ಪ್ರತಿ ತಿಂಗಳ ಮೊದಲ, 3ನೇ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಪ್ರತಿ ತಿಂಗಳ ಮೊದಲ, 3ನೇ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ

January 4, 2019

ಮೈಸೂರು: ಮೈಸೂರು ನಾಗರಿಕರ ಆರೋಗ್ಯ ಕಾಪಾ ಡುವ ನಿಟ್ಟಿನಲ್ಲಿ `ಆರೋಗ್ಯ ಮೈಸೂರು’ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೊದಲ ಮತ್ತು 3ನೇ ಭಾನುವಾರಗಳಂದು ಮೈಸೂರಿನಲ್ಲಿ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮೈಸೂರು ಕೃಷ್ಣರಾಜಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಮೈಸೂರಿನ ಅನೇಕರು ಮಕ್ಕಳಿಂದ ವೃದ್ಧ ರವರೆಗೆ ಅವರಿಗೇ ಅರಿವಿಲ್ಲದೆ ಕಾಡುತ್ತಿ ರುವ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಹಾಗೂ ನಾನಾ ರೋಗಗಳಿಂದ ಮೈಸೂರಿಗರನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ. ಹೀಗಾಗಿ ಮೈಸೂರಿಗರ ಆರೋಗ್ಯ ಕಾಪಾಡಲು ಮುಂದಿನ ಐದು ವರ್ಷಗಳವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಮನುಷ್ಯ ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪ್ರಯತ್ನವಿದು ಎಂದರು.

`ಆರೋಗ್ಯ ಮೈಸೂರು’ ಕಾರ್ಯಕ್ರಮಕ್ಕೆ ಡಿ.26ರಂದು ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬದಂದು ಚಾಲನೆ ನೀಡಲಾಗಿದ್ದು, ಅಂದು ಜಯನಗರದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 1303 ಜನರಿಗೆ ನಾನಾ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗಿದೆ. ಜ.6 ರಂದು ಮೈಸೂರಿನ ವಿದ್ಯಾರಣ್ಯಪುರಂ ಒಕ್ಕಲಿಗರ ಸಮುದಾಯ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ 5 ವರ್ಷಗಳ ಕಾಲ ನಡೆಯುವ ಆರೋಗ್ಯ ತಪಾಸಣಾ ಶಿಬಿರ ಗಳಲ್ಲಿ ಬೆಂಗಳೂರು ಮತ್ತು ಮೈಸೂರಿನ ಸರ್ಕಾರಿ ಹಾಗೂ ಹೆಸರಾಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ನಾನಾ ಸಂಘ ಸಂಸ್ಥೆಗಳು ಸಹಕಾರ ನೀಡುತ್ತಿವೆ. ಅಲೋಪತಿ, ಆಯುರ್ವೇದ, ಸಿದ್ದ, ನ್ಯಾಚುರೋಪತಿ ಔಷಧಿಗಳನ್ನು ಉಚಿತ ವಾಗಿ ನೀಡುವ ಯೋಜನೆ ಇದು. ಶಸ್ತ್ರ ಚಿಕಿತ್ಸೆ ಅಗತ್ಯವಾದರೆ ಅವರಿಗೆ ಉಚಿತವಾಗಿ ದೊರಕಿಸಿಕೊಡಲಾಗುವುದು ಎಂದು ಹೇಳಿದರು.

ಉಚಿತ ಆರೋಗ್ಯ ಶಿಬಿರದ ಜೊತೆಗೆ ಯೋಗ, ಅಗ್ನಿಹೋತ್ರ, ಸೂರ್ಯಪಾನ, ಆಹಾರ ಪದ್ಧತಿ, ಜೀವನ ಶೈಲಿ ಕುರಿ ತಂತೆಯೂ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. `ಆರೋಗ್ಯ ಮೈಸೂರು’ ಶಾಶ್ವತ ಕಚೇರಿ ಯನ್ನು ತೆರೆಯಲಾಗುತ್ತಿದ್ದು, ಶಿಬಿರದ ಬಗ್ಗೆ ಪ್ರತಿಯೊಂದನ್ನು ದಾಖಲು ಮಾಡ ಲಾಗುವುದು ಎಂದರು.

ಆಸರೆ, ಸೇಫ್ ವೀಲ್ಸ್, ಜಿಎಸ್‍ಎಸ್, ವೈಷ್ಣವಿ ಸ್ವೀಟ್ಸ್ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರಗಳನ್ನು ನಡೆಸಲಾಗುತ್ತದೆ ಎಂದೂ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಎಸ್‍ಎಸ್‍ನ ಶ್ರೀಹರಿ, ಸೇಫ್ ವೀಲ್ಸ್‍ನ ಬಿ.ಎಸ್. ಪ್ರಶಾಂತ್, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ. ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‍ಬಾಬು ಉಪ ಸ್ಥಿತರಿದ್ದರು.

Translate »