`ದಸರಾ ಬೊಂಬೆ’ ಮುಂದಿನ ಪೀಳಿಗೂ ಪರಿಚಯಿಸಿ
ಮೈಸೂರು

`ದಸರಾ ಬೊಂಬೆ’ ಮುಂದಿನ ಪೀಳಿಗೂ ಪರಿಚಯಿಸಿ

October 22, 2018

ಮನೆಮನೆ ಬೊಂಬೆ ಪ್ರದರ್ಶನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದ ರಘುರಾಂ
ಮೈಸೂರು:  ದಸರಾ ಮಹೋತ್ಸವದ ಬೊಂಬೆ ಪ್ರದ ರ್ಶನದಲ್ಲಿ ವೇದಶಾಸ್ತ್ರಗಳನ್ನು ಸಾರುವ ಬೊಂಬೆಗಳಿದ್ದವು. ಇಂಥ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗಬೇಕಾಗಿದೆ ಎಂದು ವಿಪ್ರ ಮುಖಂಡ ಕೆ.ರಘುರಾಂ ಅಭಿಪ್ರಾಯಪಟ್ಟರು.

ಕೃಷ್ಣಮೂರ್ತಿಪುರಂನ ಶ್ರೀರಾಮ ಮಂದಿರದಲ್ಲಿ ದಸರಾ ಮಹೋತ್ಸವದ ಅಂಗವಾಗಿ ವಿಪ್ರ ಸಹಾಯವಾಣಿ ಸಂಘವು ಆಯೋಜಿಸಿದ್ದ `ಮನೆಮನೆ ಬೊಂಬೆ ಪ್ರದರ್ಶನ’ ಸ್ಪರ್ಧೆಯಲ್ಲಿ ವಿಜೇತರಾ ದವರಿಗೆ ಬಹುಮಾನ ವಿತರಿಸಿ, ಅವರು ಮಾತನಾಡಿದರು.

ಭಾರತೀಯ ಪರಂಪರೆ ಉಳಿವಿಗೆ ದಸರಾ ಬೊಂಬೆ ಪದರ್ಶನದಂಥ ಕಾರ್ಯ ಕ್ರಮ ಗಳು ಇನ್ನೂ ಹೆಚ್ಚಾಗಿ ನಡೆಯಬೇಕು. ಬೊಂಬೆ ಪ್ರದರ್ಶನ ಸ್ಪರ್ಧೆಗೆಸೀಮಿತವಲ್ಲ. ಅದು ಸಂಸ್ಕøತಿಯ ಸಂಕೇತವೂ ಹೌದು ಎಂದರು.

ಬ್ರಾಹ್ಮಣರಲ್ಲಿ ಬಿಪಿಎಲ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿದ ಬಿ.ಎ ಹಾಗೂ ಎಂ.ಎ ಪದವಿ ವಿದ್ಯಾರ್ಥಿ ಗಳಿಗೆ ಉಚಿತ ಲ್ಯಾಪ್‍ಟಾಪ್, ವಿದ್ಯಾರ್ಥಿ ಸಹಾಯಧನ, ವೈದ್ಯಕೀಯ ಪ್ರೋತ್ಸಾಹ ಧನ ಹಾಗೂ ಹೊಸದಾಗಿ ವಸತಿ ನಿರ್ಮಾಣ ಮಾಡುವವರಿಗೆ 2.70 ಲಕ್ಷ ರೂ. ಸವಲತ್ತು ನೀಡಲಾಗುತ್ತದೆ. ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಬೊಂಬೆ ಸ್ಪರ್ಧೆಯಲ್ಲಿ ವಿಜೇತರಾದ ಇಟ್ಟಿಗೆಗೂಡಿನ ಅನಿತಾ (ಪ್ರಥಮ), ಸರಸ್ವತಿಪುರಂನ ಜಯಶ್ರೀ ನಾಗಪ್ರಸಾದ್ (ದ್ವಿತೀಯ) ಹಾಗೂ ಕುವೆಂಪುನಗರದ ಲೀಲಾವತಿ (ತೃತೀಯ) ಅವರಿಗೆ ಬಹು ಮಾನ ವಿತರಿಸಲಾಯಿತು. ರಾಜರಾಜೇಶ್ವರಿ ನಗರದ ಕೆ.ಎಸ್.ಸುದರ್ಶನ ವಿಜಯಲಕ್ಷ್ಮಿ ದಂಪತಿಗೆ ಲಕ್ಕಿ ಡಿಪ್ ಪ್ರಶಸ್ತಿ ದೊರೆ ಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.

ಸಭೆಯಲ್ಲಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಗ್ರಾಮಾಂತರ ಬ್ರಾಹ್ಮಣ ಸಂಘದ ಅಧ್ಯಕ್ಷ ಗೋಪಾಲ್ ರಾವ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ ನಂ.ಶ್ರೀಕಂಠಕುಮಾರ್, ಸಾಹಿತಿ ಡಿ.ಹೆಚ್.ಕೃಷ್ಣ ಮೂರ್ತಿ, ಅಪೂರ್ವಸುರೇಶ್, ನಗರ ಪಾಲಿಕೆ ಮಾಜಿ ಸದಸ್ಯ ಪಾರ್ಥಸಾರಥಿ, ಲತಾಮೋಹನ್, ಕಡಕೊಳ ಜಗದೀಶ್, ಶ್ರೀನಿವಾಸ್, ರಂಗನಾಥ್, ನಿಶಾಂತ್ ಇದ್ದರು.

Translate »