ಹಗಲು ಬಿರುಬಿಸಿಲು, ರಾತ್ರಿ ಮೈಕೊರೆವ ಚಳಿ…
ಮೈಸೂರು

ಹಗಲು ಬಿರುಬಿಸಿಲು, ರಾತ್ರಿ ಮೈಕೊರೆವ ಚಳಿ…

January 4, 2019

ಮೈಸೂರು: ಹಗಲಿನಲ್ಲಿ ಬಿರು ಬಿಸಿಲು, ರಾತ್ರಿಯಲ್ಲಿ ಮೈಕೊರೆಯುವ ಚಳಿ. ಇದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಹವಾಮಾನ.

ಉತ್ತರದಿಂದ ದಕ್ಷಿಣಕ್ಕೆ ವಿಪರೀತ ಶೀತಗಾಳಿ ಬೀಸು ತ್ತಿರುವ ಪರಿಣಾಮ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ದಾಖಲೆಯ ಚಳಿ ಉಂಟಾಗಿದೆ. ಹಾಗೆಯೇ ಮೈಸೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಚಳಿ ಹೆಚ್ಚಾಗಿದೆ. ಅಲ್ಲದೆ ವಾತಾವರಣದಲ್ಲಿ ಮೋಡ ಗಳು ಇಲ್ಲದಿರುವ ಕಾರಣ ಚಳಿಯ ಪ್ರಮಾಣ ಮತ್ತಷ್ಟು ಜಾಸ್ತಿಯಾಗಿದೆ.

ಚಳಿಯಿಂದ ನಡುಗಿರುವ ಜನ, ಸ್ವೆಟರ್, ಟೊಪ್ಪಿ ಇನ್ನಿತರ ರಕ್ಷಣಾ ಪರಿಕರಗಳ ಮೊರೆ ಹೋಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಅನ್ವಯ ಮೈಸೂರು ಜಿಲ್ಲೆಯಲ್ಲಿ ಜ.6ರವರೆಗೆ ಗರಿಷ್ಠ 28ರಿಂದ 29 ಡಿಗ್ರಿ, ಕನಿಷ್ಠ 14ರಿಂದ 16 ಡಿಗ್ರಿ ಉಷ್ಣಾಂಶ, ಗಾಳಿಯ ತೇವಾಂಶ ಬೆಳಿಗ್ಗೆ ಶೇ.70ರಿಂದ 75, ಮಧ್ಯಾಹ್ನ ಶೇ.35ರಿಂದ 40ರಷ್ಟು ಇರುವ ಸಾಧ್ಯತೆಯಿದೆ. ಹಾಗೆಯೇ ಕೊಡಗು ಜಿಲ್ಲೆಯಲ್ಲಿ ಗರಿಷ್ಠ 24ರಿಂದ 25 ಡಿಗ್ರಿ, ಕನಿಷ್ಠ 11ರಿಂದ 12 ಡಿಗ್ರಿ ಉಷ್ಣಾಂಶ, ಗಾಳಿಯ ತೇವಾಂಶ ಬೆಳಿಗ್ಗೆ ಶೇ.80ರಿಂದ 85, ಮಧ್ಯಾಹ್ನ ಶೇ.45ರಿಂದ 50, ಚಾಮರಾಜನಗರದಲ್ಲಿ ಗರಿಷ್ಠ 29ರಿಂದ 30 ಡಿಗ್ರಿ, ಕನಿಷ್ಠ 15ರಿಂದ 16 ಡಿಗ್ರಿ ಉಷ್ಣಾಂಶ, ಗಾಳಿಯ ತೇವಾಂಶ ಬೆಳಿಗ್ಗೆ ಶೇ.75ರಿಂದ 80, ಮಧ್ಯಾಹ್ನ ಶೇ.55ರಿಂದ 60 ಹಾಗೂ ಮಂಡ್ಯದಲ್ಲಿ ಗರಿಷ್ಠ 29 ರಿಂದ 30 ಡಿಗ್ರಿ, ಕನಿಷ್ಠ 14ರಿಂದ 15 ಡಿಗ್ರಿ ಉಷ್ಣಾಂಶ, ಗಾಳಿಯ ತೇವಾಂಶ ಬೆಳಿಗ್ಗೆ ಶೇ.65ರಿಂದ 70, ಮಧ್ಯಾಹ್ನ ಶೇ.40ರಿಂದ 45ರಷ್ಟು ಇರುವ ಸಾಧ್ಯತೆ ಇದೆ ಎಂದು ಮೈಸೂರಿನ ನಾಗನಹಳ್ಳಿ ಹವಾಮಾನ ಸೇವಾ ಕೇಂದ್ರ ತಿಳಿಸಿದೆ.

ಮೈಸೂರಿನ ಕಿರಂಗೂರು, ಕೊಡಗಿನ ಕುಶಾಲನಗರ ಸೇರಿದಂತೆ ಕೆಲ ಪ್ರದೇಶಗಳಲ್ಲಿ 15 ದಿನಗಳ ಹಿಂದೆ ಮಳೆಯಾಗಿತ್ತು. ಆ ಸಂದರ್ಭದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ನಂತರದ ದಿನಗಳಲ್ಲಿ ಮೋಡಗಳು ಕಡಿಮೆ ಯಾಗಿದ್ದರಿಂದ ಉಷ್ಣಾಂಶದ ಪ್ರಮಾಣ ಇಳಿಮುಖ ವಾಗಿ, ಗಾಳಿಯ ತೇವಾಂಶ ಹೆಚ್ಚಾಗಿದೆ. ಮುಂದಿನ ಮೂರ್ನಾಲ್ಕು ದಿನಗಳವರೆಗೆ ಮೋಡದ ವಾತಾವರಣವೇ ಇರುವುದಿಲ್ಲ.

ಗಾಳಿಯು ಗಂಟೆಗೆ ಮೈಸೂರು ಜಿಲ್ಲೆಯಲ್ಲಿ ಶೂನ್ಯ ಕಿ.ಮೀ, ಕೊಡಗಿನಲ್ಲಿ 4ರಿಂದ 5 ಕಿ.ಮೀ, ಚಾಮರಾಜನಗರದಲ್ಲಿ 5ರಿಂದ 6 ಕಿ.ಮೀ, ಮಂಡ್ಯದಲ್ಲಿ 4ರಿಂದ 5 ಕಿ.ಮೀ ವೇಗದಲ್ಲಿ ಬೀಸುವು ದರಿಂದ ಚಳಿಯಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತೆ ವಹಿಸುವುದು ಒಳ್ಳೆಯದು.

ಹಾಸನ, ಚಿಕ್ಕಮಗಳೂರು, ಗದಗ, ಧಾರವಾಡ, ವಿಜಾಪುರ, ಬೀದರ್, ಕಲಬುರ್ಗಿ, ತುಮಕೂರು, ಉತ್ತರ ಕನ್ನಡ, ಬೆಳಗಾವಿ, ಬಾಗಲ ಕೋಟೆ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಜನವರಿ 10ರವರೆಗೂ ಮೈಕೊರೆಯುವ ಚಳಿ ಮುಂದುವರಿಯಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಮಂಡಳಿ ಮಾಹಿತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Translate »