ಟರ್ಬೋಸ್ಟೀಲ್ ಎಲ್‍ಪಿಎಸ್ ಟಿಎಂಟಿ ಬಾರ್ಸ್ ಬಿಡುಗಡೆ
ಮೈಸೂರು

ಟರ್ಬೋಸ್ಟೀಲ್ ಎಲ್‍ಪಿಎಸ್ ಟಿಎಂಟಿ ಬಾರ್ಸ್ ಬಿಡುಗಡೆ

March 30, 2019

ಬೆಂಗಳೂರು: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ರಾಜ್ಯದ ಮೊದಲ ಹಾಗೂ ಪ್ರಪ್ರಥಮ ಉತ್ಪನ್ನ ಟರ್ಬೋಸ್ಟೀಲ್ ಎಲ್‍ಪಿಎಸ್ ಟಿಎಂಟಿ ಬಾರ್ಸ್ ಅನ್ನು ಬ್ರ್ಯಾಂಡ್ ಅಂಬಾಸಿಡರ್ ಆದ ಕನ್ನಡ ಚಲನಚಿತ್ರ ನಟ ರಮೇಶ್ ಅರವಿಂದ ಬಿಡುಗಡೆ ಮಾಡಿದರು. ಟರ್ಬೋಸ್ಟೀಲ್ ಎಲ್‍ಪಿಎಸ್ ಟಿಎಂಟಿ ಬಾರ್ಸ್‍ಗಳನ್ನು ಎಲ್‍ಪಿಎಸ್ (ಲೋ ಫಾಸ್ಪರಸ್ ಅಂಡ್ ಸಲ್ಫರ್) ಅನ್ನು ಬಳಸಿ ಅತ್ಯಾಧುನಿಕ ತಂತ್ರಜ್ಞಾನದಿಂದ ಉನ್ನತ ದರ್ಜೆಯ ಸ್ಟೀಲ್ ಬಾರ್‍ಗಳನ್ನು ಉತ್ಪಾದಿಸಲಾಗುತ್ತಿದೆ.

ಟರ್ಬೋಸ್ಟೀಲ್ ಎಲ್‍ಪಿಎಸ್ ಟಿಎಂಟಿ ಬಾರ್ಸ್ ಪ್ರಕಾಶ್ ಸ್ಪಾಂಜ್ ಐರನ್ ಅಂಡ್ ಪವರ್ ಪ್ರೈವೇಟ್ ಲಿಮಿಟೆಡ್‍ನ ಒಂದು ಉತ್ಪನ್ನವಾಗಿದ್ದು, ಚಿತ್ರದುರ್ಗ ಜಿಲ್ಲೆ ಮೂಲದ ಸಂಸ್ಥೆಯಾಗಿದ್ದು, 2007ರಂದು ಸ್ಥಾಪನೆಗೊಂಡಿತ್ತು. ಟರ್ಬೋಸ್ಟೀಲ್ಸ್ ಒಂದು ವಿನೂತನ ಮಾರಾಟ ಕೇಂದ್ರವನ್ನು ಹೊಂದಿದ್ದು, ಎಲ್‍ಪಿಎಸ್ ಟೆಕ್ನಾಲಜಿಯನ್ನು ಬಳಕೆ ಮಾಡಿ ಸ್ಟೀಲ್ ಅನ್ನು ತಯಾರಿಸಲಾಗಿದೆ. ಮಾರುಕಟ್ಟೆಯಲ್ಲಿ ದೊರೆಯುವ ಟಿಎಂಟಿ ಕಬ್ಬಿಣದ ಮಾದರಿಯಲ್ಲೇ ದೃಢ ಮತ್ತು ವಿಶ್ವಾಸಾರ್ಹವಾಗಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಉತ್ಪಾದನಾ ಮಟ್ಟವನ್ನು ಆಧರಿಸಿ ಪ್ರಥಮವಾಗಿ ಕರ್ನಾಟಕವನ್ನು ಕೇಂದ್ರೀಕರಿಸಿದೆ. ಈ ಕಂಪನಿಯು ಇಆರ್‍ಎಂ ಗ್ರೂಪ್‍ನ ಒಂದು ಭಾಗವಾಗಿದ್ದು, ಕಬ್ಬಿಣದ ಅದಿರು ಮಾರುಕಟ್ಟೆ, ಸ್ಟೀಲ್ ಮತ್ತು ಪವರ್ ಜನರೇಷನ್ ವಿಭಾಗದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 100 ಡೀಲರ್ಸ್‍ಗಳನ್ನು ಹೊಂದಿದ್ದು, ನೂತನ ಉತ್ಪನ್ನಗಳೊಂದಿಗೆ ಇತರ ರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಿಸುವ ಯೋಜನೆ ಇದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 600 ಮಂದಿಗೆ ಉದ್ಯೋಗ ಕಲ್ಪಿಸಿದ್ದು, ಹೆಚ್ಚುವರಿಯಾಗಿ ಸ್ಟೀಲ್ ಉತ್ಪನ್ನದ ಸಾಮಥ್ರ್ಯವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.

Translate »