ಯ, ವಿಜಯ ನಗರ 1ನೇ ಹಂತದ ಪ್ರಭಾಸುಬ್ರಮಣ್ಯ ಅವರು `ಅತ್ಯುತ್ತಮ’ ಬಹುಮಾನಕ್ಕೆ ಭಾಜನರಾಗಿದ್ದಾರೆ.

ಪುಷ್ಪ ರಂಗೋಲಿ, ಚಿತ್ರಕಲೆ, ಭಾರತೀಯ ಪುಷ್ಪಕಲಾ ಸ್ಪರ್ಧೆ ವಿಜೇತರು: ಎ.ಎಸ್. ಸಾನಿಕ-3 ಪ್ರಥಮ, 1 ದ್ವಿತೀಯ, 2 ತೃತೀಯ ಮತ್ತು 1 ಸಮಾಧಾನಕರ. ನಿಯುಕ್ತ-ತಲಾ 1 ದ್ವಿತೀಯ ಮತ್ತು ತೃತೀಯ, 2 ಸಮಾಧಾನಕರ. ಆರ್. ಮನೋಜ್ಞ-2 ಪ್ರಥಮ, 1 ಸಮಾಧಾನ ಕರ. ಜಿ.ಶೃಷ್ಠಿ- ತಲಾ 1 ಪ್ರಥಮ ಮತ್ತು ತೃತೀಯ, 3 ಸಮಾಧಾನಕರ. ಜಿ.ದೀಕ್ಷಿತಾ -ತಲಾ 1 ದ್ವಿತೀಯ ಮತ್ತು ಸಮಾಧಾನ ಕರ. ಎಂ.ವಿ.ಶ್ರೇಯಾ-2 ಪ್ರಥಮ, 3 ದ್ವಿತೀಯ, 1 ತೃತೀಯ. ಪಿ.ಖುಷಿ-2 ದ್ವಿತೀಯ, ತಲಾ 1 ತೃತೀಯ ಮತ್ತು ಸಮಾಧಾನಕರ. ಕೃಷಿಕ್ ಪಿ.ಗಂಗಾಡ್ಕರ್-ತಲಾ 1 ಪ್ರಥಮ-ದ್ವಿತೀಯ, 2 ಸಮಾ ಧಾನಕರ. ಆರ್.ರಕ್ಷಿತ್-3 ಪ್ರಥಮ. ನಂದಿನಿ-ತಲಾ 1 ಪ್ರಥಮ-ತೃತೀಯ, 1 ಸಮಾಧಾನಕರ. ಸರಸ್ವತಿ-2 ತೃತೀಯ. ಬಿ.ಎ.ವಿಜಯ- 2 ಸಮಾಧಾನಕರ. ಉಷಾ ವೆಂಕಟೇಶ್- ತಲಾ 2 ಪ್ರಥಮ-ದ್ವಿತೀಯ. ಎಸ್.ಅಶ್ವಿನಿ-3 ಸಮಾಧಾನಕರ.

ಪಿ.ರಕ್ಷಿತ್, ಆರ್.ಜಿ.ಗೋಪಾಲ್- ಪ್ರಥಮ. ಸತ್ಯಪ್ರಭ, ಸರಸಮ್ಮ-ದ್ವಿತೀಯ. ಪಿ.ಟಿ.ರಮ್ಯಶ್ರೀ, ಜಿ.ರಿಷಿತಾ, ಸ್ಕಂದ-ತೃತೀಯ ಹಾಗೂ ಇರ್ರಾಮ್ ಫಾತಿಮಾ, ಹೆಬಾ, ವೈಷ್ಣವಿ ಎಂ.ಕುಮಾರ್, ಯು. ವಿಹಾನ್, ಹನ್ಫಾ ಫಾತಿಮಾ, ಸಂಜನಾ, ಮಿನುಗು ವಿ.ಗೌಡ, ವಾಯುಸಿಂಗ್, ಹಿಪ್ಜಾ ಫಾತಿಮಾ, ಪೂರ್ವ, ಗ್ರೀಷ್ಮ ವಿ.ಗೌಡ, ಸನಾ ರಾಮ್‍ಗೋಪಾಲ್, ಕೆ.ಅಭಿಗ್ನಾ, ಗಾನಿಕಾ ವಿ ಕುಸುಮ, ಡಿ.ಸಂಗೀತಾ, ಬಿ. ಸಹನಾ, ಪಿ.ಆರ್.ಕಾವ್ಯಶ್ರೀ ಸಮಾಧಾನ ಕರ ಬಹುಮಾನ ಪಡೆದುಕೊಂಡರು.

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ನಜೀರ್ ಅಹಮದ್ ಅವರು ಬಹುಮಾನ ವಿತರಿಸಿದರು. ನಗರ ಪಾಲಿಕೆ ಸದಸ್ಯ ಎಂ.ಸತೀಶ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟಸ್ವಾಮಿ, ನಗರ ಪಾಲಿಕೆ ಆಯುಕ್ತ ಕೆ.ಹೆಚ್.ಜಗ ದೀಶ್, ಜಿಪಂ ಸಿಇಓ ಕೆ.ಜ್ಯೋತಿ, ಮೈಸೂರು ವಿಭಾಗದ ತೋಟಗಾರಿಕೆ ಜಂಟಿ ನಿರ್ದೇಶಕ ಹೆಚ್.ಎಂ.ನಾಗರಾಜ್, ಜಿಲ್ಲಾ ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ.ಡಿ.ಪ್ರಭಾಮಂಡಲ್, ಜಂಟಿ ಕಾರ್ಯದರ್ಶಿ ಹೆಚ್.ಹನುಮಯ್ಯ, ಖಜಾಂಚಿ ಎಂ.ವಿಜಯಕುಮಾರಿ, ಪದನಿಮಿತ್ತ ಕಾರ್ಯದರ್ಶಿ ಹಬೀಬಾ ನಿಶಾತ್, ತೋಟಗಾರಿಕೆ ಉಪ ನಿರ್ದೇಶಕ ಡಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

Translate »