ಮಂಗನ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲ
ಹಾಸನ

ಮಂಗನ ಕಾಯಿಲೆಗೆ ನಿರ್ದಿಷ್ಟವಾದ ಔಷಧಿ ಇಲ್ಲ

February 12, 2019

ಆರೋಗ್ಯ ನಿರೀಕ್ಷಕ ಎಂ.ಆರ್.ಆನಂದಗೌಡ
ರಾಮನಾಥಪುರ: ಮಂಗನ ಕಾಯಿಲೆಗೆ ಲಸಿಕೆ ಹೊರತುಪಡಿಸಿ ನಿರ್ದಿಷ್ಟ ವಾದ ಔಷಧಿ ಇರುವುದಿಲ್ಲ. ಈ ಕಾಯಿ ಲೆಯು ಒಂದು ಕಡೆಯಿಂದ ಇನ್ನೊಂದು ಕಡೆಗೆ ಉಣ್ಣೆಗಳ ಮೂಲಕ ಹರಡುವು ದರಿಂದ ಇಂತಹುದೇ ನಿರ್ಧಿಷ್ಟ ಸ್ಥಳಕ್ಕೆ ಕಾಯಿಲೆ ಬರುವುದಾಗಿ ಹೇಳುವುದು ಅಸಾಧ್ಯ. ಆದ ಕಾರಣ ಪ್ರತಿಯೊಬ್ಬರೂ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಬೇಕು ಎಂದು ಕೊಣ ನೂರು ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಎಂ.ಆರ್.ಆನಂದ ಗೌಡ ತಿಳಿಸಿದರು.

ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂ ಲನಾ ಕಾರ್ಯಕ್ರಮದ ಅಂಗವಾಗಿ ಸಾರ್ವ ಜನಿಕರಿಗಾಗಿ ಹಮ್ಮಿಕೊಂ ಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂ ಕಿನ ಕ್ಯಾಸನೂರು ಕಾಡಿನಲ್ಲಿ ಮಂಗನ ಕಾಯಿಲೆ ಪತ್ತೆಯಾದುದರಿಂದ ಈ ರೋಗಕ್ಕೆ ಕ್ಯಾಸನೂರು ಕಾಡಿನ ಕಾಯಿಲೆ ಅಥವಾ ಮಂಗನ ಕಾಯಿಲೆ ಎನ್ನುತ್ತಾರೆ. ಇದು ಕಾಡಿ ನಲ್ಲಿರುವ ಸೋಂಕು ಪೀಡಿತ ಉಣ್ಣೆಗಳು ಕಚ್ಚುವುದರಿಂದ ಮಾತ್ರ ಬರುತ್ತದೆ. ಈ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಕಾಡಿನಲ್ಲಿ ಮಂಗಗಳು ಸಾಯುವುದೇ ಈ ಕಾಯಿಲೆಯ ಮುನ್ಸೂ ಚನೆಯಾಗಿದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಸತತ ಎಂಟರಿಂದ ಹತ್ತು ದಿನಗಳವರೆಗೆ ಬಿಡದೆ ಜ್ವರ ಬರುವುದು, ವಿಪರೀತ ತಲೆನೋವು, ಸೊಂಟ ನೋವು, ಕೈಕಾಲು ನೋವು, ನಿಶಕ್ತಿ, ಕಣ್ಣು ಕೆಂಪಾಗು ವುದು, ಜ್ವರ ಬಂದ 2 ವಾರಗಳ ನಂತರ ಮೂಗು, ಬಾಯಿ ಹಾಗೂ ಗುದದ್ವಾರ ದಿಂದ ರಕ್ತಸ್ರಾವವಾಗುವುದು, ಸನ್ನಿವಾತ ಅಥವಾ ಮೆದುಳಿನ ಹೊದಿಕೆಯ ಜ್ವರ ಲಕ್ಷಣಗಳು ಹಾಗೂ ರೋಗದ ತೀವ್ರತೆ ರೋಗಿಯ ಪ್ರತಿರೋಧಕ ಶಕ್ತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂದರು.

ಈ ಕಾಯಿಲೆ ಬರದಂತೆ ತೆಗೆದುಕೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳೆಂದರೆ ವಾಸಸ್ಥಳದ ಸುತ್ತಮುತ್ತ ಮಂಗ ಸತ್ತಿರು ವುದು ಕಂಡ ಕೂಡಲೇ ಸ್ಥಳೀಯ ಆರೋಗ್ಯಾ ಧಿಕಾರಿಗಳಿಗೆ ತಿಳಿಸಬೇಕು. ಮಂಗಗಳು ಮೃತಪಟ್ಟಿರುವ ಕಾಡಿನಲ್ಲಿ ಸಂಚರಿಸು ವಾಗ ಮೈತುಂಬಾ ಬಟ್ಟೆ ಧರಿಸಿ, ಆರೋಗ್ಯ ಇಲಾಖೆಯಿಂದ ವಿತರಿಸಲಾಗುವ ಡಿಎಂಪಿ ತೈಲವನ್ನು ಕೈಕಾಲುಗಳಿಗೆ ಲೇಪಿಸಿಕೊಂಡು ಹೋಗಬೇಕು ಮತ್ತು ಕಾಡಿನಿಂದ ಬಂದ ನಂತರ ಸೋಪು ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಬಿಸಿ ನೀರಿನಿಂದ ಸೋಪು ಹಚ್ಚಿ ತೊಳೆಯ ಬೇಕು. ಸತ್ತ ಮಂಗಗಳ ಮರಣೋತ್ತರ ಪರೀಕ್ಷೆಗಾಗಿ ಪಶುಸಂಗೋಪನಾ ಇಲಾ ಖೆಗೆ ಮಾಹಿತಿ ನೀಡಬೇಕು ಎಂದು ತಿಳಿ ಸುತ್ತಾ ಮಂಗನ ಕಾಯಿಲೆಗೆ ಲಸಿಕೆ ಲಭ್ಯವಿ ರುತ್ತದೆ ಎಂದರು. ಈ ಲಸಿಕೆಯಿಂದ ಯಾವುದೇ ದುಷ್ಪರಿಣಾಮ ಇರುವುದಿಲ್ಲ. ಈ ಲಸಿಕೆಯನ್ನು ಆರೋಗ್ಯವಂತ ವ್ಯಕ್ತಿ ಸರಿಯಾದ ಪ್ರಮಾಣದಲ್ಲಿ ಆಗಸ್ಟ್ ಮಾಹೆ ಯಲ್ಲಿ ಮೊದಲ ಮತ್ತು ಒಂದು ತಿಂಗಳ ಅಂತರದಲ್ಲಿ 2ನೇ ವರಸೆ ಲಸಿಕೆ ಪಡೆಯ ಬೇಕು. 2ನೇ ಚುಚ್ಚುಮದ್ದು ಹಾಕಿಸಿ ಕೊಂಡ 30 ದಿನಗಳ ನಂತರವೇ ರೋಗ ನಿರೋಧಕ ಶಕ್ತಿ ಬರುತ್ತದೆ. ಪ್ರತೀ ವರ್ಷ ಬಲವರ್ಧಕ ಲಸಿಕೆಯನ್ನು ಹಾಕಿಸಿಕೊಳ್ಳ ಬೇಕು ಹಾಗೂ ಗರ್ಭಿಣಿಯರು ಈ ಚುಚ್ಚು ಮದ್ದನ್ನು ಹಾಕಿಸಿಕೊಳ್ಳಬಾರದು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ ಜವರೇಗೌಡ, ಶುಶ್ರೂಶಕಿ ಯರಾದ ನೇತ್ರಾವತಿ, ದಿವ್ಯಾ, ಭವ್ಯಾ, ಕಲಾವತಿ, ಸಾರ್ವಜನಿಕರು, ಆಸ್ಪತ್ರೆಯ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

Translate »