ಆರ್‍ಟಿಸಿ, ಪ್ರಮಾಣ ಪತ್ರಗಳ ಶುಲ್ಕ ದಿಢೀರ್ ಏರಿಕೆ
ಮೈಸೂರು

ಆರ್‍ಟಿಸಿ, ಪ್ರಮಾಣ ಪತ್ರಗಳ ಶುಲ್ಕ ದಿಢೀರ್ ಏರಿಕೆ

January 4, 2019

ಮೈಸೂರು: ರೈತರು ಹಾಗೂ ಮಧ್ಯಮ ವರ್ಗದ ಜನರ ಮೇಲೆ ರಾಜ್ಯ ಸರ್ಕಾರ ಹೊಸ ವರ್ಷದ ಉಡುಗೊರೆಯಾಗಿ `ಹೊರೆ’ ಯೊಂದನ್ನು ಸದ್ದಿಲ್ಲದೆ ಹೇರಿದೆ. ಆರ್‍ಟಿಸಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳ ಶುಲ್ಕ ವನ್ನು ದಿಢೀರ್ ಹೆಚ್ಚಳ ಮಾಡುವ ಮೂಲಕ ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ರೈತರಿಗೆ ನಾಡ ಕಚೇರಿ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ನೀಡುತ್ತಿದ್ದ 35 ಸೇವೆಗಳ ಶುಲ್ಕವನ್ನು ಜ.1ರಿಂದ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಇದು ಬಡ, ಮಧ್ಯಮ ಹಾಗೂ ರೈತಾಪಿ ವರ್ಗದ ಅಸಮಾಧಾನಕ್ಕೆ ಕಾರಣವಾಗಿದೆ. ಆರ್‍ಟಿಸಿಗೆ 5 ರೂ., ಹೆಚ್ಚುವರಿ ಹಾಳೆಗೆ 2 ರೂ. ಹೆಚ್ಚಳ ಮಾಡಲಾಗಿದ್ದು, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿನ 35 ಸೇವೆಗಳ ಪ್ರಮಾಣ ಪತ್ರಕ್ಕೆ 10 ರೂ. ಹೆಚ್ಚಳ ಮಾಡ ಲಾಗಿದೆ. ಬಡವರು, ರೈತರಿಂದ ಸುಲಿಗೆ ಮಾಡುವುದಕ್ಕೆ ಕಂದಾಯ ಇಲಾಖೆ ಮುಂದಾ ಗಿದೆ ಎಂದು ರೈತರು ಕಿಡಿಕಾರಿದ್ದಾರೆ.

ಕಂದಾಯ ಇಲಾಖೆ ಸುತ್ತೋಲೆ: ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯ ದರ್ಶಿ ಸಿ.ಪುಟ್ಟನಂಜಯ್ಯ ಡಿಸೆಂಬರ್ 31ರಂದು ಸುತ್ತೋಲೆ ಹೊರಡಿಸಿ, ಆರ್‍ಟಿಸಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳ ಶುಲ್ಕ ಹೆಚ್ಚಳ ಮಾಡಲಾಗಿದ್ದು, ತಕ್ಷಣದಿಂದಲೇ ಜಾರಿಗೊಳಿಸುವಂತೆ ಆದೇಶ ನೀಡಿದ್ದಾರೆ. ಜ.1ರಿಂದಲೇ ಹೊಸ ದರದಂತೆ ಶುಲ್ಕ ಸಂಗ್ರ ಹಿಸಲಾಗುತ್ತಿದೆ. ದರ ಹೆಚ್ಚಳದ ಮಾಹಿತಿ ಅರಿಯದೆ ರೈತರು ತಾಲೂಕು ಕಚೇರಿ ಸಿಬ್ಬಂದಿ ವಿರುದ್ಧ ಹರಿಹಾಯ ತೊಡಗಿ ದ್ದಾರೆ. ಹಳೆ ಶುಲ್ಕ ಪಡೆದು ಪ್ರಮಾಣಪತ್ರ ನೀಡುವಂತೆ ಜಗಳಕ್ಕಿಳಿಯುತ್ತಿದ್ದಾರೆ.

ಯಾವುದಕ್ಕೆ ಎಷ್ಟು: ನಾಡಕಚೇರಿ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಯ ಸ್ಪಂದನ ಕೇಂದ್ರದಲ್ಲಿ ಆರ್‍ಟಿಸಿಗೆ ಈ ಹಿಂದೆ 10 ರೂ. ಶುಲ್ಕ ಪಡೆಯಲಾಗುತ್ತಿತ್ತು. ಆರ್‍ಟಿಸಿ ಯಲ್ಲಿ ಐದಾರು ಜನರ ಹೆಸರಿದ್ದಾಗ ಅಥವಾ ಪೋಡುಗಳ ಸಂಖ್ಯೆ ಹೆಚ್ಚಾಗಿದ್ದಾಗ ಆರ್‍ಟಿಸಿ 3 ಪುಟಗಳಲ್ಲಿ ಮುದ್ರಿತವಾಗುತ್ತಿತ್ತು. ಇದಕ್ಕೆ ಹೆಚ್ಚುವರಿ ಹಣ ಪಾವತಿಸುವ ಅಗತ್ಯವಿರ ಲಿಲ್ಲ. ಆದರೆ ಇದೀಗ ಹೊಸ ದರ ಜಾರಿಗೆ ಬಂದಿದ್ದರಿಂದ ಒಂದು ಆರ್‍ಟಿಸಿಗೆ 15 ರೂ., 5 ಪುಟಕ್ಕಿಂತ ಹೆಚ್ಚುವರಿ ಹಾಳೆ ಗಳಿಗೆ ತಲಾ 2 ರೂ. ಪ್ರತ್ಯೇಕವಾಗಿ(5ನೇ ಪುಟದಿಂದ) ಪಾವತಿಸಬೇಕಾಗುತ್ತದೆ.

ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಜಾತಿ ಮತ್ತು ಆದಾಯ, ಪರಿಶಿಷ್ಟ ಜಾತಿ, ಪಂಗ ಡದ ಜಾತಿ ಪ್ರಮಾಣಪತ್ರ, ವಾಸಸ್ಥಳ ದೃಢೀ ಕರಣ, ವಂಶವೃಕ್ಷ, ಗೇಣಿ, ಹಿಡುವಳಿದಾರರ ದೃಢೀಕರಣಕ್ಕೆ ಪಡೆಯುತ್ತಿದ್ದ 15 ರೂ. ಶುಲ್ಕ ವನ್ನು 25 ರೂ.ಗೆ ಹೆಚ್ಚಿಸಲಾಗಿದೆ. ವಿದ್ಯಾರ್ಥಿ ಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು 25 ರೂ. ಪಾವತಿಸಬೇಕಾಗಿದೆ.

ಎಲ್ಲೆಲ್ಲಿ: ಮೈಸೂರು ನಗರದಲ್ಲಿ 6 ಸ್ಥಳ ಗಳಲ್ಲಿ ವಿವಿಧ ಪ್ರಮಾಣ ಪತ್ರ ನೀಡುವ ಕೌಂಟರ್ ತೆರೆಯಲಾಗಿದೆ. ತಾಲೂಕಿನಲ್ಲಿ 3 ನಾಡಕಚೇರಿಗಳಲ್ಲಿ ವಿವಿಧ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಮಿನಿವಿಧಾನ ಸೌಧದಲ್ಲಿರುವ ಕೌಂಟರ್, ವರುಣಾ, ಇಲ ವಾಲ, ಜಯಪುರ ನಾಡಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸ್ಪಂದನ ಕಚೇರಿಯಲ್ಲಿ ರೈತರು ಆರ್‍ಟಿಸಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳನ್ನು ಪಡೆಯ ಬಹುದಾಗಿದೆ. ಮೈಸೂರಿನ ಜಯನಗರ, ರಾಮಕೃಷ್ಣನಗರ ವೃತ್ತದ ಪಾಲಿಕೆ ವಲಯ ಕಚೇರಿ, ಯಾದವಗಿರಿ ಪಾಲಿಕೆ ವಲಯ ಕಚೇರಿ, ಹೆಬ್ಬಾಳ್ ಅಂಬೇಡ್ಕರ್ ಸಮು ದಾಯ ಭವನ, ಅಂಬೇಡ್ಕರ್ ವೃತ್ತ (ಎಫ್‍ಟಿಎಸ್ ವೃತ್ತ)ದ ಬಳಿ ಇರುವ ವಲಯ ಕಚೇರಿಯಲ್ಲಿ ತೆರೆಯಲಾಗಿರುವ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ 35 ಬಗೆಯ ಸೇವೆಗಳನ್ನು(ಪ್ರಮಾಣ ಪತ್ರ) ಪಡೆಯ ಬಹುದಾಗಿದೆ. ಈ ಎಲ್ಲಾ ಕೇಂದ್ರಗಳಿಂದ ದಿನÀಕ್ಕೆ 1200ರಿಂದ 1500 ಆರ್‍ಟಿಸಿಗೆ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ವಿವಿಧ ಪ್ರಮಾಣ ಪತ್ರಕ್ಕೆ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.

– ಎಂ.ಟಿ.ಯೋಗೇಶ್ ಕುಮಾರ್

Translate »