ಪ್ರವಾಸಿಗರ ಚಿನ್ನಾಭರಣ, ಮೊಬೈಲ್ ಕಳವು
ಮೈಸೂರು

ಪ್ರವಾಸಿಗರ ಚಿನ್ನಾಭರಣ, ಮೊಬೈಲ್ ಕಳವು

October 22, 2018

ಮೈಸೂರು: ದಸರಾ ಸಂಭ್ರಮದ ನಡುವೆ ಮೈಸೂರಿನ ಹಲ ವೆಡೆ ಚಿನ್ನಾಭರಣ, ನಗದು, ಮೊಬೈಲ್ ಗಳನ್ನು ಕಳವು ಮಾಡಲಾಗಿದೆ. ಬೆಂಗ ಳೂರಿನಿಂದ ಅ.18ರಂದು ಮೈಸೂರಿಗೆ ಆಗಮಿಸಿದ್ದ ಮಲ್ಲಿಕಾ ಎಂಬುವರ ವ್ಯಾನಿಟಿ ಬ್ಯಾಗ್‍ನಲ್ಲಿದ್ದ 50 ಸಾವಿರ ರೂ. ನಗದು ಹಾಗೂ ಸುಮಾರು 106 ಗ್ರಾಂ ತೂಕದ ಚಿನ್ನಾ ಭರಣವನ್ನು ಸಿಟಿ ಬಸ್‍ನಲ್ಲಿ ಕಳವು ಮಾಡ ಲಾಗಿದೆ. ಅಂದು ಸಂಜೆ 5.30ಕ್ಕೆ ರೈಲಿನಲ್ಲಿ ಮೈಸೂರು ತಲುಪಿದ ಅವರು, ಅಲ್ಲಿಂದ ಸಿಟಿ ಬಸ್‍ನಲ್ಲಿ ನಗರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.

ಬಸ್‍ನಿಂದ ಇಳಿದು ಬ್ಯಾಗ್‍ನ್ನು ನೋಡಿದಾಗ ಅದರ ಜಿಪ್ ತೆರೆದಿರು ವುದು ಗಮನಕ್ಕೆ ಬಂದಿದೆ. ಬಳಿಕ ಬ್ಯಾಗ್ ಪರಿಶೀಲಿಸಿದ್ದು, ಅದರಲ್ಲಿಟ್ಟಿದ್ದ 50 ಸಾವಿರ ರೂ. ನಗದು, 45 ಗ್ರಾಂ ತೂಕದ ಚಿನ್ನದ ಅವಲಕ್ಕಿ ಸರ, 35 ಗ್ರಾಂ ತೂಕದ ಲಕ್ಷ್ಮೀ ಡಾಲರ್ ಪದಕ, 5.5 ಗ್ರಾಂನ 3 ಉಂಗುರ, 6 ಗ್ರಾಂನ ಒಂದು ಉಂಗುರ, 2ಗ್ರಾಂ ಗುಂಡು, 2 ಗ್ರಾಂನ ಮಾಟಿ ಸೇರಿದಂತೆ ಒಟ್ಟು 106 ಗ್ರಾಂ ಚಿನ್ನಾಭರಣ ಕಳುವಾಗಿ ರುವುದು ಬೆಳಕಿಗೆ ಬಂದಿದೆ. ಗಿರವಿ ಇಡ ಲೆಂದು ತಂದಿದ್ದ ಚಿನ್ನಾಭರಣಗಳ ಜೊತೆಗೆ ಹಣವನ್ನೂ ಬಸ್ಸಿನಲ್ಲಿ ಕಳ್ಳತನ ಮಾಡಿ ರುವುದಾಗಿ ಮಲ್ಲಿಕಾ ಅವರು ದೇವ ರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೊಬೈಲ್ ದೋಚಿದ ಕಳ್ಳರು: ಅ.19 ರಂದು ಜಂಬೂ ಸವಾರಿ ನೋಡಲು ಲಕ್ಷಾಂ ತರ ಜನ ನೆರೆದಿದ್ದರು. ಜನರ ನೂಕು ನುಗ್ಗಲಿನ ನಡುವೆ ಕಳ್ಳರು ಪರ್ಸ್, ಮೊಬೈಲ್ ಗಳನ್ನು ಎಗರಿಸಿದ್ದು, ಅನೇಕರು ಈ ಬಗ್ಗೆ ದೂರು ನೀಡಿಲ್ಲ. ಆದರೆ ಆಯುರ್ವೇ ದಿಕ್ ಕಾಲೇಜು ಬಳಿ ದಸರಾ ನೋಡ ಲೆಂದು ನಿಂತಿದ್ದಾಗ ತಮ್ಮ ಐ ಫೋನ್ 7 ಮೊಬೈಲ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ರಿಶಿತಾ ಜುನೇಜಾ ಅವರು ದೇವ ರಾಜ ಠಾಣೆಗೆ ದೂರು ನೀಡಿದ್ದಾರೆ. ಹಾಗೆಯೇ ಜಂಬೂ ಸವಾರಿ ದಿನದಂದು ಚಾಮುಂಡೇಶ್ವರಿ ದರ್ಶನಕ್ಕೆ ತೆರಳಿದ್ದ ಭಕ್ತರ ಪರ್ಸ್ ಹಾಗೂ ಮೊಬೈಲ್ ಕಳ್ಳತನವಾಗಿ ರುವ ಬಗ್ಗೆ ಕೃಷ್ಣರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಕ ಪ್ರಭಾವತಿ, ಅವರ ಮಗಳು ತನುಜಾ ಅವರೊಂದಿಗೆ ನವೀನ್ ಎಂಬುವರು ಅಂದು ಚಾಮುಂಡೇಶ್ವರಿ ದರ್ಶ ನದ ಬಳಿಕ ವಾಪಸ್ಸಾಗಲೆಂದು ಬಸ್ ಹತ್ತು ವಾಗ 2 ಸಾವಿರ ರೂ. ಹಣ ಹಾಗೂ ಕಾರ್ಬನ್ ಕೆ-9 ಮೊಬೈಲ್ ಇದ್ದ ಪರ್ಸ್ ಅನ್ನು ಕಳ್ಳತನ ಮಾಡಿರುವುದಾಗಿ ನವೀನ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Translate »