ಕಾಂಗ್ರೆಸ್-ಜೆಡಿಎಸ್ ನಡುವೆ ಸಮನ್ವಯತೆ
ಮೈಸೂರು

ಕಾಂಗ್ರೆಸ್-ಜೆಡಿಎಸ್ ನಡುವೆ ಸಮನ್ವಯತೆ

March 30, 2019

ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಕ್ರಮೇಣ ಸಮನ್ವಯತೆ ಬರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಹಿನ್ನೆಲೆಯ ಕಾರ್ಯಕ್ರಮ ಗಳಲ್ಲಿ ಪಾಲ್ಗೊಳ್ಳಲು ಶುಕ್ರವಾರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ಅವರು, ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಒಮ್ಮೆಲೆ ಸಮನ್ವಯತೆ ಮೂಡುವುದು ಸಾಧ್ಯ ವಾಗದಿದ್ದರೂ, ಕ್ರಮೇಣ ಅದು ಸಾಕಾರ ವಾಗುತ್ತದೆ. ಈ ಉಭಯ ಪಕ್ಷಗಳ ಕಾರ್ಯಕರ್ತರು, ಮತದಾರರು ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ಹಾಕುವುದಿಲ್ಲ. ಹಾಗಾಗಿ ಕಾರ್ಯಕ್ರಮ ಅಥವಾ ಪ್ರಚಾರಕ್ಕೆ ಅವರು ಬರಲಿಲ್ಲ, ಇವರು ಬರಲಿಲ್ಲ ಎಂದು ಅನುಮಾನಿಸುವುದು ಅನಗತ್ಯ. ನಾನು ಮೈತ್ರಿ ಅಭ್ಯರ್ಥಿಗಳು ಸ್ಪರ್ಧಿಸಿರುವ ಎಲ್ಲಾ 28 ಕ್ಷೇತ್ರಗಳಿಗೂ ಪ್ರಚಾರಕ್ಕೆ ಹೋಗು ತ್ತೇನೆ ಎಂದು ಸ್ಪಷ್ಟಪಡಿಸಿದರು.

ಐಟಿ ದಾಳಿ ಪರಿಣಾಮ: ಐಟಿ ದಾಳಿ ಯಿಂದ ನಮಗೆ ಪ್ರಯೋಜನವಾಗುವು ದಿಲ್ಲ. ಸ್ವಲ್ಪ ಮಟ್ಟಿಗೆ ಋಣಾತ್ಮಕ ಪರಿ ಣಾಮ ಬೀರಬಹುದು. ಅಂದರೆ ನಮಗೆ ಸಹಾಯ ಮಾಡುವ ಇಂಗಿತವುಳ್ಳವರು ಹಿಂದೆ ಸರಿಯಬಹುದು. ಕಾರ್ಯಕರ್ತರು ಓಡಾಡಲು ಹೆದರಬಹುದು. ಆದರೆ ಈ ಮೂಲಕ ಬಿಜೆಪಿಯವರು ಚುನಾವಣೆ ಯಲ್ಲಿ ಗೆಲ್ಲುತ್ತೇವೆ ಎಂದರೆ ಅದು ಮೂರ್ಖತನ. ಐಟಿ ದಾಳಿ ಒಂದು ಹೆದರಿ ಸುವ ತಂತ್ರವಷ್ಟೇ. ಯಾವಾಗಲೂ ನ್ಯಾಯೋ ಚಿತ ಹಾಗೂ ಮುಕ್ತ ಚುನಾವಣೆ ನಡೆಸ ಬೇಕು. ಆದರೆ ಹೀಗೆ ಭಯದ ವಾತಾವರಣ ನಿರ್ಮಿಸುವ ಪ್ರಯತ್ನ ಪ್ರಧಾನಿ ಮೋದಿ ಅವರಿಗೆ ಶೋಭೆಯಲ್ಲ ಎಂದು ತಿಳಿಸಿದರು.
ದಾಳಿಗೆ ವಿರೋಧವಿಲ್ಲ: ಐಟಿ ದಾಳಿಗೆ ನಮ್ಮ ವಿರೋಧವಿಲ್ಲ. ಆದರೆ ರಾಜಕೀಯ ದುರುದ್ದೇಶದೊಂದಿಗೆ ಮಾಡಬಾರದು. ಬೇರೆ ಸಮಯದಲ್ಲಿ ಸುಮ್ಮನಿದ್ದು ಚುನಾ ವಣಾ ಸಂದರ್ಭವನ್ನೇ ಏಕೆ ಆಯ್ಕೆ ಮಾಡಿ ಕೊಳ್ಳುತ್ತೀರಿ?. ಒಂದೆರಡು ತಿಂಗಳ ಹಿಂದೆಯೇ ದಾಳಿ ಮಾಡಬಹುದಿತ್ತಲ್ಲ. ಅಕ್ರಮ ಆಸ್ತಿ, ತೆರಿಗೆ ವಂಚನೆ ಬಗ್ಗೆ ಮಾಹಿತಿ ಇದ್ದರೆ ಯಾವಾಗ ಬೇಕಾದರೂ ದಾಳಿ ನಡೆಸಲಿ. ಅದನ್ನು ಬಿಟ್ಟು ಹೀಗೆ ಚುನಾ ವಣಾ ಸಂದರ್ಭದಲ್ಲಿ ಭಯದ ವಾತಾ ವರಣ ನಿರ್ಮಾಣ ಮಾಡುವುದು ಸರಿಯಲ್ಲ. ಯಡಿಯೂರಪ್ಪನ ಬಳಿ ದುಡ್ಡಿಲ್ಲವೇ?. ಇಲ್ಲದಿದ್ದರೆ ಎಂಎಲ್‍ಎಗಳಿಗೆ 25-30 ಕೋಟಿ ಕೊಡೋಕೆ ಹೋಗ್ತಿದ್ರಾ. ಅವರ ಮನೆ, ಅವರ ಮಗನ ಮನೆಯ ಮೇಲೆ ಮೊದಲು ದಾಳಿ ಮಾಡಲಿ. ದುಡ್ಡು ಎಣಿ ಸುವ ಮೆಷಿನ್ ಇಟ್ಟುಕೊಂಡಿದ್ದ ಈಶ್ವರಪ್ಪನ ಮನೆ ಮೇಲೆ ದಾಳಿ ಮಾಡಲಿ ಎಂಬುದು ನನ್ನ ಪ್ರಶ್ನೆ. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಬಾದಾಮಿಯಲ್ಲಿ ನನ್ನ ಪರವಾಗಿ ಕೆಲಸ ಮಾಡಿದ ಇಬ್ರಾಹಿಂ, ಚನ್ನರೆಡ್ಡಿ, ತಿಮ್ಮಾಪುರ್ ಹಾಗೂ ಎಸ್.ಆರ್.ಪಾಟೀಲ್ ಕೊಠಡಿ ಮೇಲೆ ಐಟಿ ದಾಳಿ ನಡೆಯಿತು. ಆದರೆ ಶ್ರೀರಾಮುಲು ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಈ ರೀತಿಯ ದಾಳಿ ಯಿಂದ ನಮಗೆ ಯಾವುದೇ ಭಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Translate »