ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ  ಸೇವಾ ಹಿರಿತನ ಪರಿಗಣ ಸುವಂತ ಆಗ್ರಹ
ಮೈಸೂರು

ಪಿಯು ಅತಿಥಿ ಉಪನ್ಯಾಸಕರ ನೇಮಕಾತಿಗೆ  ಸೇವಾ ಹಿರಿತನ ಪರಿಗಣ ಸುವಂತ ಆಗ್ರಹ

June 25, 2018

ಮೈಸೂರು: ಈ ಬಾರಿ ಸರ್ಕಾರಿ ಪಿಯು ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ಸಂಬಂಧ ಕಡ್ಡಾಯವಾಗಿ ಸೇವಾ ಹಿರಿತವನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಕೈಗೊಂಡಿದೆ.

ಮೈಸೂರಿನ ಜಿಲ್ಲಾ ನ್ಯಾಯಾಲಯದ ಎದುರಿನ ಪಾರ್ಕ್‍ನಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದೆ. ಈ ಬಾರಿ ಅತಿಥಿ ಉಪನ್ಯಾಸಕರಾಗಿ ನೇಮಕಾತಿಯಾಗುವ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸಬೇಕು. ತಿಂಗಳಿಗೆ 30 ಸಾವಿರ ಗೌರವ ಸಂಭಾವನೆ ನಿಗದಿಗೊಳಿಸಬೇಕು, ಈ ವೇತನವನ್ನು ವರ್ಷ ಪೂರ್ತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲು ಸಭೆಯಲ್ಲಿ ಒಕ್ಕೂರಲ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷ.ಕೆ.ಸೋಮಶೇಖರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.ಸಭೆಯ ನಂತರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಗೃಹ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗಿದೆ. ಟಿ.ಕೆ.ಬಡಾವಣೆಯಲ್ಲಿರುವ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಅವರ ಕಚೇರಿಗೂ ತೆರಳಿ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಮರಿತಿಬ್ಬೇಗೌಡ, ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವೆಯ ಹಿರಿತನ ಹಾಗೂ ಭದ್ರತೆ ಒದಗಿಸುವ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಮೌಖಿಕ ಭರವಸೆ ನೀಡಿದ್ದಾರೆ ಎಂದು ಸೋಮಶೇಖರ್ ತಿಳಿಸಿದ್ದಾರೆ.

ಈ ವೇಳೆ ಸಂಘದ ಉಪಾಧ್ಯಕ್ಷರಾದ ಡಾ.ಸುಮಿತ್ರ, ಸಂಘಟನಾ ಕಾರ್ಯದರ್ಶಿಗಳಾದ ಜಿ.ವಿ.ರಮೇಶ್, ಡಾ.ಬಿ.ನರಸಿಂಹಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಸ್.ಸ್ವಾಮಿ, ಕಾರ್ಯದರ್ಶಿ ಡಾ.ಸೋಮಣ್ಣ ಪಿರಿಯಾಪಟ್ಟಣ, ಮಹೇಶ್ ಪುಮ, ಎಂ.ಎಸ್.ಕೃಷ್ಣಮೂರ್ತಿ, ಹುಣಸೂರು ಷಣ್ಮುಗಂ, ಕೊಡಗು ಜಿಲ್ಲಾಧ್ಯಕ್ಷ ಶ್ಯಾಮ್‍ಪ್ರಸಾದ್, ಕೆ.ಆರ್.ನಗರ ದಿವಾಕರ್, ಗುಂಡ್ಲುಪೇಟೆ ಗಂಗಾಧರ್, ಚಾಮರಾಜನಗರ ಮಲ್ಲಿಕಾರ್ಜುನಸ್ವಾಮಿ ಮಂತಾದವರಿದ್ದರು.

Translate »