ಮೈಸೂರು: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಮಹಿಳೆಯರಿಬ್ಬರು ಪ್ರವೇಶ ಮಾಡಿದ್ದನ್ನು ಖಂಡಿಸಿ ಗುರುವಾರ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿದ್ದರೆ, ರಾಜ್ಯದ ವಿವಿಧ ಭಾಗ ಗಳಲ್ಲೂ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮೈಸೂರಿನಲ್ಲೂ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯ ಕಹಳೆ ಮೊಳಗಿಸಿದರು.
ಕರ್ನಾಟಕ ದಕ್ಷಿಣ ಪ್ರಾಂತದ ಶ್ರೀ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ನೇತೃತ್ವ ದಲ್ಲಿ ಮೈಸೂರಿನ ಗಾಂಧಿ ಚೌಕದಲ್ಲಿ ಜಮಾಯಿಸಿದ ವಿಶ್ವ ಹಿಂದೂ ಪರಿಷತ್, ಬಿಜೆಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದ ಕೇರಳ ಸರ್ಕಾರವೇ ಮಹಿಳೆಯರು ದೇವಾ ಲಯ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಕೇರಳದ ಕಮ್ಯು ನಿಸ್ಟ್ ಸರ್ಕಾರ, ಆ ಮೂಲಕ ಕೋಟ್ಯಾಂ ತರ ಆಸ್ತಿಕರ ಹಾಗೂ ಅಯ್ಯಪ್ಪಸ್ವಾಮಿ ಭಕ್ತರ ಧಾರ್ಮಿಕ ನಂಬಿಕೆಯನ್ನು ಘಾಸಿ ಗೊಳಿಸಿದೆ. ಸುಪ್ರಿಂಕೋರ್ಟ್ ಆದೇಶ ಪಾಲಿ ಸುವ ನೆಪದಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳೊಂದಿಗೆ ಕೇರಳ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ದೂರಿದರು.
ನ್ಯಾಯಾಲಯದ ಆದೇಶದ ಬಳಿಕ ಕೇರಳ ಮಾತ್ರವಲ್ಲದೆ, ದೇಶದಾದ್ಯಂತ ಕ್ಷೇತ್ರದ ಆಚಾರ-ವಿಚಾರ ಉಳಿಸಿ ಪಾವಿತ್ರ್ಯ ಕಾಪಾ ಡುವ ಸಂಬಂಧ ಲಕ್ಷಾಂತರ ಭಕ್ತರು ರಸ್ತೆಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಲ್ಲಿ ಮಹಿಳೆಯರೂ ಪಾಲ್ಗೊಳ್ಳುತ್ತಿದ್ದಾರೆ. ಅಲ್ಲದೆ, ಕಳೆದ ಡಿ.26ರಂದು ಶಬರಿಮಲೆ ಕರ್ಮ ಸಮಿತಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ 26 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಪಾಲ್ಗೊಂಡು ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅವಕಾಶ ನೀಡದಂತೆ ಒತ್ತಾಯಿಸಲಾಗಿದೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಕೇರಳ ಸರ್ಕಾರ ನಾಸ್ತಿಕ ಮಹಿಳೆಯರಿಬ್ಬರನ್ನು ದೇವಾ ಲಯ ಪ್ರವೇಶಿಸಲು ವ್ಯವಸ್ಥೆ ಮಾಡಿ ಹಿಂದೂ ಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಎಲ್ಲಾ ವರ್ಗದ ಧಾರ್ಮಿಕ ಭಾವನೆ ಗಳನ್ನು ಗೌರವಿಸಿ ಅವುಗಳಿಗೆ ಧಕ್ಕೆಯಾಗ ದಂತೆ ಎಚ್ಚರ ವಹಿಸಬೇಕು. ಆದರೆ ಕೇರಳ ಸರ್ಕಾರ ಹಿಂದೂ ಧಾರ್ಮಿಕ ವಿಚಾರ ಗಳನ್ನು ಬಲಿ ಕೊಡಲು ವ್ಯವಸ್ಥಿತ ಸಂಚು ನಡೆಸುತ್ತಿದೆ ಎಂದು ಆಪಾದಿಸಿದರು.
ಬಿಜೆಪಿ ಮುಖಂಡರೂ ಆದ ಶಾಸಕ ಎಲ್.ನಾಗೇಂದ್ರ ಮಾತನಾಡಿ, ಶಬರಿಮಲೆ ವಿಚಾರದಲ್ಲಿ ಕೇರಳ ಸರ್ಕಾರ ಹಿಂದೂ ಗಳ ಭಾವನೆಗಳನ್ನು ಕೆರಳಿಸಲು ಮುಂದಾ ಗಿದೆ. ನಾನೂ 18 ವರ್ಷ ಶಬರಿಮಲೆ ಯಾತ್ರೆ ಕೈಗೊಂಡಿದ್ದು, ಅಯ್ಯಪ್ಪಸ್ವಾಮಿ ಸನ್ನಿಧಿಯ ಸಂಪ್ರ ದಾಯ, ಆಚಾರ-ವಿಚಾರಗಳು ಸಾವಿರಾರು ವರ್ಷಗಳಿಂದ ಆಚರಣೆಯಲ್ಲಿವೆ. ಹೀಗಾಗಿ ನ್ಯಾಯಾಲಯ ಕೂಡ ಧಾರ್ಮಿಕ ವಿಚಾರಗಳ ಬಗ್ಗೆ ಸೂಕ್ಷ್ಮವಾಗಿ ಚಿಂತನೆ ನಡೆಸಿ ಘಾಸಿ ಯಾಗದಂತೆ ತೀರ್ಪು ನೀಡಬೇಕು. ಈ ವಿಚಾರದಲ್ಲಿ ಅಗತ್ಯವಿದ್ದರೆ ರಾಜ್ಯ ಬಂದ್‍ಗೂ ಸಿದ್ಧವಿದ್ದೇವೆ ಎಂದು ಎಚ್ಚರಿಸಿದರು.
ಕೆಲಕಾಲ ಮಾನವ ಸರಪಳಿ: ಗಾಂಧಿಚೌಕ ಸುತ್ತುವರೆದು ಕೆಲಕಾಲ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು, `ಶಬರಿ ಮಲೆ ಸಂಸ್ಕøತಿ-ಸಂಪ್ರದಾಯ ಉಳಿಸಿ’ ಘೋಷಣೆಯೊಂದಿಗೆ ಕೇರಳ ಸರ್ಕಾರದ ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವ ಹಿಂದೂ ಪರಿಷತ್ (ವಿಹೆಚ್‍ಪಿ) ಮುಖಂಡರಾದ ಬಸವರಾಜು, ಸವಿತಾ ಘಾಟ್ಕೆ, ಬಿಜೆಪಿ ನಗರಾಧ್ಯಕ್ಷ ಡಾ.ಬಿ. ಹೆಚ್.ಮಂಜುನಾಥ್, ಪಾಲಿಕೆ ಸದಸ್ಯ ರಾದ ಯು.ಎಸ್.ಸುಬ್ಬಯ್ಯ, ಸತೀಶ್, ಬಿಜೆಪಿ ಮುಖಂಡರಾದ ಹೇಮಂತ್ ಕುಮಾರ್‍ಗೌಡ, ಪ್ರಸನ್ನಗೌಡ, ಮೈ.ಕ. ಪ್ರೇಮ್‍ಕುಮಾರ್, ಸು.ಮುರಳಿ, ಸಂಸದ ಪ್ರತಾಪ್ ಸಿಂಹ ಪತ್ನಿ ಅರ್ಪಿತಾ ಸಿಂಹ, ಹಿನಕಲ್ ಗ್ರಾಪಂ ಸದಸ್ಯೆ ನೇಹಾ ನಯನ, ಶ್ರೀ ಶಬರಿ ಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಸಂಚಾ ಲಕ ಚೇತನ್ ಮಂಜುನಾಥ್ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವಕೀಲ ಪಡುವಾರಹಳ್ಳಿ ರಾಮಕೃಷ್ಣ ಅರೆಬೆತ್ತಲಾಗಿ ಏಕಾಂಗಿ ಪ್ರತಿಭಟನೆ
ಮೈಸೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧಿಕಾರಿ ಗಳು ನಾಯಕ ಸಮುದಾಯದ ಹಲವು ಮಂದಿಗೆ ವಿನಾಕಾರಣ ನೋಟೀಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋ ಪಿಸಿ ವಕೀಲ ಪಡುವಾರಹಳ್ಳಿ ರಾಮಕೃಷ್ಣ ಅರೆಬೆತ್ತಲಾಗಿ ಗುರುವಾರ ಏಕಾಂಗಿ ಪ್ರತಿ ಭಟನೆ ನಡೆಸಿದರು.
ಮೈಸೂರಿನ ನಜರ್‍ಬಾದಿನಲ್ಲಿರುವ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ ರಾಮಕೃಷ್ಣ, ನಾನು ಎಸ್‍ಟಿ ಸಮುದಾಯಕ್ಕೆ ಸೇರಿಲ್ಲ ಎಂದು ವ್ಯಕ್ತಿಯೊ ಬ್ಬರು ನಿರ್ದೇಶನಾಲಯಕ್ಕೆ ದೂರು ನೀಡಿದ್ದು, ವಿಚಾರಣೆಗೆ ಆಗಮಿಸಲು ಅಧಿಕಾರಿಗಳು ನೋಟೀಸ್ ಕಳುಹಿಸಿದ್ದಾರೆ. ಹೀಗೆ ಖಾಸಗಿ ವ್ಯಕ್ತಿ ನೀಡುವ ದೂರಿನ ಹಿನ್ನೆಲೆ ಯಲ್ಲಿ ಏಕಾಏಕಿ ನೋಟೀಸ್ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜೊತೆಗೆ ಪರಿವಾರ ಮತ್ತು ತಳವಾರ ವ್ಯಾಪ್ತಿಗೆ ಬರುವ ನಾಯಕ ಸಮುದಾ ಯದ ಹಲವು ಮಂದಿಗೂ ಜಾತಿಗೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾ ಗುವಂತೆ ನೋಟೀಸ್ ನೀಡಿದ್ದಾರೆ. ಆದರೆ ಪರಿವಾರ ಮತ್ತು ತಳವಾರ ಪದಗಳು ನಾಯಕ ಜನಾಂಗದ ಪರ್ಯಾಯ ಪದ ಗಳೆಂದು ಪರಿಗಣಿಸಲಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಈ ಪದಗಳನ್ನು ಎಸ್‍ಟಿಗೆ ಸೇರ್ಪಡೆಗೊಳಿಸಲು ಅಂಗೀ ಕರಿಸಿದ್ದೂ ಆಗಿದೆ ಎಂದು ತಿಳಿಸಿದರು.
ಇದೀಗ ಈ ಸಂಬಂಧ ಅಧಿಸೂಚನೆ ಹೊರಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲದೆ, ರಾಮನಾಯಕ ಪ್ರಕರಣದಲ್ಲಿ ಹೈ ಕೋರ್ಟ್ ಸಹ ಪರಿವಾರ ಮತ್ತು ತಳ ವಾರ ಪದಗಳು ನಾಯಕ ಜನಾಂಗದ ಪರ್ಯಾಯ ಪದಗಳೆಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದೆಲ್ಲಾ ತಿಳಿದಿ ದ್ದರೂ ಅಧಿಕಾರಿಗಳು ನಾಯಕ ಸಮುದಾಯ ದವರಿಗೆ ವಿನಾಕಾರಣ ನೋಟೀಸ್ ನೀಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿ ಸಿದರು. ಮನವೊಲಿಸಿದರೂ ಪ್ರತಿಭಟನೆ ಕೈಬಿಡದ ರಾಮಕೃಷ್ಣರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.