ಭಾರತೀಯರ ಧರ್ಮ ಗ್ರಂಥ ಸಂವಿಧಾನ
ಹಾಸನ

ಭಾರತೀಯರ ಧರ್ಮ ಗ್ರಂಥ ಸಂವಿಧಾನ

February 11, 2019

ಬೆಂಗಳೂರು ಹೆಚ್ಚುವರಿ ಪೆÇಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಅಭಿಮತ

ಅರಸೀಕೆರೆ: ನಾವೇಲ್ಲರೂ ಭಾರತೀಯರು, ಭಾರತೀಯತೆ ನಮ್ಮ ಧರ್ಮವಾಗಬೇಕು. ನಮ್ಮ ಸಂವಿ ಧಾನಕ್ಕೆ ಧರ್ಮ ಗ್ರಂಥದ ಮಹತ್ವವನ್ನು ನೀಡಲಾಗಿದೆ. ಜಾತ್ಯಾತೀತತೆಯನ್ನು ಬೋಧಿಸುವ ನಮ್ಮ ಸಂವಿ ಧಾನವನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಪಾಲಿಸದಿರುವುದು ದುರದೃಷ್ಟಕರ ಎಂದು ಬೆಂಗಳೂರು ಹೆಚ್ಚುವರಿ ಪೆÇಲೀಸ್ ಆಯುಕ್ತ ಎಂ.ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವೆಂಕಟೇಶ್ವರ ಕಲಾ ಭವನದಲ್ಲಿ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಹಾಗೂ ಛಲವಾದಿ ಮಹಾಸಭಾ ಸಂಯುಕ್ತಾಶ್ರಯದಲ್ಲಿ ಏರ್ಪಡಿಸ ಲಾಗಿದ್ದ ಸಂವಿಧಾನ ಸಂಕಲ್ಪದಿನ ಹಾಗೂ ಸಂವಿ ಧಾನ ಓದು ಅಭಿಯಾನ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು.

ರಾಷ್ಟ್ರದಲ್ಲಿ ಯಾವುದೇ ಧರ್ಮವಿರಲಿ, ಆಚ ರಣೆಗಳಿರಲಿ, ಜಾತಿ-ಜನಾಂಗಗಳಿರಲಿ, ಇದು ಸರಿ-ತಪ್ಪು ಎಂದು ಹೇಳಲಿರುವ ಧರ್ಮ ಗ್ರಂಥ ವೆಂದರೆ ಅದು ಭಾರತದ ಸಂವಿಧಾನ ಮಾತ್ರ. ಸಮಾಜದಲ್ಲಿ ಕಟ್ಟುನಿಟ್ಟಿನಿಂದ ಪಾಲಿಸುವ ನಿಯಮಗಳೇ ಕಾನೂನುಗಳಾಗುತ್ತವೆ. ನಿಯಮ ವನ್ನು ಪಾಲನೆ ಮಾಡುವ ಜನರು ನಿಯಮ ಬದ್ಧರಾಗಿರುತ್ತಾರೆ. ಆ ನಿಯಮಗಳು ಧರ್ಮವನ್ನು ಹುಟ್ಟು ಹಾಕುತ್ತವೆ. ನಾವೆಲ್ಲರೂ ಭಾರತೀಯರು, ನಮ್ಮೆಲ್ಲರ ಧರ್ಮ, ಭಾರತ ಧರ್ಮ. ನಮ್ಮ ಧರ್ಮ ಗ್ರಂಥ ಭಾರತದ ಸಂವಿಧಾನ ಎಂದು ತಿಳಿಸಿದರು.

ನಮ್ಮ ಸಂವಿಧಾನದ ಪ್ರಮುಖ ಆಶಯಗಳು ಏನೆಂದರೆ ಜಾತ್ಯಾತೀತತೆ. ಸಾರ್ವಜನಿಕ ಜೀವನ ದಲ್ಲಿ ನಮ್ಮ ಜಾತಿಯನ್ನು ನಮ್ಮ ಧರ್ಮವನ್ನು ಮನೆಯ ಆಚಾರ ವಿಚಾರಗಳನ್ನು ತೆಗೆದು ಕೊಂಡು ಹೋಗಬಾರದು. ಕಾನೂನು ಬದ್ಧವಾದ ಆಚಾರ-ವಿಚಾರಗಳನ್ನು ಮಾತ್ರ ಪಾಲಿಸಬೇಕು. ಆದರೆ, ಸರ್ಕಾರಿ ಅಧಿಕಾರಿಗಳು ಚುನಾಯಿತ ಜನಪ್ರತಿನಿಧಿಗಳು ಜಾತ್ಯಾತೀತತೆಯನ್ನು ಪಾಲಿ ಸುತ್ತಿಲ್ಲ ಎಂದು ವಿಷಾದಿಸಿದರು.

ಭಾರತದಲ್ಲಿ ಎಲ್ಲರೂ ಸಮಾನರು. ಸಮಾಜದ, ಸಾರ್ವಜನಿಕರ ಏಳಿಗೆಗಾಗಿಯೇ ಸರ್ಕಾರ ಇರು ವುದು. ಆದರೆ, ಇಂದು ಸಮಾಜವಾದ ಕಡಿಮೆ ಯಾಗುತ್ತಿದೆ. ಖಾಸಗೀಕರಣ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳು ಸರ್ಕಾರಿ ಆಸ್ಪತ್ರೆ ಸಮಾಜವಾ ದದ ಫಲಿತಾಂಶವಾಗಿದ್ದು ಖಾಸಗಿ ಶಿಕ್ಷಣ ಸಂಸ್ಥೆ ಖಾಸಗೀಕರಣದ ಉದಾಹರಣೆಯಾಗಿದ್ದು, ಸರ್ಕಾರ ಜನರಿಗೆ ಉದ್ಯೋಗ ದೊರಕಿಸಲು ತಂತ್ರ ಜ್ಞಾನ ಬೆಳೆಸಲು ಸರ್ಕಾರಿ ಸಹಭಾಗಿತ್ವದ ಅನೇಕ ಕಂಪನಿಗಳನ್ನು ಹುಟ್ಟುಹಾಕಿದೆ. ಇದು ಸಮಾಜ ವಾದದ ಒಂದು ಭಾಗವಾಗಿದೆ ಎಂದರು.

ಸಂವಿಧಾನದ ಮೂರು ಪ್ರಮುಖ ಆಶಯ ಗಳಾದ ಜಾತ್ಯಾತೀತತೆ, ಪ್ರಜಾಪ್ರಭುತ್ವ, ಸಮಾಜ ವಾದ ನಾಶವಾಗುತ್ತಿದೆ. ಸರ್ಕಾರಿ ಆಸ್ತಿಗಳು, ಸಾರ್ವಜನಿಕ ಆಸ್ತಿಗಳು, ಉಳ್ಳವರ ಪಾಲಾಗಿ ಸಮಾಜವಾದ ಅವನತಿಯತಿಯತ್ತ ಸಾಗುತ್ತಿದೆ. ಪ್ರಜಾಪ್ರಭುತ್ವ ಈ ರಾಷ್ಟ್ರದಲ್ಲಿ 300-500 ಕುಟುಂಬಗಳು ದೇಶದ ಸಂಪೂರ್ಣ ಆಡಳಿತ ವನ್ನು ತಮ್ಮ ಕೈಯಲ್ಲಿಟ್ಟುಕೊಂಡಿವೆ. 1947ರಲ್ಲಿ ಯಾರು ರಾಜಕಾರಣಕ್ಕೆ ಬಂದರೋ ಅವರ ಮೊಮ್ಮ ಕ್ಕಳು, ಮರಿ ಮೊಮ್ಮಕ್ಕಳು ಈಗ ಈ ದೇಶವನ್ನಾಳು ತ್ತಿದ್ದಾರೆ. ಎಲ್ಲರಿಗೂ ಅಧಿಕಾರ ಸಿಗುತ್ತಿಲ್ಲ. ಭಾರತ ದಲ್ಲಿ ಸೇವೆಗಿಂತ ಅಧಿಕಾರದ ವ್ಯಾಮೋಹ ಹೆಚ್ಚಾ ಗುತ್ತಿದೆ ಒಂದೇ ಕುಟುಂಬದ 15-20ಮಂದಿಗೆ ಅಧಿಕಾರ ಸಿಗುತ್ತಿದೆ. ಜನಸಾಮಾನ್ಯರಿಗೆ ಅಧಿಕಾರ ದೊರಿಯದೆ ಪ್ರಜಾಪ್ರಭುತ್ವದ ಆಶಯಗಳು ನಾಶವಾಗಿವೆ ಎಂದು ಆತಂಕಿಸಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಜಗತ್ತೇ ಮೆಚ್ಚುವಂತಹ ಸಂವಿಧಾನ ನಮ್ಮದು ಇಂತಹ ಸಂವಿಧಾನವನ್ನು ಲೆಕ್ಕವಿಲ್ಲದಷ್ಟು ಹಲವು ಬಾರಿ ತಿದ್ದುಪಡಿ ಮಾಡಿರುವಂತಹ ಇತಿಹಾಸ ವನ್ನು ನೋಡಿದ್ದೇವೆ. ಇಂದಿಗೂ ನಡೆಯುತ್ತಿದೆ ನಾಳೆಯೂ ನಡೆಯುತ್ತದೆ. ಸಂವಿಧಾನವನ್ನು ಆಚರಣೆಗೆ ತರುವಂತಹವರೇ ಜಾತಿ-ಜಾತಿ ಎಂದು ವಿಂಗಡಣೆ ಮಾಡಿದರೆ ಸಮಾನತೆಯನ್ನು ಹುಡುಕಲು ಸಾಧ್ಯವೇ. ಡಾ.ಅಂಬೇಡ್ಕರ್‍ರವರು ಷೋಷಿತ ವರ್ಗಗಳನ್ನು ಮೇಲೆತ್ತಲು ಸಂವಿ ಧಾನದಲ್ಲಿ ಅಡಕಮಾಡಿರುವಂತಹ ಕೆಲವು ಅಂಶ ಗಳನ್ನು ದುರುಪಯೋಗಪಡಿಸಿಕೊಂಡು ಸಂವಿ ಧಾನಕ್ಕೆ ಅಗೌರವವನ್ನು ತರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಚಿನ್ನ-ಬೆಳ್ಳಿ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್.ಪ್ರಮೋದ್, ಜನವಾದಿ ಮಹಿಳಾ ಸಂಘದ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ವಿಮಲ, ಜಿಪಂ ಸದಸ್ಯ ಪಟೇಲ್ ಶಿವಪ್ಪ, ವೀರಶೈವ ಮಹಾ ಸಭಾದ ತಾಲೂಕು ಅಧ್ಯಕ್ಷ ಎ.ಬಿ.ಗುರುಸಿz್ದÉೀಶ್, ನೇಗಿಲ ಯೋಗಿ ಟ್ರಸ್ಟ್‍ನ ರಾಜ್ಯಾಧ್ಯಕ್ಷ ಡಾ.ಹೆಚ್. ಆರ್. ಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗಂಜೀಗೆರೆ ಚಂದ್ರಶೇಖರ್, ಪ್ರಗತಿಪರ ಸಂಘಟನೆ ಗಳ ಒಕ್ಕೂಟದ ಅಧ್ಯಕ್ಷ ವೆಂಕಟೇಶ್, ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ಈರಯ್ಯ, ಕನ್ನಡಾ ಭಿವೃದ್ಧಿ ಪ್ರಾಧಿಕಾರದ ಸದಸ್ಯ ಪಿ.ಯು ದಿನೇಶ್, ದಲಿತ ಮುಖಂಡರಾದ ಕೆ.ಆನಂದ್, ಎ.ಪಿ.ಚಂದ್ರಯ್ಯ, ಎಂ.ಟಿ.ವೆಂಕಟೇಶ್, ಭಾಸ್ಕರ್ ಹಾಜರಿದ್ದರು.

 

ದೇಶದಲ್ಲಿರುವ ಎಲ್ಲರಿಗೂ ಸಮಾನವಾದ ಹಕ್ಕು ಇದ್ದು, 18ವರ್ಷ ಮೀರಿದ ಎಲ್ಲಾ ಯುವಕ ಯುವತಿಯರಿಗೆ ಮತದಾನದ ಹಕ್ಕು ಇದ್ದು ತಮಗೆ ಇಷ್ಟವಾದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿ ಆ ಮೂಲಕ ದೇಶದ ಆಡಳಿತ ಯಂತ್ರ ವನ್ನು ನಡೆಸಬಹುದು. ಜನರ ನಿರ್ಧಾರದಂತೆ ಸರ್ಕಾರಗಳು ನಡೆಯಬೇಕೆಂಬುದು ಪ್ರಜಾ ಪ್ರಭುತ್ವದ ಆಶಯವಾಗಿದೆ.

-ಎಂ.ನಂಜುಂಡಸ್ವಾಮಿ, ಹೆಚ್ಚುವರಿ ಪೆÇಲೀಸ್ ಆಯುಕ್ತರು, ಬೆಂಗಳೂರು

 

 

 

Translate »