ಎಐಸಿಸಿ ವಕ್ತಾರರಾಗಿ ಐಶ್ವರ್ಯಾ ಮಹದೇವ್ ನೇಮಕ  ಇವರು ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ
ಮೈಸೂರು

ಎಐಸಿಸಿ ವಕ್ತಾರರಾಗಿ ಐಶ್ವರ್ಯಾ ಮಹದೇವ್ ನೇಮಕ ಇವರು ಮಾಜಿ ಶಾಸಕ ದಿ.ಮಂಚನಹಳ್ಳಿ ಮಹದೇವ್ ಪುತ್ರಿ

January 4, 2019

ಮೈಸೂರು: ಕೆ.ಆರ್.ನಗರ ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಹದೇವ್ ಅವರು ಎಐಸಿಸಿ ವಕ್ತಾರರಾಗಿ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸೂಚನೆಯಂತೆ ಈ ನೇಮಕ ಮಾಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐಶ್ವರ್ಯಾ ಮಹದೇವ್ ಅವರಿಗೆ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ಕಲ್ಪಿಸುವ ಭÀರವಸೆ ಯನ್ನು ಅಂದು ಸಿದ್ದರಾಮಯ್ಯ ನೀಡಿದ್ದರು. ಅದರಂತೆ ಈಗ ಐಶ್ವರ್ಯಾ ಮಹದೇವ್ ಎಐಸಿಸಿ ವಕ್ತಾರರಾಗಿ ನೇಮಕಗೊಂಡಿ ದ್ದಾರೆ. ಇತ್ತೀಚೆಗಷ್ಟೆ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇಮಕಗೊಂಡಿದ್ದರು. ಇದರೊಂದಿಗೆ ಮೈಸೂರಿನ ಇಬ್ಬರು ಮಹಿಳಾ ಮಣಿಗಳು ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನಗಳನ್ನು ಅಲಂಕರಿಸಿದಂತಾಗಿದೆ.

Translate »