ಮೈಸೂರಿನ ಶಿಕ್ಷಕ ನಾಗರಾಜ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆ
ಮೈಸೂರು

ಮೈಸೂರಿನ ಶಿಕ್ಷಕ ನಾಗರಾಜ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆ

January 4, 2019

ಮೈಸೂರು: ಮನಸ್ಸಿನಲ್ಲಿ ಮೂಡಿದ ಭಾವನೆಗೆ ಕುಂಚದ ಮೂಲಕ ಚಿತ್ರರೂಪ ನೀಡುವುದು ಕಷ್ಟಕರ ವಾದರೂ ಆ ಕಷ್ಟದ ಕೆಲಸಕ್ಕೆ ಇಷ್ಟದ ಲೇಪನಕೊಡುವವರೇ ಚಿತ್ರ ಕಲಾವಿದರು. ಇತರ ಸನ್ನಿವೇಶ, ಸಂಗತಿಗಳು ಇವರ ಕೈಯ್ಯಲ್ಲಿ ಅದ್ಭುತ ಕಲಾಕೃತಿಯಾಗಿ ಮೂಡುತ್ತವೆ. ತಮ್ಮ ಕಲಾ ನೈಪುಣ್ಯತೆಯಿಂದ ಎಲ್ಲರ ಮನಗೆದ್ದ ಮೈಸೂರಿನ ಶ್ರೀಪರಮಹಂಸ ವಿದ್ಯಾನಿಕೇತನ ಶಾಲೆಯ ಶಿಕ್ಷಕ ನಾಗ ರಾಜ್ ಕೂಡ ಒಬ್ಬರು.
ಇವರು ತಮ್ಮ ಕಲಾಪ್ರತಿಭೆಯಿಂದ ಜ.11 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಗೆ ಆಯ್ಕೆಯಾ ಗಿದ್ದು, ತಮ್ಮ ಕಲೆಯನ್ನು ಅನಾವರಣ ಗೊಳಿಸಲು ಸಜ್ಜಾಗಿದ್ದಾರೆ.

ಈಗಾಗಲೇ ಹಲವು ಚಿತ್ರಕಲಾ ಸ್ಪರ್ಧೆ ಗಳಲ್ಲಿ ಭಾಗವ ಹಿಸಿ ಬಹುಮಾನ ಗಳಿಸಿರುವ ಎಂ. ನಾಗರಾಜ್, ಎಂಎಸ್ಸಿ ಪದವೀ ಧರರಾಗಿದ್ದು, ಸದ್ಯ ಹೆಬ್ಬಾಳ್‍ನ ಸಂಕ್ರಾಂತಿ ಸರ್ಕಲ್ ಬಳಿಯಿರುವ ಶ್ರೀ ಪರಮಹಂಸ ವಿದ್ಯಾನಿಕೇತನ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮೂಲತಃ ತಿ.ನರಸೀ ಪುರ ತಾಲೂಕಿನ ಸೋಸಲೆ ನಿವಾಸಿ, ಹಾಲಿ ಹೆಬ್ಬಾಳ್‍ನಲ್ಲಿ ವಾಸವಾಗಿಸುವ ಮಹದೇವ ಆಚಾರ್ ಮತ್ತು ಪುಟ್ಟತಾಯಮ್ಮ ಅವರ ಪುತ್ರರಾಗಿದ್ದು, ಸಹೋದರ ಮಂಜು, ಸಹೋದರಿ ಮಂಗಳ ಇದ್ದಾರೆ.

ತಂದೆಯೇ ಪ್ರೇರಣೆ: ತಂದೆಯ ಮರ ದಲ್ಲಿ ಚಿತ್ರ ಕೆತ್ತನೆ ಕೆಲಸ ಮಾಡುವುದನ್ನು ಕಂಡ ನಾಗರಾಜ್, ತನ್ನ 12ನೇ ವಯಸ್ಸಿ ನಲ್ಲೇ ತಾನೂ ಚಿತ್ರವನ್ನು ಬಿಡಿಸಬೇಕೆಂಬ ಹಂಬಲ ಹುಟ್ಟಿಕೊಂಡಿತು. ಅಂದಿನಿಂದ ಚಿತ್ರ ಬಿಡಿಸಲು ಆರಂಭಿಸಿ, ಹಲವು ಚಿತ್ರಗಳನ್ನು ಬಿಡಿಸಿದರು. ನಂತರದಲ್ಲಿ ಶಾಲೆಗಳಲ್ಲಿ ಚಿತ್ರ ಕಲಾ ಸ್ಪರ್ಧೆ ಏರ್ಪಡಿಸಿದ್ದರೆ ತಮ್ಮ ಚಿತ್ರಕಲೆ ಗಳನ್ನು ಪ್ರದರ್ಶಿಸಲು ಆರಂಭಿಸುತ್ತಿದ್ದರು.

ನಾಗರಾಜ್ ಕುಂಚದಲ್ಲಿ ಅರಳಿದ ಚಿತ್ರ: ಮತ್ತಷ್ಟು ಶ್ರಮಪಟ್ಟು ರಂಗೋಲಿಯಲ್ಲಿ ನವಿಲು, ಕರ್ನಾಟಕ, ಇಂಡಿಯಾ ಮ್ಯಾಪ್ ಸೇರಿದಂತೆ ಮತ್ತಿತರೆ ಚಿತ್ರಗಳನ್ನು ಜನರ ಮೆಚ್ಚುಗೆಗೆ ಪಾತ್ರವಾದವು. ಅಲ್ಲದೆ, ಉಪ್ಪು ಮತ್ತು ಬಣ್ಣದಿಂದ ಕ್ರಿಯೇಟಿವ್ ಆಗಿ ನವಿಲು, ಶಾಲಾ ಲೋಗೊ ಚಿತ್ರಣ, ಭಾರತ, ಕರ್ನಾ ಟಕ ನಕ್ಷೆ. ಹಾಗೆಯೇ ಗಣರಾಜ್ಯೋತ್ಸವ ದಿನ ತಮ್ಮ ಶಾಲೆಯಲ್ಲಿ ದೆಹಲಿಯ ಕೆಂಪು ಕೋಟೆ ಚಿತ್ರ ಬಿಡಿಸಿದ್ದು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಸ್ತನ ಕ್ಯಾನ್ಸರ್ ಕುರಿತು ಅರಿವು: ಮಹಿಳೆ ಯರ ಉಡುಗೆ-ತೊಡುಗೆ, ಆಹಾರ ಕ್ರಮ ದಿಂದ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿದ್ದು, ಈ ಕುರಿತು ಅರಿವು ಮೂಡಿಸಲು ಮಹಿಳೆ ಚಿತ್ರ ಬಿಡಿಸಿ ದಸರಾ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ. ಹಾಗೆಯೇ, ಲೈನ್ ಡ್ರಾಯಿಂಗ್, ಟ್ರೆಡಿಷನಲ್, ಕ್ರಿಯೇಟಿವ್ ಪೇಯಿಂಟಿಂಗ್, ವ್ಯಕ್ತಿ ಚಿತ್ರಣ, ಮಣ್ಣಿನÀ ವಿವಿಧ ಕಲಾ ಕೃತಿಗಳು, ಥರ್ಮಕೋಲ್‍ನಿಂದ ಬಿಡಿಸಿದ ತಾಜ್‍ಮಹಲ್, ನಂದಿ ಮೂರ್ತಿ, ಮೈಸೂರಿನ ದೊಡ್ಡಗಡಿಯಾರ, ಚುಕ್ಕಿಯಲ್ಲಿ ಕೃಷ್ಣನ ಚಿತ್ರ ಚೆನ್ನಾಗಿ ಮೂಡಿ ಬಂದಿದೆ.

ಬಹುಮಾನ: 2010ರಲ್ಲಿ ಮೈಸೂರಿನ ಕಲಾಮಂದಿರ, 2010-11ರಲ್ಲಿ ಮಡಿಕೇರಿ ಯಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆ, 2012 ಮತ್ತು 2013ರಲ್ಲಿ ಬೆಂಗಳೂರಿನಲ್ಲಿ 108 ವತಿಯಿಂದ ಆಯೋಜಿಸಿದ್ದ ಪೇಯಿಂಟ್ ಸ್ಪರ್ಧೆಯಲ್ಲಿ ಪ್ರಥಮ, 2015-16ರಲ್ಲಿ ಮೈಸೂ ರಿನ ವಸ್ತು ಪ್ರದರ್ಶನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಥರ್ಮಕೋಲ್‍ನಿಂದ ಬಿಡಿಸಿದ್ದ ದೊಡ್ಡ ಗಡಿಯಾರ ಚಿತ್ರಕ್ಕೆ ಪ್ರಥಮ ಬಹು ಮಾನ ಹಾಗೂ ಮಂಡ್ಯದಲ್ಲಿ ನಡೆದ ಚಿತ್ರ ಕಲಾ ಸ್ಪರ್ಧೆಯಲ್ಲಿ ಉತ್ತಮ ಚಿತ್ರಕಲಾ ಮಾರ್ಗದರ್ಶಕ ಶಿಕ್ಷಕ ಎಂಬ ಪ್ರಶಸ್ತಿಯೂ ಲಭಿಸಿದೆ. ಒಟ್ಟಾರೆ ಇದುವರೆಗೆ 10ಕ್ಕೂ ಪ್ರಶಸ್ತಿಗಳು ನಾಗರಾಜ್‍ಗೆ ಲಭಿಸಿವೆ.

Translate »