ಇಂದಿರಾ ಕ್ಯಾಂಟೀನ್‍ನಲ್ಲಿ ಕಳವು ಇಬ್ಬರು ಖದೀಮರ ಬಂಧನ
ಮೈಸೂರು

ಇಂದಿರಾ ಕ್ಯಾಂಟೀನ್‍ನಲ್ಲಿ ಕಳವು ಇಬ್ಬರು ಖದೀಮರ ಬಂಧನ

June 25, 2018

ಮೈಸೂರು: ಇಂದಿರಾ ಕ್ಯಾಂಟೀನ್ ಗಾಜಿನ ಬಾಗಿಲು ಒಡೆದು ಬೆಲೆ ಬಾಳುವ ಸಾಮಗ್ರಿಗಳನ್ನು ಕದ್ದು ಪರಾರಿಯಾಗಿದ್ದ ಇಬ್ಬರು ಖದೀಮರನ್ನು ಉದಯಗಿರಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಗೌಸಿಯಾ ನಗರದ ಸದ್ದಾಂ(25), ಕೆ.ಎನ್.ಪುರದ ನಿವಾಸಿ ಮಹಮ್ಮದ್ ಸಾದಿಕ್ (28) ಬಂಧಿತರಾಗಿದ್ದು, ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜೂ.4 ರಂದು ರಾತ್ರಿ ಕ್ಯಾಂಟೀನ್‍ನ ಗಾಜಿನ ಬಾಗಿಲು ಒಡೆದು ಒಳ ನುಗ್ಗಿರುವ ಈ ಖದೀಮರು 8 ಸ್ಟೀಲ್ ನಲ್ಲಿ, 8 ಸ್ಟೀಲ್ ಸೌಟು, 4 ಸ್ಟೀಲ್ ಪಾತ್ರೆ ಹಾಗೂ 80 ಪ್ಲಾಸ್ಟಿಕ್ ತಟ್ಟೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಘಟನೆ ಕ್ಯಾಂಟೀನ್ ಹೊರಗಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು.

ನಂತರ ಖದೀಮರು ಸಿಸಿಟಿವಿ ಮಾನಿಟರ್ ಒಡೆದು, ಹೊರಗೆ ಬಿಸಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಎರಡು ವರ್ಷದ ಹಿಂದೆ ಸದ್ದಾಂನನ್ನು ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಶಂಕಾಸ್ಪದ ಓಡಾಟದ ಮೇಲೆ ಸಿಆರ್‍ಪಿಸಿ ಸೆಕ್ಷನ್ 109 ಕಲಂ ಅಡಿಯಲ್ಲಿ ಬಂಧಿಸಲಾಗಿತ್ತು. ಮತ್ತೊರ್ವ ಆರೋಪಿ ಮಹಮ್ಮದ್ ಸಾದಿಕ್ ಮೇಲೆ ನಜರ್‍ಬಾದ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಉದಯಗಿರಿ ಪೊಲೀಸರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

Translate »