ಜ.11ರಿಂದ ಮೂರು ದಿನ ಕೊಡಗು ಉತ್ಸವ
ಮೈಸೂರು

ಜ.11ರಿಂದ ಮೂರು ದಿನ ಕೊಡಗು ಉತ್ಸವ

January 4, 2019

ಮೈಸೂರು: ಜಲ ಪ್ರಳಯದಿಂದ ನಲುಗಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೆ ನವ ಚೈತನ್ಯ ತುಂಬುವ ಪ್ರಯತ್ನವಾಗಿ ಪ್ರವಾಸೋ ದ್ಯಮ ಇಲಾಖೆಯಿಂದ ಇದೇ ಜ.11ರಿಂದ ಮೂರು ದಿನ `ಕೊಡಗು ಉತ್ಸವ’ ಹಮ್ಮಿ ಕೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಹೆಚ್.ಜನಾ ರ್ಧನ್ ಇಂದಿಲ್ಲಿ ತಿಳಿಸಿದರು.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಉಂಟಾದ ಜಲಪ್ರಳಯದಿಂದ ಕೊಡಗಿನ ಪ್ರವಾಸೋದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದ್ದು, ಕೊಡಗು ಜಿಲ್ಲೆಗೆ ಮತ್ತೆ ಪ್ರವಾಸಿಗರನ್ನು ಆಕರ್ಷಿಸಿ, ಪ್ರವಾಸೋದ್ಯಮ ಪುನಶ್ಚೇತನ ನೀಡುವ ದೃಷ್ಟಿಯಿಂದ ಮೂರು ದಿನಗಳ ಕೊಡಗು ಉತ್ಸವ ಏರ್ಪಡಿಸಿರುವುದಾಗಿ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಹೋಟೆಲ್ ಮಾಲೀಕರ ಸಂಘದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಮೈಸೂರಿಗೆ ಬರುವ ಪ್ರವಾಸಿಗರು ಮೈಸೂ ರನ್ನು ಕೇಂದ್ರವಾಗಿರಿಸಿಕೊಂಡು ಭೇಟಿ ನೀಡುತ್ತಾರೆ. ಆದರೆ ಬಹುತೇಕರು ತಮ್ಮ ಪ್ರವಾಸವನ್ನು ಮೈಸೂರು ಜಿಲ್ಲೆಗೇ ಸೀಮಿತ ಗೊಳಿಸದೆ ನೆರೆಯ ಜಿಲ್ಲೆಗಳಾದ ಮಂಡ್ಯ, ಕೊಡಗು, ಚಾಮರಾಜನಗರ ಜಿಲ್ಲೆಗಳ ಪ್ರವಾಸಿ ಕೇಂದ್ರಗಳಿಗೂ ಭೇಟಿ ನೀಡುತ್ತಾರೆ. ಹೀಗಾಗಿ ಹೋಟೆಲ್ ಮಾಲೀಕರ ಸಂಘ ಹೊರ ತಂದಿರುವ ಪ್ರವಾಸಿ ತಾಣಗಳನ್ನು ಪರಿಚಯಿಸುವ ಸಚಿತ್ರ ಕ್ಯಾಲೆಂಡರ್ ಪ್ರವಾ ಸಿಗರಿಗೆ ಉಪಯುಕ್ತವಾಗಲಿದೆ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಮೈಸೂರಿಗೆ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಸಂದರ್ಭದಲ್ಲಿ ತಮ್ಮ ವ್ಯಾಪಾರ ಕೇಂದ್ರ ಗಳಾದ ಹೋಟೆಲ್, ಉಪಾಹಾರ ಗೃಹ, ಸ್ವೀಟ್ಸ್, ಬೇಕರಿಗಳಲ್ಲಿ ಈ ಕ್ಯಾಲೆಂಡರ್ ತೂಗು ಹಾಕಿದರೆ, ಮೈಸೂರಿಗೆ ಬರುವ ಪ್ರವಾಸಿ ಗರು ಅದನ್ನು ನೋಡಿ, ಅದರ ಬಗ್ಗೆ ಮಾಹಿತಿ ಪಡೆದು ಆ ಪ್ರವಾಸಿ ತಾಣಗಳಿಗೆ ತೆರಳಲು ನೆರವಾಗುತ್ತದೆ. ಮೈಸೂರು ಜಿಲ್ಲೆಯ ಚಾಮುಂಡಿಬೆಟ್ಟ, ಮೈಸೂರು ಅರಮನೆ, ಶ್ರೀರಂಗಪಟ್ಟಣದ ಪ್ರವಾಸಿ ಸ್ಥಳಗಳು, ಬೃಂದಾವನ ಅಣೆಕಟ್ಟೆ, ಸೋಮನಾಥಪುರ, ಗಗನಚುಕ್ಕಿ ಭರಚುಕ್ಕಿ, ಕೊಡಗು, ದುಬಾರೆ ಇನ್ನಿತರ ಪ್ರವಾಸಿ ತಾಣಗಳ ಅತ್ಯಾಕರ್ಷಕ ಚಿತ್ರಗಳನ್ನು ಒಳಗೊಂಡಂತೆ ಕ್ಯಾಲೆಂಡರ್ ರೂಪಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೋಟೆಲ್ ಮಾಲೀ ಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿ ಶಾಸ್ತ್ರಿ, ಉಪಾಧ್ಯಕ್ಷ ಸುರೇಶ್ ಉಗ್ರಯ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ತಂತ್ರಿ, ಪದಾಧಿ ಕಾರಿಗಳಾದ ಎ.ಸತೀಶ್, ಕುಮಾರ್, ಕೆ. ಭಾಸ್ಕರ್‍ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.

Translate »