ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಲಕರಣೆ ವಿತರಿಸಿದ ಶಾಸಕ ರಾಮದಾಸ್
ಮೈಸೂರು

ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಲಕರಣೆ ವಿತರಿಸಿದ ಶಾಸಕ ರಾಮದಾಸ್

January 4, 2019

ಮೈಸೂರು: ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ವತಿ ಯಿಂದ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು, ವಿಶೇಷಚೇತನ ಮಕ್ಕಳಿಗೆ ಅಗತ್ಯ ಸಾಧನಗಳನ್ನು ವಿತರಿಸಿದರು.

ಮೈಸೂರಿನ ಕುವೆಂಪುನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಎಸ್‍ಎಸ್‍ಎಲ್‍ಸಿ ಫಲಿತಾಂಶ ದಲ್ಲಿ ಸಾಧನೆ ಕುರಿತು ಸರ್ಕಾರಿ, ಅನು ದಾನಿತ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯೋಪಾದ್ಯಾಯ ರೊಂದಿಗೆ ಸಂವಾದ ನಡೆಸಿದ ನಂತರ ರಾವiದಾಸ್, ಮೆದುಳಿನ ನಿಶದ್ವತೆ, ಬಹು ವಿಕಲತೆ, ಶ್ರವಣದೋಷ, ಅಲ್ಪ ದೃಷ್ಟಿ ದೋಷ, ಅಂದತ್ವ ಹೊಂದಿರುವ 40 ವಿಶೇಷಚೇತನ ಮಕ್ಕಳಿಗೆ ಅಗತ್ಯವಾದ ಬ್ರೈಲ್ ಕಿಟ್, ಶ್ರವಣೋಪಕರಣ, ಸಿಪಿ ಚೇರ್, ಎಂಆರ್ ಕಿಟ್ ಮತ್ತಿತರ ಸಾಧನ ಗಳನ್ನು ವಿತರಿಸಿದರಲ್ಲದೆ, ಈ ಎಲ್ಲಾ ಮಕ್ಕ ಳನ್ನು ತಜ್ಞ ವೈದ್ಯರ ತಪಾಸಣೆಗೆ ಒಳ ಪಡಿಸಿ, ಸೂಕ್ತ ಚಿಕಿತ್ಸೆ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಗಾರ ಆಯೋಜಿಸುವು ದಾಗಿ ಭರವಸೆ ನೀಡಿದರು.

ಮೈಸೂರಿನ ದಕ್ಷಿಣ ವಲಯ ವ್ಯಾಪ್ತಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಾದ ಹರ್ಷಿತಾ, ವಿಜಯ ರಾಜ್, ಲಕ್ಷ್ಮೀ, ಪಿ. ವಿಕಾಸ್, ಬಿ.ಸೂರ್ಯ, ಸಂದೀಪ್, ಯು. ಮಾದೇಶ, ಪಿ.ರಮ್ಯಾ, ವೈಷ್ಣವಿ, ಎಲ್. ರಕ್ಷಿತಾ, ಗವಿಸಿದ್ದ, ಎನ್.ಉದಯ್, ಮಾನಸ ಸೌಮ್ಯಾ, ಸಮರ್ಥ್ ಗೌಡ, ಅರ್ಪಿತಾ, ಬಿಬಿ ಆಯಿಷಾ, ಕೆ.ಸಂಜೀವ, ಸಂದೇಶ್ ಬಿ.ಭಟ್, ನೀಕ್ಷಾ, ಕುಸುಮಾ, ರಶ್ಮಿತಾ, ಮೇಘ, ಶೈಲಜಾ, ವರ್ಷಿತಾ ರಾಜ್, ತೇಜಸ್, ಪಾವನ, ಜೋಸ್ನ, ಎಸ್. ಪ್ರಿಯಾ, ಮೊಹಮ್ಮದ್ ಇಸ್ಮಾಯಿಲ್ ಶರೀಫ್, ಸಮರ್ಥ್ ಗುಮಥಿ, ಗೌತಮ್, ಸಂಕಲ್ಪ್, ಕೃತಿ, ಹಿತೇಶ್, ರಕ್ಷಾ, ಸುನಿತಾ, ಅನಮ್ಯ, ಶ್ರೇಯಸ್, ಮಹೇಶ್ ಹಾಗೂ ಫಾಲ್ಗುಣಿ ಸೌಲಭ್ಯ ಪಡೆದರು.ಈ ಸಂದರ್ಭದಲ್ಲಿ ಜಿಎಸ್‍ಎಸ್ ಫೌಂಡೇಷನ್ ಅಧ್ಯಕ್ಷ ಶ್ರೀಹರಿ, ಸೇಫ್ ವೀಲ್ಸ್ ಮಾಲೀಕ ಬಿ.ಎಸ್.ಪ್ರಶಾಂತ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಮತಾ, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್, ಪ್ರಭುಸ್ವಾಮಿ, ವೀಣಾ, ಇಂದಿರಾ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪ್ರಸಕ್ತ ಸಾಲಿನಲ್ಲಿ ಶೇ.100ರಷ್ಟು ಎಸ್‍ಎಸ್‍ಎಲ್‍ಸಿ ಫಲಿತಾಂಶ ಸಾಧಿಸುವ ಆಶಯದೊಂದಿಗೆ `ನಮ್ಮೆಲ್ಲರ ಚಿತ್ತ ನೂರರ ಗುಣಾತ್ಮಕ ಫಲಿ ತಾಂಶದತ್ತ’ ಶೀರ್ಷಿಕೆಯಡಿ ಮುಖ್ಯಶಿಕ್ಷಕ ರೊಂದಿಗೆ ಸಂವಾದ ನಡೆಸಿದ ರಾಮ ದಾಸ್, ಮಕ್ಕಳು ಯಾವುದೇ ಆತಂಕ ವಿಲ್ಲದೆ ಪರೀಕ್ಷೆಗೆ ಹಾಜರಾಗುವಂತೆ ಅವರಿಗೆ ಮನೋಸ್ಥೈರ್ಯ ತುಂಬಬೇಕು. ವಿಶೇಷ ತರಗತಿ ಇನ್ನಿತರ ಚಟುವಟಿಕೆ ಮೂಲಕ ಶೇ.100ರಷ್ಟು ಫಲಿತಾಂಶ ಸಾಧಿಸುವ ಗುರಿಯೊಂದಿಗೆ ಶಿಕ್ಷಕರು ಪರಿಶ್ರಮಿಸಬೇಕೆಂದು ತಿಳಿಸಿದರು.

Translate »