ಪ್ರಜ್ವಲ್ ಪರ ಸಿ.ಆರ್.ಶಂಕರ್ ಬಿರುಸಿನ ಪ್ರಚಾರ
ಹಾಸನ

ಪ್ರಜ್ವಲ್ ಪರ ಸಿ.ಆರ್.ಶಂಕರ್ ಬಿರುಸಿನ ಪ್ರಚಾರ

April 9, 2019

ಹಾಸನ: ಲೋಕಸಭೆ ಚುನಾ ವಣೆ ಹಿನೆÀ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಗರಸಭೆ ಸದಸ್ಯ ಸಿ.ಆರ್.ಶಂಕರ್ ನೇತೃತ್ವದಲ್ಲಿ ಪಕ್ಷದ ಕಾರ್ಯ ಕರ್ತರು ಮತ್ತು ಅಭಿಮಾನಿಗಳು ಸೋಮ ವಾರ ಬಿರುಸಿನ ಮತಯಾಚನೆ ಮಾಡಿದರು.

ಕಾರ್ಯಕರ್ತರ ರೋಡ್ ಶೋ ನಗರದ ಚನ್ನಪಟ್ಟಣದಿಂದ ಹೊರಟು, ಬಿ.ಎಂ.ರಸ್ತೆ ಸುತ್ತಮುತ್ತ ಮನೆ ಮತ್ತು ಅಂಗಡಿ ಮುಂಗಟ್ಟು ಗಳಿಗೆ ತೆರಳಿ ಜೆಡಿಎಸ್ ಸಾಧನೆಯ ಕರ ಪತ್ರವನ್ನು ನೀಡಿ ಮತಯಾಚನೆ ಮಾಡುವ ಮೂಲಕ ಪ್ರಚಾರ ಕೈಗೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ನಗರ ಸಭೆ ಸದಸ್ಯ ಶಂಕರ್ ಮಾತನಾಡಿ, ಮಣ್ಣಿನ ಮಗನೆಂದೇ ದೇಶವ್ಯಾಪ್ತಿ ಹೆಸರುಗಳಿಸಿ ರುವ ಸರಳ, ಸಜ್ಜನಿಕೆಯ ಜನನಾಯಕ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶಾಸಕರಾಗಿ, ಸಂಸದರಾಗಿ, ರಾಜ್ಯದ ಮುಖ್ಯ ಮಂತ್ರಿಯಾಗಿ ಹಾಗೂ ದೇಶದ ಪ್ರಧಾನಿ ಯಾಗಿ ನಾಡಿಗೆ ಮತ್ತು ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ.ಜಿಲ್ಲೆಯ ಅಭಿವೃದ್ಧಿಗೆ ಅವರು ನೀಡಿರುವ ಕೊಡುಗೆ ಜನತೆಗೆ ತಿಳಿದಿದೆ ಎಂದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ದಕ್ಷ ಮತ್ತು ಪಾರದರ್ಶಕ ಆಡಳಿತ ನಡೆಸು ತ್ತಿದ್ದಾರೆ. ಅವರ ಸಹೋದರ ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಉತ್ತಮ ರಸ್ತೆ ಮತ್ತು ಸೇತುವೆಗಳ ನಿರ್ಮಾಣದ ಮೂಲಕ ವ್ಯವಸ್ಥಿತ ರಸ್ತೆ ಜಾಲ ನಿರ್ಮಾ ಣಕ್ಕೆ ಕಾರಣರಾಗಿದ್ದಾರೆ ಎಂದು ತಿಳಿಸಿದರು.

ಇಂತಹ ಸೇವಾ ಪರಂಪರೆಯಲ್ಲಿ ಸಾಗಿ ಬಂದಿರುವ ಯುವಕ ಪ್ರಜ್ವಲ್ ರೇವಣ್ಣ 2019ರ ಲೋಕಸಭೆ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಇದು ವರೆಗೂ ಸಮಸ್ತ ಜನತೆಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಗಮನಿಸಿ ಮತ ನೀಡಬೇಕು ಎಂದು ಮನವಿ ಮಾಡಿದರು.

Translate »