ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್  ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ
ಮೈಸೂರು

ಅಪಾರ್ಟ್‍ಮೆಂಟ್‍ನಲ್ಲಿ ಕೂತು ಕ್ರಿಕೆಟ್ ಬೆಟ್ಟಿಂಗ್: ಸಿಸಿಬಿ ಪೊಲೀಸರಿಂದ ವ್ಯಕ್ತಿ ಬಂಧನ

January 4, 2019

ಮೈಸೂರು: ಐಷಾರಾಮಿ ಅಪಾರ್ಟ್‍ಮೆಂಟ್‍ನಲ್ಲಿ ಕುಳಿತು ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿಯನ್ನು ಮೈಸೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಲನಹಳ್ಳಿ ಬಡಾವಣೆಯ ಚುಗೋಮಲ್ ಎಂಬುವರ ಪುತ್ರ ಚಂದ್ರಬಾನು ಸಿ.ಹಿಂದೂಜಾ ಬಂಧಿತನಾಗಿದ್ದು, ಈತನಿಂದ ಕ್ರಿಕೆಟ್ ಬೆಟ್ಟಿಂಗ್‍ಗೆ ಬಳಕೆಯಾಗಿದ್ದ 25 ಸಾವಿರ ರೂ ನಗದು, ಒಂದು ಟಿವಿ, 2 ಮೊಬೈಲ್ ಫೋನ್, ಸೆಟ್ ಟಾಪ್ ಬಾಕ್ಸ್ ಇತ್ಯಾದಿ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಚಂದ್ರಬಾನು ಜಿ.ಹಿಂದೂಜಾ ಆಲನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಆಲನಹಳ್ಳಿ ಬಡಾವಣೆಯ ಬ್ರಿಗೇಡ್ ಸಾಲಿಟೇರ್ ಅಪಾರ್ಟ್‍ಮೆಂಟ್, ಫ್ಲಾಟ್ ನಂ.104ರಲ್ಲಿ ಕೂತು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ ಕ್ರಿಕೆಟ್ ಪಂದ್ಯದ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮೈಸೂರು ನಗರ ಸಿಸಿಬಿ ಪೊಲೀಸರು ಬುಧವಾರ(ಜ.2) ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿದ್ದರು. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಮ್ ಅಮಟೆ ಮಾರ್ಗದರ್ಶನದಲ್ಲಿ ಸಿಸಿಬಿ ಘಟಕದ ಎಸಿಪಿ ಬಿ.ಆರ್.ಲಿಂಗಪ್ಪ ನೇತೃತ್ವದಲ್ಲಿ ಸಿಸಿಬಿ ಇನ್‍ಸ್ಪೆಕ್ಟರ್ ಎ.ಮಲ್ಲೇಶ್, ಸಿಬ್ಬಂದಿಗಳಾದ ರಾಜು, ಪುರುಷೋ ತ್ತಮ್, ರಘು, ರಾಜಶ್ರೀ, ಧನಂಜಯ, ಶ್ರೀನಿವಾಸ ಪ್ರಸಾದ್ ದಾಳಿ ನಡೆಸಿದ್ದರು.

Translate »