ಸಂಚಾರಿ ನಿಯಮ ಪಾಲನೆಯಿಂದ ಅಪಘಾತಗಳ ನಿಯಂತ್ರಣ
ಹಾಸನ

ಸಂಚಾರಿ ನಿಯಮ ಪಾಲನೆಯಿಂದ ಅಪಘಾತಗಳ ನಿಯಂತ್ರಣ

February 12, 2019

ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಎಸ್.ಎಸ್.ಪಾಷಾ
ಹಾಸನ: ದೇಶದಲ್ಲಿ 3 ನಿಮಿಷಕ್ಕೆ ಒಬ್ಬ ವ್ಯಕ್ತಿ ರಸ್ತೆ ಅಪಘಾತದಿಂದ ಸಾವನ್ನಪ್ಪುತ್ತಿದ್ದಾನೆ. ಸಂಚಾರಿ ನಿಯಮಗಳ ಪಾಲನೆಯಿಂದ ಅಪಘಾತ ಗಳ ನಿಯಂತ್ರಣ ಸಾಧ್ಯವಿದೆ. ಪ್ರತಿಯೊಬ್ಬರೂ ಜಾಗರೂ ಕತೆಯಿಂದ ಹಾಗೂ ತಾಳ್ಮೆಯಿಂದ ವಾಹನ ಚಾಲನೆ ಮಾಡುವುದು ಅಗತ್ಯ ಎಂದು ಸಾರಿಗೆ ಇಲಾಖೆಯ ನಿವೃತ್ತ ಅಧೀಕ್ಷಕ ಎಸ್.ಎಸ್.ಪಾಷ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಆಯೋಜಿ ಸಿದ್ದ 30ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿ, ಅತ್ಯಂತ ಪರಿ ಪೂರ್ಣ ಶಿಸ್ತುಬದ್ಧ ಚಾಲಕರನ್ನಾಗಿ ಮಾಡುವುದೇ ಸರ್ಕಾರದ ಕೆಲಸ. ಹಾಗಾಗಿ ಅದರ ಬಹಳಷ್ಟು ದೊಡ್ಡ ಜವಾಬ್ದಾರಿ ವಾಹನ ಚಾಲಕರಾದ ನಿಮ್ಮಲ್ಲಿವೆ. ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಿಕೊಂಡು ಎಚ್ಚರ ದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಅತೀ ಹೆಚ್ಚು ಸಮಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದೇ ಸಾರಿಗೆ ಇಲಾಖೆ. ದೇಶದ ಸೈನಿಕರಂತೆ ದೇಶದ ಅಭಿ ವೃದ್ಧಿಗೆ ಸಾರಿಗೆ ಇಲಾಖೆಯ ವಾಹನ ಚಾಲಕರು ಹಗಲಿ ರುಳು ಕಾರ್ಯ ನಿರ್ವಹಿಸುತ್ತಿದ್ದಾರೆ. ರಕ್ಷಣಾತ್ಮಕ ಚಾಲನೆ ವಾಹನ ಬಗ್ಗೆ ಎಲ್ಲರೂ ಗಮನ ಹರಿಸಬೇಕಿದೆ ಎಂದರು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಮದ್ಯಪಾನ ಹಾಗೂ ಮೊಬೈಲ್ ಬಳಸುತ್ತಾ ವಾಹನ ಚಲಾಯಿಸುವುದು ಅಪರಾಧ ಮತ್ತು ಅಪಘಾತಕ್ಕೆ ಕಾರಣವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಸ್ಕೌಟ್ಸ್ ಮತ್ತು ಗೈಡ್ಸ್‍ನ ಕಮಾಂಡರ್ ಪ್ರಕಾಶ್ ಯಾಜೀ ಮಾತನಾಡಿ, ತ್ಯಾಗ ಮತ್ತು ಸೇವೆ ವಾಹನ ಚಾಲಕರಲ್ಲಿ ಬಹಳ ಮುಖ್ಯವಾಗಿದೆ. ವಾಹನ ಚಾಲಕರು ಯಾವುದೇ ಸಂದರ್ಭದಲ್ಲಿಯೂ ಇದಕ್ಕೆ ಬದ್ಧರಿರಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇರುವ ಹಾಗೆ ಸಂಚಾರಿ ಶಿಸ್ತು ನಮ್ಮಲ್ಲಿಯೂ ಅಗತ್ಯ ಎಂದರು.

ಮೋಟಾರ್ ವಾಹನ ತನಿಖಾಧಿಕಾರಿ ನರಸಿಂಹ ಮೂರ್ತಿ ಮಾತನಾಡಿ, ದೇಶದಲ್ಲಿ ಕಳೆದ ವರ್ಷ 1,47,000 ಜನ ರಸ್ತೆ ಅಪಘಾತದಿಂದ ಮೃತರಾಗಿ ದ್ದಾರೆ. ಅದರಲ್ಲಿ ಹೆಚ್ಚಿನವರು ಯುವಕರಾಗಿದ್ದಾರೆ. ಸಮಯ ಪಾಲನೆ ಇಲ್ಲದಿದ್ದರೆ ಯಾವುದನ್ನು ಸಾಧಿಸಲು ಆಗದು. ವಾಹನ ಚಾಲಕರು ರಸ್ತೆ ಸುರಕ್ಷತೆಯ ನಿಯಮಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದು ಪಾಲನೆ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಚೇರಿ ಅಧೀಕ್ಷಕರಾದ ಶಶಿಕಲಾ, ಹಿರಿಯ ಪರಿವೀಕ್ಷಕರಾದ ಇಂತಿ ಯಾಜ್ ಪಾಷ, ನಿಧೀಶ್, ಜಯಂತ್ ಯೋಗೇಶ್ ಮತ್ತಿತರರು ಹಾಜರಿದ್ದರು. ಎಂ.ಕೆ. ಗಿರೀಶ್ ಕಾರ್ಯಕ್ರಮ ನಿರೂಪಿಸಿದರು, ಎಂ. ಕುಮಾರ್ ವಂದಿಸಿದರು.

Translate »