ಹೆಚ್.ಡಿ.ಕೋಟೆ: ಪಟ್ಟಣದ ಪುರಸಭೆಯ 23 ಸ್ಥಾನಗಳಿಗೆ ಸೆ.31ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ನಡೆದು ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ 11, ಜೆಡಿಎಸ್ 8, ಬಿಜೆಪಿ ಹಾಗೂ ಬಿಎಸ್‍ಪಿ ತಲಾ ಒಂದು ಸ್ಥಾನಗಳಿಸಿದ್ದು, ಇಬ್ಬರ ಪಕ್ಷೇತರರು ಜಯ ಸಾಧಿಸಿದ್ದಾರೆ.
ವಾರ್ಡ್ 1ರಲ್ಲಿ ಕಾಂಗ್ರೆಸ್‍ನ ಆಸೀಫ್ ಇಕ್ಬಾಲ್ 252 ಮತ ಪಡೆದು 147 ಮತಗಳ ಅಂತರದಿಂದ ಜೆಡಿಎಸ್‍ನ ಮಹಮದ್ ಹನೀಫ್ ಅವರನ್ನು ಪರಾಭವಗೊಳಿಸದ್ದಾರೆ. ವಾರ್ಡ್ 2ರಲ್ಲಿ ಜೆಡಿಎಸ್ ಸರೋಜಮ್ಮ(385) ಕಾಂಗ್ರೆಸ್‍ನ ಟಿ.ಎಸ್.ರುಕ್ಮಿಣಿ ವಿರುದ್ಧ 20 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ವಾರ್ಡ್ 3ರಲ್ಲಿ ಕಾಂಗ್ರೆಸ್‍ನ ಸಾಹೀರಾ ಭಾನು (400) ಜೆಡಿಎಸ್‍ನ ಜಾಹೇದಾ ಬೇಗಂ (214) ವಿರುದ್ಧ ಗೆಲುವು ದಾಖಲಿಸಿದ್ದಾರೆ. ವಾರ್ಡ್ 4ರಲ್ಲಿ ಕಾಂಗ್ರೆಸ್‍ನ ಹೆಚ್.ಸಿ.ನರಸಿಂಹಮೂರ್ತಿ 364 ಮತ ಪಡೆದು ಜೆಡಿಎಸ್‍ನ ಎನ್.ಗುರುಮಲ್ಲು (146) ವಿರುದ್ಧ ವಿಜಯಿಯಾಗಿದ್ದಾರೆ. ವಾರ್ಡ್ ನಂ.5ರಲ್ಲಿ ಬಿಎಸ್‍ಪಿ ಪ್ರಥಮ ಬಾರಿಗೆ ಪುರಸಭಾ ಚುನಾವಣೆಯಲ್ಲಿ ಗೆಲುವು ದಾಖಲಿಸಿದ್ದು, 332 ಮತ ಪಡೆದ ಬಿಎಸ್‍ಪಿ ಅಭ್ಯರ್ಥಿ ನಂಜಪ್ಪ ಬಿಜೆಪಿಯ ಸಿದ್ದರಾಜು(176) ವಿರುದ್ಧ ಜಯ ಗಳಿಸಿದ್ದಾರೆ.
21 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಕಂಡಿದ್ದು, ವಾರ್ಡ್ 6ರಲ್ಲಿ ಆ ಪಕ್ಷದ ಅಭ್ಯರ್ಥಿ ನಂದಿನಿ ಅವರು 403 ಮತ ಪಡೆದು, ಕಾಂಗ್ರೆಸ್‍ನ ಶಶಿಕಲಾ ವಿರುದ್ಧ 276 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ 7ರಲ್ಲಿ ಕಾಂಗ್ರೆಸ್‍ನ ಪುಟ್ಟಬವಸನಾಯಕ (397) ಜೆಡಿಎಸ್‍ನ ತಿಮ್ಮನಾಯಕ ಅವರನ್ನು 28 ಮತಗಳಿಂದ ಸೋಲಿಸಿದ್ದಾರೆ.
ವಾರ್ಡ್ 8ರಲ್ಲಿ ಕಾಂಗ್ರೆಸ್‍ನ ನಾಗಮ್ಮ (283) ಜೆಡಿಎಸ್‍ನ ಲತಾ (212) ಅವರನ್ನು, ವಾರ್ಡ್ 9ರಲ್ಲಿ ಜೆಡಿಎಸ್‍ನ ಅನಿತಾ (202), ಕಾಂಗ್ರೆಸ್‍ನ ರಂಜಿತಾ ಅವರನ್ನು ಮಣಿಸಿ ಆಯ್ಕೆಯಾಗಿದ್ದಾರೆ. ವಾರ್ಡ್ 10ರಲ್ಲಿ ಜೆಡಿಎಸ್‍ನ ಸಿ.ನಾಗರಾಜು(158) ಜಯ ಗಳಿಸಿದ್ದು, ಬಿಜೆಪಿಯ ಜಿ.ಲೋಕೇಶ್ 124 ಮತ ಪಡೆದು ಸೋಲನ್ನಪ್ಪಿದ್ದಾರೆ.
ವಾರ್ಡ್ 11ರಲ್ಲಿ ಕಾಂಗ್ರೆಸ್‍ನ ವೆಂಕಟೇಶ್(158), ಬಿಜೆಪಿಯ ಎಂ.ಮಹದೇವಸ್ವಾಮಿ ವಿರುದ್ಧ 34 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ವಾರ್ಡ್ ನಂ.12ರಲ್ಲಿ ಕಾಂಗ್ರೆಸ್‍ನ ಕುಲುಮೆರಾಜು(252) ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಜಿ.ನಂದೀಶ್(203) ಪರಾಭವಗೊಂಡಿದ್ದಾರೆ.ವಾರ್ಡ್ 13ರಲ್ಲಿ ಕಾಂಗ್ರೆಸ್‍ನ ಎಂ.ಮಧುಕುಮಾರ್ (252) 6 ಮತಗಳ ಅಂತರದಿಂದ ಜೆಡಿಎಸ್‍ನ ಕೆ.ಪಿ.ಮಂಜುಳ (246) ವಿರುದ್ಧ ಗೆಲುವು ಕಂಡಿದ್ದಾರೆ.
ವಾರ್ಡ್ 14ರಲ್ಲಿ ಕಾಂಗ್ರೆಸ್‍ನ ಎಚ್.ಬಿ.ಗೀತಾಗಿರಿಗೌಡ (515) ಜೆಡಿಎಸ್‍ನ ತೇಜಾ (190) ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ.
ವಾರ್ಡ್ 15ರಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಲ್.ಸುಹಾಸಿನಿ(117) ಅವರು, ಕಾಂಗ್ರೆಸ್‍ನ ಲಕ್ಷ್ಮೀ(97) ಹಾಗೂ ಬಿಜೆಪಿಯ ಮಂಜುಳಾಬಾಯಿ(97) ಅವರನ್ನು ಪರಾಭವಗೊಳಿಸಿದ್ದಾರೆ.
ವಾರ್ಡ್ 16ರಲ್ಲಿ ಜೆಡಿಎಸ್‍ನ ಕೆ.ಎ.ದರ್ಶಿನಿ(120) ಜಯ ಗಳಿಸಿದ್ದು, ಕಾಂಗ್ರೆಸ್‍ನ ನಜ್ಮಾಭಾನು(71), ಪರಾಭವಗೊಂಡಿದ್ದಾರೆ.
ವಾರ್ಡ್ 17ರಲ್ಲಿ ಕಾಂಗ್ರೆಸ್‍ನ ಶಾಂತಮ್ಮ ಗೋವಿಂದರಾಜು(251) ಪಕ್ಷೇತರ ಅಭ್ಯರ್ಥಿ ಇಂದ್ರಮ್ಮ(179) ವಿರುದ್ಧ ಜಯಗಳಿಸಿದ್ದಾರೆ.
ವಾರ್ಡ್ 18ರಲ್ಲಿ ಪಕ್ಷೇತರ ಪ್ರೇಮಸಾಗರ್ 308 ಮತ ಪಡೆದು, ಬಿಎಸ್‍ಪಿಯ ವೈ.ಬಿ.ಲೋಹಿತ್‍ಕುಮಾರ್ ಅವರನ್ನು 17 ಮತಗಳ ಅಂತರದಿಂದ ಸೋಲಿಸಿದ್ದಾರೆ.ವಾರ್ಡ್ 19ರಲ್ಲಿ ಜೆಡಿಎಸ್‍ನ ವೈ.ಬಿ.ಹರೀಶ್(172) ಬಿಜೆಪಿಯ ಎಲ್.ಮರೀಗೌಡ (62) ಹಾಗೂ ಕಾಂಗ್ರೆಸ್‍ನ ಸುರೇಂದ್ರ ಡಿ.ಗೌಡ(41) ಅವರನ್ನು ಪರಾಜಯ ಗೊಳಿಸಿದ್ದಾರೆ.
ವಾರ್ಡ್ 20ರಲ್ಲಿ ಜೆಡಿಎಸ್‍ನ ಸಿ.ಪಿ.ಕವಿತಾ(376) ಸಮೀಪ ಸ್ಪರ್ಧಿ ಕಾಂಗ್ರೆಸ್ ಸುಧಾಮಣಿ (270) ವಿರುದ್ಧ ಗೆಲುವು ಸಾಧಿಸಿದ್ದಾರೆ.
ವಾರ್ಡ್ 21ರಲ್ಲಿ ಕಾಂಗ್ರೆಸ್ ಸೋಮಶೇಖರ್ (642) ಜೆಡಿಎಸ್‍ನ ಟಿ.ಕಾಂತರಾಜು ಅವರನ್ನು 386 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ವಾರ್ಡ್ 22ರಲ್ಲಿ ಜೆಡಿಎಸ್ ಸಿ.ಲೋಕೇಶ್(202) ಕಾಂಗ್ರೆಸ್‍ನ ಕೆ.ಕೃಷ್ಣ (158) ವಿರುದ್ಧ ಜಯಗಳಿಸಿದ್ದಾರೆ.
ವಾಡ 23ರಲ್ಲಿ ಜೆಡಿಎಸ್‍ನ ಎಂ.ಶಿವಮ್ಮ(233) ಮತ ಪಡೆದು ಕಾಂಗ್ರೆಸ್‍ನ ಎ.ಜಯಮ್ಮ(146) ಗೆಲುವು ಸಾಧಿಸಿದ್ದಾರೆ.