ಪ್ರಕೃತಿ ಮುನಿಸಿಗೆ ಮರೆಯಾದ ಕೈಲ್‍ಪೊಳ್ದ್ ಸಂಭ್ರಮ
ಕೊಡಗು

ಪ್ರಕೃತಿ ಮುನಿಸಿಗೆ ಮರೆಯಾದ ಕೈಲ್‍ಪೊಳ್ದ್ ಸಂಭ್ರಮ

September 4, 2018

ಮಡಿಕೇರಿ: ಕೊಡಗಿನ ಪ್ರಮುಖ ಕೈಲ್‍ಮುಹೂರ್ತ ಹಬ್ಬದ ಮೇಲೆ ಪ್ರಕೃತಿ ವಿಕೋಪದ ಕಾರ್ಮೋಡ ಕವಿದಿದ್ದು, ಜಿಲ್ಲೆಯ ಜನರು ಈ ಬಾರಿ ಕೈಲ್ ಮುಹೂರ್ತದ ಉತ್ಸವ ಆಚರಿಸಲು ಮನಸ್ಸಿಲ್ಲದೇ ಸಾರ್ವತ್ರಿಕ ಆಚರಣೆಯಿಂದ ದೂರ ಸರಿದಿದ್ದಾರೆ.
ಮಕ್ಕಂದೂರು, ಶಾಂತಳ್ಳಿ, ಸಂಪಾಜೆ ಸೇರಿದಂತೆ 32 ಗ್ರಾಮಗಳಲ್ಲಿ ಪ್ರಕೃತಿ ವಿಕೋಪದಿಂದಾಗಿ ನೂರಾರು ಮನೆಗಳು ಮಣ್ಣು ಪಾಲಾಗಿದ್ದರೆ, ಸಾವಿರಾರು ಮಂದಿ ಇನ್ನೂ ನಿರಾಶ್ರಿತ ಕೇಂದ್ರಗಳಲ್ಲಿದ್ದಾರೆ. ಭೂಕುಸಿತದಿಂದಾಗಿ ಮನೆ, ತೋಟ, ಜಾನುವಾರುಗಳನ್ನೆಲ್ಲಾ ಕಳೆದುಕೊಂಡ ಗ್ರಾಮಸ್ಥರ ನೋವಿಗೆ ಇಡೀ ದೇಶವೇ ಸಹಾಯ ಹಸ್ತ ಚಾಚಿರುವಾಗ ಕೊಡಗಿನಲ್ಲಿ ಸಂಭ್ರಮದ ವಾತಾವರಣವೇ ಮಾಯ ವಾಗಿದೆ. ಹೀಗಾಗಿ ಸೆ.3 ರಂದು ಜಿಲ್ಲೆಯಲ್ಲಿ ಆಚರಿಸಬೇಕಾಗಿದ್ದ ಪ್ರಮುಖ ಹಬ್ಬ ಕೈಲ್ ಪೆÇಳ್ದ್‍ನ್ನು ಸಾಂಕೇತಿಕವಾಗಿ ಮನೆಗಳಲ್ಲಿ ಮಾತ್ರ ಆಚರಿಸಲಾಯಿತು.

ಮಳೆಗಾಲದ ಅಬ್ಬರ ಮುಕ್ತಾಯಗೊಳ್ಳುತ್ತಿರುವಂತೆಯೇ ಕೊಡಗಿನಲ್ಲಿ ಆಚರಿಸಲ್ಪಡುವ ಮೊದಲ ಹಬ್ಬವೇ ಕೈಲ್‍ಪೆÇಳ್ದ್. ಭತ್ತದ ಗದ್ದೆಯಲ್ಲಿ ರೈತನ ಶ್ರಮದ ಬೆವರಿಗೆ ಸಹಾಯ ಮಾಡಿದ ಉಪಕರಣಗಳಾದ ನೇಗಿಲು, ನೊಗ, ಎತ್ತು, ಟ್ರಾಕ್ಟರ್, ಟಿಲ್ಲರ್, ಗುದ್ದಲಿ, ಹಾರೆ ಸೇರಿದಂತೆ ರಕ್ಷಣೆಗೆ ಬಳಕೆಯಾಗುವ ಕೋವಿಗೆ ಸಾಂಪ್ರದಾಯಿಕ ರೀತಿಯಲ್ಲಿ ಪೂಜೆ ಸಲ್ಲಿಸುವ ಆಯುಧ ಪೂಜಾ ಹಬ್ಬವೇ ಕೈಲ್‍ಪೆÇಳ್ದ್. ಈ ಹಬ್ಬದಂದು ಮಳೆಯಲ್ಲಿಯೇ ಕಷ್ಟಪಟ್ಟು ದುಡಿದ ರೈತ ತನ್ನ ಶ್ರಮಕ್ಕೆ ವಿರಾಮ ಹೇಳಿ ಮನೆ ಮಂದಿಯೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸಿಕೊಳ್ಳುವುದು ಸಾಂಪ್ರದಾಯಿಕವಾಗಿ ರೂಢಿಯಲ್ಲಿದೆ. ಮಾಂಸ ಪ್ರಿಯರಾದ ಕೊಡಗಿನ ಜನರು ಈ ಹಬ್ಬದಂದು ಹಂದಿ ಮಾಂಸದ ರುಚಿ ಯೂಟ ಸೇವಿಸುತ್ತಾರೆ. ಹೀಗಾಗಿ ಕೈಲ್‍ಪೆÇಳ್ದ್ ಎಂದೊಡನೇ ಕೊಡಗಿನ ಜನಪ್ರಿಯ ಪಂದಿಕ್ಕರಿ ಎಂಬ ಹಂದಿಮಾಂಸದ ಖಾದ್ಯದ ಸವಿರುಚಿ ಬಾಯಲ್ಲಿ ನೀರೂರಿಸುವಂತೆ ಮಾಡು ತ್ತದೆ. ಆದರೆ ಈ ಬಾರಿ ಪ್ರಕೃತಿಯ ಮುನಿಸಿಗೆ ಕೊಡವರ ಸಂಭ್ರಮ ಮರೀಚಿಕೆಯಾಗಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳೇ ಕೊಚ್ಚಿಕೊಂಡು ಹೋಗಿರಬೇಕಾದರೆ ಹಬ್ಬದ ಸಂಭ್ರಮ ಯಾಕೆ ಎಂದು ಪ್ರತೀಯೋರ್ವರು ಹಬ್ಬದ ಸಡಗರದಿಂದ ದೂರವೇ ಉಳಿಯುವಂತಾಯಿತು. ಕೈಲ್‍ಪೆÇಳ್ಡ್ ಹಬ್ಬದ ದಿನದಂದು ಕೊಡಗು ಜಿಲ್ಲೆಯ ಪ್ರತೀ ಗ್ರಾಮದಲ್ಲಿಯೂ ಹಬ್ಬದ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸ ಲ್ಪಡುತ್ತಿದ್ದವು. ಮರದ ಮೇಲೆ ಕಟ್ಟಲ್ಪಟ್ಟ ತೆಂಗಿನಕಾಯಿಗೆ ಗುಂಡುಹೊಡೆಯುವು ದರಿಂದ ಮೊದಲ್ಗೊಂಡು ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಕಾಳುಹೆಕ್ಕುವ ಸ್ಪರ್ಧೆ ಸೇರಿದಂತೆ ಮಕ್ಕಳು, ಮಹಿಳೆಯರಿಗೂ ವಿವಿಧ ಸ್ಪರ್ಧೆಗಳು ಆಯೋಜಿಸಲ್ಪಡುತ್ತಿದ್ದವು. ಮಳೆಯಲ್ಲಿಯೇ ನಡೆಯುತ್ತಿದ್ದ ಇಂಥ ಸ್ಪರ್ಧೆಗಳ ಪೈಪೆÇೀಟಿ ಅನೇಕ ಕ್ರೀಡಾಳುಗಳಿಗೆ ಉತ್ಸಾಹ ಮೂಡಿಸುವಂತೆ ಜರುಗುತ್ತಿತ್ತು.

Translate »