ಮೈಸೂರು: ಸ್ವಚ್ಛತೆಯ ಸಂದೇಶ ದೊಂದಿಗೆ ಹಲವು ಮಾಹಿತಿ ಹೊಂದಿರುವ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್‍ನ ವಿಶಿಷ್ಟ ಕ್ಯಾಲೆಂಡರ್ ಅನ್ನು ಗುರು ವಾರ ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸಲಾಯಿತು.
ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮ ಚಂದ್ರರಾವ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ 2019ರ ಸಾಲಿನ ವಿಶಿಷ್ಟ ಕ್ಯಾಲೆಂಡರ್ ಅನ್ನು ಪೌರಕಾರ್ಮಿಕರು ಬಿಡುಗಡೆಗೊಳಿಸಿದರು. ಹಸಿ ಮತ್ತು ಒಣ ಕಸಗಳ ವಿಧಗಳು ಹಾಗೂ ಅವುಗಳ ವಿಂಗಡಿಸುವುದ ರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರ ಹೊಂದಿ ರುವ ಕ್ಯಾಲೆಂಡರ್ ಇದಾಗಿದೆ. ಇದರೊಂದಿಗೆ ಮೈಸೂರು ಮಹಾನಗರ ಪಾಲಿಕೆಯ ಎಲ್ಲಾ 65 ವಾರ್ಡ್‍ಗಳ ಪಾಲಿಕೆ ಸದಸ್ಯರು ಹಾಗೂ ಅವರ ಮೊಬೈಲ್ ಸಂಖ್ಯೆಗಳನ್ನು ಕ್ಯಾಲೆಂಡರ್ ನಲ್ಲಿ ನೀಡಲಾಗಿದೆ. ಇದಕ್ಕೂ ಮುನ್ನ ಮಹಾನಗರ ಪಾಲಿಕೆ ಪೌರಕಾರ್ಮಿಕರಾದ ಲಕ್ಷ್ಮಮ್ಮ, ಶಂಕರಮ್ಮ, ಮರಿಯಮ್ಮ, ವಾಸು ಹಾಗೂ ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ ಆದ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಹೆಚ್.ವಿ.ರಾಜೀವ್, ಪೌರಕಾರ್ಮಿಕರ ಗೌರವಯುತ ಜೀವ ನಕ್ಕೆ ಹಾಗೂ ಅವರ ಆರ್ಥಿಕ ಪ್ರಗತಿಗೆ ಸಮಾಜ ನೆರ ವಾಗಬೇಕು. ಇಂತಹ ಕೆಲಸದಿಂದ ಮಾತ್ರವೇ ಸ್ವಚ್ಛ ಭಾರತಕ್ಕೆ ಶ್ರಮಿಸುವ ಪೌರಕಾರ್ಮಿಕರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಮಾತನಾಡಿ, ಬಸ್ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಹೋಟೆಲ್, ಸಿನಿಮಾ ಮಂದಿರಗಳಲ್ಲಿ ಕಸವನ್ನು ಎಲ್ಲೆಂದರಲ್ಲಿ ಬಿಸಾಡುವುದು ಅನೈರ್ಮಲ್ಯಕ್ಕೆ ಎಡೆ ಮಾಡಿಕೊಡುತ್ತದೆ. ಈ ಬಗ್ಗೆ ಎಷ್ಟು ಜಾಗೃತಿ ಮೂಡಿಸಿ ದರೂ ಸ್ಪಂದಿಸುವ ಜನತೆಯ ಸಂಖ್ಯೆ ಮಾತ್ರ ವಿರಳ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ ದಂಡ ವಿಧಿಸಿದರೆ ಸುಧಾರಣೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಸಮಾಜ ಸೇವಕರಾದ ಕೆ.ರಘುರಾಂ ವಾಜ ಪೇಯಿ ಮಾತನಾಡಿ, ಪೌರ ಕಾರ್ಮಿಕರ ಮಕ್ಕಳು ಪೌರ ಕಾರ್ಮಿಕರಾಗದೇ ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆ ಅಲಂಕರಿಸುವಂತಾಗಬೇಕು. ಹಣ-ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯ. ಸ್ವಚ್ಛತೆ ಇದ್ದರೆ ಆರೋಗ್ಯ ಕಾಪಾಡಲು ಪೂರಕ ವಾತಾವರಣ ಇರಲಿದ್ದು, ಅಂತಹ ಸ್ವಚ್ಛತೆ ಕಲ್ಪಿಸುವ ಪೌರ ಕಾರ್ಮಿಕರ ಶ್ರಮ ಶ್ಲಾಘನೀಯ. ಮೈಸೂರಿನ ಪೌರ ಕಾರ್ಮಿ ಕರ ಶ್ರಮದಿಂದ ಮೈಸೂರು ನಗರ ಸ್ವಚ್ಛವಾಗಿ ಹೊರ ಹೊಮ್ಮಿದೆ. ನಾಗರಿಕರು ಕಸ ನೀಡುವಾಗ ಹಸಿ ಮತ್ತು ಒಣ ಕಸಗಳನ್ನು ಬೇರ್ಪಡಿಸಿ ನೀಡುವ ಮೂಲಕ ಪೌರ ಕಾರ್ಮಿಕ ರಿಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ವಂಗೀಪುರ ಮಠದ ಶ್ರೀಇಳೈ ಆಳ್ವಾರ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಬಿಎಸ್‍ಪಿ ನಗರಾಧ್ಯಕ್ಷ ಡಾ.ಬಸವರಾಜ್, ಲಯನ್ಸ್ ಕ್ಲಬ್‍ನ ಕಾರ್ಯ ದರ್ಶಿ ಯೋಗ ನರಸಿಂಹ (ಮುರಳಿ), ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್, ಬಿಜೆಪಿ ಯುವ ಮುಖಂಡರಾದ ಕಡಕೊಳ ಜಗದೀಶ್, ಕೇಬಲ್ ಮಹೇಶ್, ರಂಗನಾಥ್, ಶ್ರೀಕಾಂತ್ ಕಶ್ಯಪ್, ಜಯಸಿಂಹ, ಶ್ರೀಧರ್, ಅಪೂರ್ವ ಸುರೇಶ್ ಮತ್ತಿತರರು ಹಾಜರಿದ್ದರು.