ನಂಜನಗೂಡಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮೈಸೂರು

ನಂಜನಗೂಡಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

March 30, 2019

ಆರ್.ಧ್ರುವನಾರಾಯಣ್ ಭಾರೀ ಅಂತರದ ಗೆಲುವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ
ನಂಜನಗೂಡು: ಕಳೆದ ಲೋಕಾಸಭಾ ಚುನಾವಣೆಯಲ್ಲಿ 1.4 ಲಕ್ಷ ಅಂತರದಿಂದ ವಿಜಯಶಾಲಿಯಾಗಿದ್ದ ಆರ್.ಧ್ರುವನಾರಾಯಣ್ ಈ ಬಾರಿ 3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.

ಲೋಕಾಸಭಾ ಚುನಾವಣೆಯ ಹಿನೆÀ್ನಲೆಯಲ್ಲಿ ನಂಜನಗೂಡು ಸಮೀಪ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹತ್ತು ವರ್ಷದಿಂದ ಚಾಮರಾಜನಗರ ಸಂಸದರಾಗಿರುವ ಧ್ರ್ರುವನಾರಾಯಣ್ ಒಬ್ಬ ಶಾಸಕರಿಗಿಂತಲ್ಲೂ ಅತಿ ಹೆಚ್ಚು ಜನಸಂಪರ್ಕ ಹೊಂದಿರುವ, ಜನರ ಕೈಗೆ ಸದಾ ಸಿಗುವ ಜನಪ್ರಿಯ ಸಂಸದರಾಗಿದ್ದಾರೆ. ಈ ಭಾಗದಲ್ಲಿ ಅಭಿವೃದ್ಧಿ ಕೆಲಸ ಮಾಡುವವರು ಬೇಕೊ?, ಬೈಯುವವರು ಬೇಕೋ? ಎಂದು ಮತದಾರರೇ ತಿರ್ಮಾನಿಸಬೇಕು ಎಂದರು.

ಬಿಜೆಪಿ ಅಭ್ಯರ್ಥಿ ನನಗೆ ದುರಂಹಕಾರಿ ಎಂದು ಹೇಳುತ್ತಾರೆ. ನನ್ನ ವಯಸ್ಸಿಗಿಂತ ಮೂರು ಪಟ್ಟು ದುರಂಹಕಾರ ಅವರಿಗಿದೆ. ನನಗೆ ದುರಂಹಕಾರವಿದ್ದರೆ 5 ವರ್ಷ ಉತ್ತಮ ಆಡಳಿತ ನೀಡಿ ಜನರಿಂದ ಗೌರವ, ಪ್ರೀತಿ ಸಂಪಾದಿಸಲು ಸಾಧ್ಯವಾಗುತ್ತಿತ್ತೆ? ಎಂದು ಶ್ರೀನಿವಾಸ್ ಪ್ರಸಾದ್‍ಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‍ನವರ ಮೇಲೆ ಐಟಿ ದಾಳಿ ಮಾಡಿರುವುದು ರಾಜಕೀಯ ಪ್ರೇರಿತವಾಗಿದೆ ಜೆಡಿಎಸ್, ಕಾಂಗ್ರೆಸ್‍ನವರೇ ಭ್ರಷ್ಟರೆ? ಬಿ.ಎಸ್.ಯಡ್ಡಿಯೂರಪ್ಪ, ಶೋಭಾ ಕರಂಲ್ಲಾಜೆ, ಜಗದೀಶ್ ಶೆಟ್ಟರ್, ಈಶ್ವರಪ್ಪ ನವರ ಮನೆ ಮೇಲೆ ಏಕೆ ದಾಳಿ ಮಾಡಲ್ಲ?. ಅವರೇನು ಸತ್ಯಹರಿಶ್ಚಂದ್ರರೇ?. ಐಟಿ ಅಧಿಕಾರಿಗಳಿಗೆ ಬಿಜೆಪಿಯಲಿರುವ ಭ್ರಷ್ಟರು ಕಾಣಿಸಲ್ಲವೆ? ಎಂದು ಪ್ರಶ್ನಿಸಿದರು.

ಉಪಚುನಾವಣೆ ನಂತರ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದ್ದು, ಅದನ್ನು ಸರಿಪಡಿಸಿಕೊಂಡು ಪಕ್ಷ ಗೆಲ್ಲಿಸಲು ನಾನು ಧ್ರುವನಾರಾಯಣ್, ಹೆಚ್.ಸಿ.ಮಹದೇವಪ್ಪ, ಎಲ್ಲರೂ ಒಂದೇ ವೇದಿಕೆಯಲ್ಲಿ ಸೇರಿದ್ದೇವೆ. ಕಾರ್ಯಕರ್ತರು ಸಹ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟಿನಿಂದ ಕೆಲಸ ಮಾಡಿ ಎಂದು ಕಿವಿಮಾತು ಹೇಳಿದರು.
ಅಭ್ಯರ್ಥಿ ಆರ್.ಧ್ರುವನಾರಾಯಣ್ ಮಾತನಾಡಿ, ನನಗೆ ಯಾರ ವಿರುದ್ಧವೂ ಸೇಡಿನ ಮನೋಭಾವವಿಲ್ಲ. ಆದರೆ ನನ್ನ ಎದುರಾಳಿ ಬಿಜೆಪಿ ಅಭ್ಯರ್ಥಿ ನನ್ನನ್ನು ಸೋಲಿಸುವದೇ ಗುರಿ ಎಂದು ಹೊರಟಿರುವುದು ಎಷ್ಟು ಸರಿ?. ಅಭಿವೃದ್ಧಿ ಮುಖ್ಯವೋ? ದ್ವೇಷ ಮುಖ್ಯವೋ? ಮತದಾರರು ತಿರ್ಮಾನಿಸಬೇಕು. ಬೆನ್ನಿಗೆ ಚೂರಿ ಯಾರಿಗೆ ಯಾರು ಹಾಕಿದರು ಎಂಬುದು ಈ ಚುನಾವಣೆಯಲ್ಲಿ ಜನರೇ ನಿಧರ್Àರಿಸುತ್ತಾರೆ ಎಂದು ಗುಡುಗಿದರು. ಮಾಜಿ ಸಚಿವ ಹೆಚ್.ಸಿ ಮಹದೇವಪ್ಪ ಮಾತನಾಡಿ, ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಸಂವಿಧಾನವನ್ನು ಉಳಿಸಬೇಕಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಎಲ್ಲಾ ಕಾರ್ಯಕರ್ತರು ಭಿನ್ನಾಭಿಪ್ರಾಯ ಬದಿಗಿಟ್ಟು ಧ್ರುವನಾರಾಯಣ್‍ರನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

ಸಚಿವ ಪುಟ್ಟರಂಗಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕ ಕೇಶವಮೂರ್ತಿ, ಕಾಂಗ್ರೆಸ್ ಮುಖಂಡ ಸುನೀಲ್ ಬೋಸ್ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಬಸವರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ರಾಜ್ಯ ಮುಖಂಡ ಗುರುಪಾದಸ್ವಾಮಿ, ವರುಣಾ ಮಹೇಶ್, ನಂದಕುಮಾರ್, ಎಂಎಲ್‍ಸಿ ಧರ್ಮಸೇನಾ, ಜಿಪಂ ಸದಸ್ಯರಾದ ಲತಾಸಿದ್ದಶೆಟ್ಟಿ, ಪುಷ್ಪ ನಾಗೇಶ ರಾಜು, ನಗರಸಭಾ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷ ಪ್ರದೀಪ್, ಕುರುಬರ ಮುಖಂಡ ಪ್ರದೀಪ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯ್‍ಕುಮಾರ್, ಬ್ಲಾಕ್ ಅಧ್ಯಕ್ಷರಾದ ಹೆಚ್.ಎಸ್.ಮೂಗಶೆಟ್ಟಿ, ಗುರುಸ್ವಾಮಿ, ಪಿ.ಶ್ರೀನಿವಾಸ್, ಸ್ವಾಮಿ, ಮಾಜಿ ಜಿಲ್ಲಾ ಹಿಂದುಳಿದ ವರ್ಗದ ಅಧ್ಯಕ್ಷ ಕೆ.ಮಾರುತಿ, ಅನ್ಸರ್ ಅಹಮದ್, ಇಂದನ್ ಬಾಬು, ಕುರಟ್ಟಿ ಮಹೇಶ್, ಬುಲೆಟ್ ಮಹದೇವಪ್ಪ, ಹಾಡ್ಯ ಜಯರಾಮ್, ಕೆಪಿಸಿಸಿ ಸದಸ್ಯ ಅಕ್ಬರ್, ಮುಖಂಡರಾದ ಎಲ್.ಮಾದಪ್ಪ, ವಿಜಯಕುಮಾರ್, ನಗರಸಭಾ ಸದಸ್ಯರಾದ ಸಿ.ಎಂ.ಶಂಕರ್, ಸೇರಿದಂತೆ ಇತರರಿದ್ದರು.

ಧ್ರುವನಾರಾಯಣ್, ಹೆಚ್.ಸಿ.ಮಹದೇವಪ್ಪ,
ದಳದ ಮುಖಂಡರೊಡನೆ ಚರ್ಚೆ
ನಂಜನಗೂಡು: ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸುವ ಹಿನ್ನೆಲೆಯಲ್ಲಿ ನಗರದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಎನ್.ನರಸಿಂಹಸ್ವಾಮಿ ನಿವಾಸಕ್ಕೆ ಸಂಸದ ಧ್ರುವನಾರಾಯಣ್ ಮತ್ತು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರನ್ನು ಕರೆಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ ಒಗ್ಗಟಿನಿಂದ ಪ್ರಚಾರಕ್ಕೆ ತೆರಳಲು ಮಾತುಕತೆ ನಡೆಸಿದರು.

ಇಂದು ನಡೆದ ಕಾರ್ಯಕರ್ತರ ಸಭೆಯಲ್ಲಿ ಜೆಡಿಎಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೆಂಬ ಅಪಸ್ವರ ಕೇಳಿ ಬಂದ ಹಿನ್ನೆಲೆ ಸಂಸದರು ಹಾಗೂ ಮಾಜಿ ಸಚಿವರು ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿಯವರ ಜೊತೆ ಚರ್ಚಿಸಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಹಕರಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ತಾಲೂಕು ಅದ್ಯಕ್ಷ ಆರ್, ವಿ.ಮಹದೇವಸ್ವಾಮಿ, ಹಿರೇಗೌಡನಹುಂಡಿ ಸತೀಶ್, ಸುನೀಲ್ ಬೋಸ್, ಭಾಸ್ಕರ್‍ಗೌಡ ಸೇರಿದಂತೆ ಹಲವರಿದ್ದರು.

Translate »