ಬೇಲೂರು, ಅರಸೀಕೆರೆ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿಗೆ ಜೈ…
ಮೈಸೂರು

ಬೇಲೂರು, ಅರಸೀಕೆರೆ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿಗೆ ಜೈ…

March 31, 2019

ಹಾಸನ: ಜಿಲ್ಲೆಯ ಬೇಲೂರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರ ದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದು, ಕೈ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿಗೆ ಜೈಕಾರ ಕೂಗಿದ ಘಟನೆ ಜರುಗಿದೆ.

ಬೇಲೂರಿನಲ್ಲಿ ಗದ್ದಲ: ಬೇಲೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಭಿನ್ನಮತ ಸ್ಫೋಟ ಗೊಂಡಿತ್ತು. ಮಾಜಿ ಸಚಿವ ಬಿ.ಶಿವ ರಾಂ, ಎಂಎಲ್‍ಸಿ ಗೋಪಾಲಸ್ವಾಮಿ ಸಮ್ಮುಖದಲ್ಲೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಭೆ ಪ್ರಾರಂಭವಾಗು ತ್ತಿದ್ದಂತೆ ಗದ್ದಲ ಏರ್ಪಟ್ಟಿತ್ತು. ಈ ವೇಳೆ ಕೆಲವು ಕಾರ್ಯಕರ್ತರು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಮ್ಮನ್ನು ತುಳಿಯುತ್ತಿರುವವರಿಗೆ ಹೇಗೆ ವೋಟ್ ಹಾಕೋದು? ಎಂದು ಪ್ರಶ್ನಿಸಿದರು.

ಪಕ್ಷದ ಮುಖಂಡರ ಬಳಿ ತಮ್ಮ ಅಸ ಮಾಧಾನ ತೋಡಿಕೊಂಡ ಕಾರ್ಯಕರ್ತರು, ನಾವು ಸಮ್ಮಿಶ್ರ ಸರ್ಕಾರದಲ್ಲಿದ್ದರೂ ನಮ್ಮನ್ನು ತುಳಿಯುತ್ತಿದ್ದಾರೆ. ಅಂತಹ ವರಿಗೆ ನಾವು ಮತ ಹಾಕುವುದು ಹೇಗೆ? ನಾವು ಮತ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ವಿರೋಧಿಸಿದ ಕೆಪಿಸಿಸಿ ಸದಸ್ಯ ಮಹೇಶ್
ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕೈ ಕಾರ್ಯಕರ್ತರು ಎ.ಮಂಜು ವಿರುದ್ಧ ಮಾತನಾಡದಂತೆ ಅಡ್ಡಿಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೆಚ್.ಕೆ.ಮಹೇಶ್ ಮಂಡ್ಯದಲ್ಲಿ ಸುಮಲತಾ ಅವರು ಸ್ಪರ್ಧಿಸಿದಂತೆ ಹಾಸನದಿಂದ ಪಕ್ಷೇತರರಾಗಿ ಎ.ಮಂಜು ಸ್ಪರ್ಧಿಸಬಹುದಾಗಿತ್ತು. ಆದರೆ, ಅವರು ಬಿಜೆಪಿ ಸೇರಿದ್ದಕ್ಕೆ ತಮ್ಮ ವಿರೋಧ ವಿದೆ ಎಂದು ಹೇಳಿ ಸಭೆಯಿಂದ ನಿರ್ಗಮಿಸಿದರು. ಸಭೆಯಲ್ಲಿ ಕಾರ್ಯಕರ್ತರ ಗದ್ದಲ-ದಾಂಧಲೆ ಹೆಚ್ಚಾಗಿ ಚೇರುಗಳು ಜಖಂಗೊಂಡವು. ಕಾರ್ಯಕರ್ತರ ಸಭೆಗೆ ಬಂದಿದ್ದ ಜಿಲ್ಲಾ ಕಾಂಗ್ರೆಸ್ ವೀಕ್ಷಕರಾದ ಗಾಯಿತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್ ಮತ್ತಿತರ ಮುಖಂಡರು ಸಭೆಯಿಂದ ಹೊರನಡೆದರು.

ಕಾಂಗ್ರೆಸ್‍ನವರು ಬಿಜೆಪಿಗೇ ವೋಟ್ ಹಾಕ್ತಾರಂತೆ: ನಾವು ಈ ಬಾರಿ ಜೆಡಿಎಸ್‍ಗೆ ವೋಟ್ ಹಾಕಲ್ಲ. ನಾವು ಈ ಸಾರಿ ಬಿಜೆಪಿಗೇ ಮತ ಚಲಾಯಿಸೋದು ಅಂತಾ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಮುಂದೆ ಕೈ ಕಾರ್ಯಕರ್ತರು ರಾಜಾ ರೋಷವಾಗಿ ಕೂಗಾಡಿದ ಘಟನೆ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ನಡೆಯಿತು.

ಅರಸೀಕೆರೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಲು ಪುತ್ರನ ಪರವಾಗಿ ಹೆಚ್.ಡಿ.ರೇವಣ್ಣ ಆಗಮಿಸಿದ್ದರು. ಈ ವೇಳೆ ಕೆಲ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದ ಉದ್ಘಾಟನೆಗೂ ಮುನ್ನ ಸಭೆಗೆ ಜೆಡಿಎಸ್ ಪಕ್ಷದವರು ಬಂದಿರುವುದು ಸರಿಯಲ್ಲ. ಇವತ್ತು ತಮ್ಮ ಮಗ ಚುನಾವಣೆಗೆ ನಿಂತಿದ್ದಾನೆ ಎಂಬ ಕಾರಣಕ್ಕೆ ಮತ ಕೇಳಲು ಬಂದಿದ್ದಾರೆ. ಅದೇ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಯಾವುದೇ ಕೆಲಸ ಮಾಡಿ ಕೊಡಬೇಕೆಂದು ಹೋದಾಗ, ಆ ಸಂದರ್ಭದಲ್ಲಿ ನಮ್ಮನ್ನು ಕಡೆಗಣಿಸಿದ್ದಾರೆ. ಹಾಗಾಗಿ ಈ ಬಾರಿ ನಾವು ಜೆಡಿಎಸ್‍ಗೆ ಮತ ಹಾಕುವುದಿಲ್ಲ. ಬದಲಿಗೆ ಬಿಜೆಪಿಗೇ ಮತ ಹಾಕುತ್ತೀವಿ ಎಂದು ರೇವಣ್ಣನ ಸಮ್ಮುಖದಲ್ಲಿಯೇ ಕೂಗಾಡಿ, ಗೊಂದಲ ಸೃಷ್ಟಿ ಮಾಡಿದರು.

Translate »