ಇಂದಿನಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ
ಮೈಸೂರು

ಇಂದಿನಿಂದ ಸ್ವಚ್ಛ ಸರ್ವೇಕ್ಷಣೆ ಆರಂಭ

January 4, 2019

ಮೈಸೂರಿಗೆ ಯಾವುದೇ ಸಂದರ್ಭ ಬರಬಹುದು ತಂಡ

ಮೈಸೂರು: ನಗರಗಳ ಸ್ವಚ್ಛತೆ ನಿರ್ವಹಣೆಯನ್ನು ಓರೆಹಚ್ಚಿ, ಪ್ರೋತ್ಸಾಹಿಸುವ ಸ್ವಚ್ಛ ಸರ್ವೇಕ್ಷಣೆ ನಾಳೆ (ಜ.4) ಆರಂಭವಾಗಲಿದ್ದು, ಮೈಸೂರು ಮತ್ತೆ ಪ್ರಥಮ ಸ್ಥಾನಕ್ಕೇರಲು ಸಜ್ಜಾಗಬೇಕಿದೆ. ಈ ಬಾರಿ ರಾಷ್ಟ್ರದ 4237 ನಗರಗಳಲ್ಲಿ ಸ್ವಚ್ಛ ಸರ್ವೇಕ್ಷಣೆ ನಡೆಯ ಲಿದ್ದು, ಸುಮಾರು 40 ಕೋಟಿಗೂ ಹೆಚ್ಚು ಸಾರ್ವಜನಿಕರ ಸ್ವಚ್ಛ ಜ್ಞಾನದ ಪರೀಕ್ಷೆಯೂ ಆಗಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಸ್ವಚ್ಛ ಸರ್ವೇಕ್ಷಣಾ ತಂಡ ಮೈಸೂರಿಗೆ ಆಗಮಿಸುವುದು ಯಾವಾಗ? ಎಂಬುದು ತಿಳಿದಿಲ್ಲ. ಆದರೆ ಇಂದೇ ಬಂದರೂ ಅವರಿಗೆ ಸ್ವಚ್ಛ ನಗರದ ದರ್ಶನ ಮಾಡಿಸಲು ಸಜ್ಜಾಗಬೇಕು. ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವ ಚಿಂತನೆಯನ್ನೂ ಮಾಡಬಾರದು. ನಗರಪಾಲಿಕೆ, ಸ್ವಚ್ಛತಾ ರಾಯಭಾರಿಗಳು, ಸಂಘ-ಸಂಸ್ಥೆಗಳು, ಉದ್ಯಮಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಜನಪ್ರತಿನಿಧಿಗಳು ಸೇರಿದಂತೆ ಮೈಸೂರಿನ ಪ್ರತಿಯೊಬ್ಬ ಪ್ರಜೆಯೂ ತಮ್ಮ ಕರ್ತವ್ಯ ನಿರ್ವಹಿಸಬೇಕು. ಮತ್ತೆ ಮೈಸೂರು ಪ್ರಥಮ ಸ್ವಚ್ಛ ನಗರವಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ಶ್ರಮಿಸುವ ಸಂಕಲ್ಪ ತೊಡಬೇಕು.

ಮೊದಲಿಗೆ ಪ್ರತಿಯೊಬ್ಬರಲ್ಲೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಬೇಕು. ಜೊತೆಗೆ ಹಿಂದಿನ ವರ್ಷದ ವೈಫಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆ ವಹಿಸಬೇಕು. 2015 ಹಾಗೂ 16ರಲ್ಲಿ ಪ್ರಥಮ ಸ್ಥಾನದಲ್ಲಿದ್ದ ಮೈಸೂರು, 2017ರಲ್ಲಿ 5ನೇ ಸ್ಥಾನಕ್ಕಿಳಿದು, ಹ್ಯಾಟ್ರಿಕ್ ವಂಚಿತ ವಾಯಿತು. 2018ರಲ್ಲಿ ಮಧ್ಯಮ ನಗರಗಳ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದರೂ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನದಲ್ಲಿದೆ. ರ್ಯಾಂಕಿಂಗ್ ಕಳೆದುಕೊಳ್ಳಲು ಸಾಕಷ್ಟು ಕಾರಣಗಳಿವೆ. ಅದರಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯಲ್ಲಿ ವಿಫಲವಾಗಿದ್ದು, ಶೌಚಾಲಯ ನಿರ್ಮಾಣದಲ್ಲಿ ಗುರಿ ಸಾಧಿಸದ್ದು ಪ್ರಮುಖ ಕಾರಣಗಳೆಂದು ಹೇಳಲಾಗಿತ್ತು. ಹೀಗೆ ವೈಫಲ್ಯಗಳನ್ನು ಹುಡುಕು ವುದರ ನಡುವೆಯೇ ಮತ್ತೊಮ್ಮೆ ಸ್ವಚ್ಛ ಸರ್ವೇಕ್ಷಣೆಗೆ ಸಿದ್ಧರಾಗುವ ಕಾಲ ಬಂದಿದೆ.

Translate »